
ರತಿಯು ಬೇಲಿ ದಾಟಿ ನಾಲ್ಲು ದಾಪು ನಡೆದು ಬಾವಿ ತಲುಪಿ ಕಟ್ಟೆಯ ಹಸಿರು ಮೆತ್ತೆ ಮೇಲೆ ಕುಳಿತಳು. ಪಾಚಿಯನ್ನು ನೇವರಿಸಿದಳು. ಸಮಾಧಾನವೆನ್ನಿಸಿತು. ನೀರಿನ ಮೇಲೈಯು ಗಾಳಿಗೆ ಕಂಪಿಸುತ್ತ ತರಂಗಗಳು ಹುಟ್ಟಿ, ಬೆಳೆದು, ಮತ್ತೆ ಹುಟ್ಟಿ ಬೆಳೆದು ಅಂತರ್ಧಾನ ಆಗುವುದನ್ನು ನೋಡತೊಡಗಿದಳು. ಅದೊಂದು ಮುಗಿಯದ ವರ್ತುಲವಾಗಿ ಯಾವುದು ಶುರು, ಎಲ್ಲಿಗೆ ಕೊನೆ ಎಂದು ಅವಳಿಗೆ ಬಗೆಹರಿಯಲಿಲ್ಲ. ಬಿಸಿಲು ಇಳಿಯುತ್ತಿತ್ತು. ಕುಳಿತಿದ್ದ ರತಿ ಎದ್ದಳು. ಅವಳು ಇನ್ನೂ ನೀರಿನ ಮೈಯನ್ನೇ ನೋಡುತ್ತಿದ್ದಳು. ತಿಳಿಬಣ್ಣದ ನೀರು ಮರದ ನೆರಳು, ಸಂಜೆಯ ಛಾಯೆಯ ಜೊತೆ ಸೇರಿಕೊಂಡು ಕಪ್ಪಾಗಿ ಕಾಣುತ್ತಿತ್ತು. ರತಿಯ ಕಣ್ಣಿಗೆ ಗಳಿಗೆ ಗಳಿಗೆಗೂ ಆ ಕಪ್ಪು ಗಾಡವಾಗುತ್ತ ಹೋದಂತೆನಿಸಿ, ಒಂದು ಹಂತದಲ್ಲಿ ಎಲ್ಲ ಕಡೆ ಕಪ್ಪು ಆವರಿಸಿಕೊಂಡುಬಿಟ್ಟಿತು. ಆ ಕ್ಷಣ ಸುತ್ತಲ ಶಬ್ದಗಳೂ ಸದ್ದಡಗಿ, ಕತ್ತಲ ಸುರಂಗದೊಳಗೆ ಹೋಗುತ್ತಿರುವ ಅನುಭವವಾಯಿತಷ್ಟೆ,
Category: | ಕನ್ನಡ |
Sub Category: | ಕಾದಂಬರಿ |
Author: | ಜ ನಾ ತೇಜಶ್ರೀ | Ja Naa Tejashri |
Publisher: | Amulya pustaka |
Language: | Kannada |
Number of pages : | 396 |
Publication Year: | 2025 |
Weight | 600 |
ISBN | 97881989226365 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈಗ, ದೊಡ್ಡ ಮಾವಿನಮರದಿಂದ ಹೊಸಮನೆವರೆಗೆ ಅಚ್ಚುಕಟ್ಟಾದ ಸಪಾಟು ಮಣ್ಣಿನ ರಸ್ತೆಯಿದೆ. ಹಾಗಾಗಿ 'ದೊಡ್ಡಮನೆ'ಯ ರಸ್ತೆಯನ್ನು ಅಷ್ಟಾಗಿ ಯಾರೂ ಬಳಸುವುದಿಲ್ಲ, 'ದೊಡ್ಡಮನೆ'ಯ ಸುತ್ತಲಿನ ಅಷ್ಟೂ ಜಾಗದಲ್ಲಿ ಥರಾವರಿ ಗಿಡಗಂಟೆಗಳು, ಕಾಡುಮೊದೆ, ಕುರುಚಲು, ಮುಂಭಾಗದ ಮಾವಿನಮರ, ಹಿಂಭಾಗದ ಸೀಬೆಮರಗಳು ಹಾಗೇ ಇವೆ, ಕಾಲಕಾಲಕ್ಕೆ ಹಣ್ಣು ಬಿಡುತ್ತ, ಹಕ್ಕಿ, ಹುಳಹುಪ್ಪಟೆಗಳಿಗೆ ಆಶ್ರಯವಾಗಿ. ಮನೆ ಅಳಿದಂತೆ ಕಾಣುತ್ತದೆ. ಆ ಊರಿನ ಅವಶೇಷವನ್ನು ಹಿಂದಿನ ವೈಭೋಗವನ್ನು ಒಟ್ಟಿಗೆ ನೆನಪಿಸುತ್ತ, ಪೂರ್ವಕ್ಕೆ ಮುಖ ಮಾಡಿದ ಮನೆಯ ಬಲಭಾಗಕ್ಕೆ ಹಳೆಯ ದಾರಿ ಇದೆ. ಹಾದಿಯನ್ನೂ ಮುಚ್ಚಿಬಿಡುವಂತೆ ಅದರ ಅಕ್ಕಪಕ್ಕ ಕಾಫಿಗಿಡಗಳು ಒತ್ತರಿಸಿಕೊಂಡು ನಿಂತಿವೆ. ಅಲ್ಲೊಂದು ರಸ್ತೆ ಇತ್ತು ಎಂದು ಗೊತ್ತಿಲ್ಲದೆ ಹೋದರೆ ಅದು ಗೊತ್ತೇ ಆಗುವುದಿಲ್ಲ, ಮನುಷ್ಯನ ಮನಸ್ಸು ಎಲ್ಲವನ್ನೂ ಅಷ್ಟೊಂದು ಒತ್ತರಿಸಿದೆ, ಆಕ್ರಮಿಸಿದೆ ಅನ್ನುವುದಕ್ಕೆ ಸಾಕ್ಷಿಯೆಂಬಂತೆ! ರಸ್ತೆಯ ಕೊನೆಗೆ ಸ್ಮಶಾನ. ಮನೆಯ ಜೀವ, ಜೀವಂತಿಕೆಯಿಂದಲೇ ಸಾವಿನ ನಿರಂತರ ನಂಟು ಎನ್ನುವ ಹಾಗೆ....
ಕಣ್ಣಿಟ್ಟು ನೋಡಿದರೆ ಯಾರಿಗೂ ಕಾಣುವುದು, ಕಿವಿಗೊಟ್ಟು ಆಲಿಸಿದರೆ ಕರುಳು ಮಿಡಿಯುವುದು. ಮನೆ ಅಳಿಯುತ್ತದೆ, ಅದರೊಳಗಿನ ಬಾಳು? ಯಾರೂ ಅಳಿಯಬಹುದು, ಆದರೆ ದನಿ? ಮನೆಯ ಗೋಡೆ ಬಿರುಕಲ್ಲಿ ಅರಳೀಮರದ ಕೆಂಪು ಚಿಗುರು ತಲೆಯೆತ್ತಿ ಆಕಾಶದೆಡೆಗೆ ಚಾಚಿಕೊಂಡು ಮೇಲೇರುತ್ತಿದೆ.
ಜ ನಾ ತೇಜಶ್ರೀ | Ja Naa Tejashri |
0 average based on 0 reviews.