ನೀ ದೂರ ಹೋದಾಗ

Original price was: ₹ 220.Current price is: ₹ 187.

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications
(16 customer reviews)

SYNOPSIS

ಮಂಗಳೂರು ನಗರ ಹಲವು ಬದುಕುಗಳ ವಿವಿಧ್ಯಮಯ ನಗರ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಹಾಗೂ ಪಾಕ ವೈವಿಧ್ಯತೆಗಳನ್ನು ಹಿತವಾಗಿ ತನ್ನ ಜನರಿಗೆ ದೊರಕಿಸುವ ಉದಾರನಗರ ಎನಿಸಿಕೊಂಡಿದೆ. ಕಥೆಯ ನಾಯಕಿ ಇಂಥಹ ನಗರದಲ್ಲಿ ತನ್ನ ಬಾಲ್ಯವನ್ನು ಸ್ವೇಚೆಯಾಗಿ ಕಳೆದು, ಇದ್ದಕ್ಕಿದ್ದ ಹಾಗೆ ದೂರದ ಅರಬ್‌ ದೇಶಕ್ಕೆ ಪಯಣಿಸಿ ದುಡಿಯುವ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕುತ್ತಾಳೆ. ಒಂಟಿ ಮುಸ್ಲಿಂ ತರುಣಿ ದೂರದ ದುಬೈಯಲ್ಲಿ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾಳೆ ಎಂಬುದರ ಕುರಿತು ಯುವ ಕಾದಂಬರಿಕಾರ್ತಿ ಪೌಝಿಯ ಸಲೀಂ ಅವರು “ನೀ ದೂರ ಹೋದಾಗ” ಕೃತಿಯಲ್ಲಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

ABOUT AUTHOR

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಫೌಝಿಯಾ ಸಲೀಂರವರ ಹುಟ್ಟೂರು ಮಂಗಳೂರು. ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು, ಮಂಗಳೂರಿನ ಕಾಲೇಜು ಒಂದರಲ್ಲಿ ನಾಲ್ಕು ವರ್ಷಗಳ ಕಾಲ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಇವರು ದುಬೈನಲ್ಲಿ ವಾಸಿಸುತ್ತಿದ್ದು, ದುಬೈಯಲ್ಲಿರುವ ಕಂಪನಿಯೊಂದರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವ ಓದುಗರಿಗೆ ಇಷ್ಟವಾಗಬಹುದಾದ ಬರಹಗಳನ್ನು ಬರೆಯುವ ಫೌಝಿಯರವರು, "ಮನಸ್ಸಾರೆ'' ಹಾಗು "ನಿನ್ನನ್ನೇ ಪ್ರೀತಿಸುವೆ'' ಎರಡು ಕಿರುಕಾದಂಬರಿಗಳ    Read More...

Opinion of Others

There are no others opinion yet.

Customer Reviews

16 reviews for ನೀ ದೂರ ಹೋದಾಗ

  1. Rayeesa

    It’s a real story of a struggling woman we must read it… It deserves lots of appreciation and support

  2. Amritha Ammu (verified owner)

    ಧನ್ಯವಾದಗಳು fouzia. ನಿಮ್ಮ ಕಾದಂಬರಿ ತುಂಬ ಚೆನ್ನಾಗಿ ಮೂಡಿ ಬಂದಿದೆ.

  3. Amritha laxmi (verified owner)

    Really hats off for autor Fouzia saleem. ಒಬ್ಬ ಹೆಣ್ಣು ಮಗಳು ಸಮಾಜದಲ್ಲಿ ಅನುಭವಿಸುವ ಕಷ್ಟ ನೋವು ಸಮಾಜದ ಜನರ ಚುಚ್ಚು ಮಾತು ಎಲ್ಲವನ್ನೂ ಮೆಟ್ಟಿನಿಂತು ಮಾಡುವ ಸಾಧನೆ, ಹೆಣ್ಣು ಮಕ್ಕಳಿಗೆ ಧೈರ್ಯ ಸ್ಪೂರ್ತಿ ಎಲ್ಲವನ್ನೂ fouzia saleem ಅವರು ತಮ್ಮ ಬರವಣಿಗೆ ಮೂಲಕ ವ್ಯಕ್ತಪಡಿಸಿ ನನ್ನ ಮನಸನ್ನು ಗೆದ್ದಿದ್ದಾರೆ, ನಿಮ್ಮ ಬರವಣಿಗೆ ಹೀಗೆ ಮುಂದುವರಿಯಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ.all d best fouzi.

  4. Soni C Naik

    Very inspiring story. ಈ ಕಾದಂಬರಿಯಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದಂತಹ ವಿಷಯಗಳು ತುಂಬಾ ಇವೆ. ಒಂದು ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದೆ. Worth reading this book ♥️

  5. Syed Riyaz pasha

    ಮನೆಯಲ್ಲಿ ಹೆಣ್ಣು ಹುಟ್ಟಿದರೆ ಆಕಾಶವೆ ತಲೆಯ ಮೇಲೆ ಬಿದ್ದೊರ ಹಾಗೆ ಚಡಪಡಿಸುವ ಈ ಕಾಲದಲ್ಲಿ
    ಹೆಣ್ಣಿಗೆ ಪ್ರೋತ್ಸಾಹ.ಬೆಂಬಲಕ್ಕಿಂತ ಚುಚ್ಚು ಮಾತುಗಳೆ ಜಾಸ್ತಿ.ಅಂತಹದ್ರಲ್ಲಿ ಫೌಝಿಯಾ ಅವರು ಸಮಾಜದಲ್ಲಿ ಹೆಣ್ಣಿಗೆ ಸಮಾನ ಹಕ್ಕಿದೆ ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲಳು ಎಂದು ಸಾಧಿಸಿ ತೋರಿಸಿದ್ದಾರೆ.
    ಹೀಗೆ ನಿಮ್ಮ ಬರವಣಿಗೆ ವೇಗ ಮುಂದುವರೆಯಲಿ

