ಇದು ಪುರಾಣ ಗ್ರಂಥವಲ್ಲ, ಪ್ರಮಾಣ ಗ್ರಂಥ. ಪ್ರಪಂಚೀಕರಣದ ಪ್ರವಾಹದಲ್ಲಿ ಸಹಜ ಜೀವನದ ಮೌಲ್ಯಗಳೇ ಸಾಮೂಹಿಕವಾಗಿ ಆತಂಕಕ್ಕೆ ಒಳಗಾಗಿರುವ ಇಂದಿನ ಕಳವಳಕಾರಿ ಸನ್ನಿವೇಶದಲ್ಲಿ ಇಂತಹ ಚಿಂತನಶೀಲ ಗ್ರಂಥಗಳು ನಮಗೆ ಸಾಂತ್ವನ ನೀಡುತ್ತವೆ. ಈ ಗ್ರಂಥದ ಲೇಖಕರು ಇದನ್ನು ಬರೆಯುವ ಲೇಖನಿಯಲ್ಲಿ, ಕಾಗದದ ಹಾಳೆಯಲ್ಲಿ ಲಿಂ.ಪೂಜ್ಯಶ್ರೀಗಳನ್ನೇ ಕಂಡಿದ್ದಾರೆ. ತಾವು ಕಂಡ ಆ ಮಹಾದಾರ್ಶನಿಕ ಗುರುವಿನ ದರ್ಶನ ಓದುಗರಿಗೂ ದೊರೆಯುವಂತೆ ಮಾಡಿದ್ದಾರೆ.