
'ಇಲ್ಲಿಂದ ಮುಂದೆಲ್ಲ ಕಥೆ' ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಕಥಾಲೋಕದ ಚಾಚುಗಳ ಅತ್ಯುತ್ತಮ ಮಾದರಿಯಾಗಿದೆ. ಈ ಪ್ರಯತ್ನಕ್ಕೆ ಹುಡುಕಾಟಕ್ಕೆ ಎರಡು ಲಕ್ಷಣಗಳಿವೆ. ಒಂದು, ತಾತ್ವಿಕವಾಗಿ ಮತ್ತು ತಾಂತ್ರಿಕವಾಗಿ ಈ ತನಕದ ಕನ್ನಡ ಕಥಾಪರಂಪರೆಯ ಧಾತುಗಳನ್ನೆಲ್ಲ ಒಳಗೊಳ್ಳುವ ಹಂಬಲ ಮತ್ತೊಂದು, ಮಾನುಷಲೋಕವನ್ನು ಕರಾರುಗಳಿಲ್ಲದೆ ಒಳಗೊಳ್ಳುವ ತವಕ ಕಥೆಗಾರರಾಗಿ ಮೊದಲ ಸಂಕಲನದಿಂದಲೂ ರಘುನಾಥರು ಉಳಿಸಿಕೊಂಡು ಬಂದಿರುವ ಉತ್ಕಟತೆ ಮತ್ತು ತನ್ಮಯತೆ ಅವರನ್ನು ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರನ್ನಾಗಿಸಿವೆ. ಪ್ರತಿಭೆಯ ಜೊತೆಗೆ ಬರವಣಿಗೆಯಲ್ಲಿ ಅವಸರ ತೋರಿಸದೇ ಇವರು ಕಾಯ್ದುಕೊಂಡು ಬಂದಿರುವ ಸಂಯಮದ ಪಾತ್ರವೂ ದೊಡ್ಡದು. ರಘುನಾಥರ ಬರವಣಿಗೆಯ ಬಗ್ಗೆ ವ್ಯಕ್ತಿತ್ವದ ಬಗ್ಗೆ ನನಗೆ ಸಕಾರಣವಾದ ಮೆಚ್ಚುಗೆ. ಅವರ ಸಾಹಿತ್ಯಕ ಸಂವೇದನೆ ಮತ್ತು ಸಾಂಸ್ಕೃತಿಕ ಎಚ್ಚರ ಇದಕ್ಕೆ ಮುಖ್ಯ ಕಾರಣ, ಇತ್ತೀಚಿನ ದಿನಗಳಲ್ಲಿ ಸಮಕಾಲೀನ ಬೆಳವಣಿಗೆಗಳನ್ನು ಕುರಿತ ಅವರ ಪ್ರತಿಕ್ರಿಯೆಗಳ ಸ್ಪಷ್ಟತೆ ಮತ್ತು ನಿರ್ಭಯವಾದ ಮಾತುಗಳು ಎರಡೂ ಅವರ ಮೇಲಿನ ಭರವಸೆ ಮತ್ತು ಗೌರವವನ್ನು ಹೆಚ್ಚಿಸುತ್ತಿವೆ.
Category: | ಕನ್ನಡ |
Sub Category: | ಕಥಾ ಸಂಕಲನ |
Author: | ರಘುನಾಥ ಚ ಹ | Raghunatha Cha Ha |
Publisher: | ಅಂಕಿತ ಪುಸ್ತಕ | Ankita Pustaka |
Language: | Kannada |
Number of pages : | |
Publication Year: | 2025 |
Weight | 300 |
ISBN | 9789348262318 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ರಘುನಾಥ ಚ ಹ | Raghunatha Cha Ha |
0 average based on 0 reviews.