  6. Kumar M G

    ನೀ ದೂರ ಹೋದಾಗ
    ಶೀರ್ಷಿಕೆಯನ್ನು ನೋಡಿದಾಗ ಯಾವುದೊ ಒಂದು ಪ್ರೇಮ ಕಾದಂಬರಿ ಇರಬಹುದು ಎಂದೆನಿಸಿತ್ತು ಆದರೆ ಅದು ಕೇವಲ ಪ್ರೇಮ ಕಾದಂಬರಿಯಾಗಿರದೆ ಒಬ್ಬ ಸಾಮಾನ್ಯ ಹೆಣ್ಣಿ ನ ಜೀವನದಲ್ಲಿ ನಡೆಯಬಹುದಾದ , ನಡೆದಂತಹ ನೈಜ ವಿಚಾರಗಳನ್ನು , ಘಟನಾವಳಿಗಳನ್ನು ನಮ್ಮ ಲೇಖಕಿಯವರು ಇಲ್ಲಿ ತೋರಿಸಿದ್ದಾರೆ. ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿ ಅನೇಕ ರೀತಿಯ ಕಷ್ಟ-ನಷ್ಟ , ನೋವು-ನಲಿವು , ಅವಮಾನಗಳನ್ನು ಎದುರಿಸಿ ಛಲದಿಂದ ಅವುಗಳನ್ನು ಮೆಟ್ಟಿ ನಿಂತು ಸರಿಗಟ್ಟಿ ಸಾಗರದಾಚೆಯ ದುಬೈ ಎಂಬ ನಗರಕ್ಕೆ ಹೋಗಿ ಜೀವನ ರೂಪಿಸಿಕೊಂಡ ಫೌಜಿಯ ಎಂಬ ಹೆಣ್ಣು ಮಗಳ ಸಾಹಸ ಯಶೋಗಾಥೆಯೆ ನೀ ದೂರ ಹೋದಾಗ. ಚಿಕ್ಕ ವಯಸ್ಸಿನಲ್ಲಿಯೇ ತಂದೆ ಪ್ರೀತಿಯಿಂದ ವಂಚಿತಳಾಗಿ ,ಸಂಬಂಧಿಕರ ಮನೆಯಲ್ಲಿ ಬೆಳೆದು ವಯಸ್ಸಿಗೆ ಬರುವ ಸಮಯದಲ್ಲಿ ಉಂಟಾದ ಅಣ್ಣನ ಮರಣದಿಂದಾಗಿ ಇಡೀ ಮನೆಯ ಜವಾಬ್ದಾರಿಯನ್ನು ಹೊರುವಂತಾಯಿತು . ಇದರ ನಡುವೆ ರಿಫಾಯಿಯ ಪ್ರೇಮದಿಂದಾದ ಅವಾಂತರಗಳು, ಒಂದ ಎರಡ ಹೇಳುತ್ತಾ ಹೋದರೆ ಮುಗಿಯದು. ಬಡತನ , ಚುಚ್ಚುಮಾತುಗಳು , ಅವಹೇಳನಗಳು , ಅಪಪ್ರಚಾರಗಳ ನಡುವೆಯೇ ತನ್ನ ಉನ್ನತ ಶಿಕ್ಷಣಾಭ್ಯಾಸವನ್ನು ಪೂರ್ಣಗೊಳಿಸಿ ಸ್ವಲ್ಪ ದಿನಗಳ ಮಟ್ಟಿಗೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ನಂತರ ದುಬೈನಲ್ಲಿನ ಒಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಜೀವನ ಸಾಗಿಸುತ್ತಿರುವ ಫೌಝಿಯಾಳು ನಡೆದು ಬಂದ ಹಾದಿ ಒಂದು ಮಾದರಿಯೇ ಸರಿ. ಒಟ್ಟಾಗಿ ಹೇಳುವುದಾದರೆ ಈ ಕಾದಂಬರಿಯು ಸ್ನೇಹ, ಪ್ರೀತಿ-ಪ್ರೇಮ,ಭಾವನೆ,ಬಡತನ, ಕಷ್ಚ, ನೋವು-ನಲಿವು , ಹಠ-ಛಲ, ಗುರಿ ಎಲ್ಲವನ್ನೂ ಒಳಗೊಂಡಿದೆ.

  7. Anil Shetty

    ಈ ಕಥೆಯನ್ನು ಒಂದು ಅದ್ಭುತವಾದ ಕಥೆ ಎಂದು ಹೇಳಿದರೆ ತಪ್ಪಾಗುತ್ತದೆ….
    ಯಾಕೆಂದರೆ ಇದು ಒಂದು ಕಾಲ್ಪನಿಕ ಕಥೆ ಅಥವಾ ಊಹಿಸಿಕೊಂಡು ಹೇಳುವಂತಹ ಕಥೆಯು ಅಲ್ಲ.
    ಒಬ್ಬ ಹೆಣ್ಣು ಮಗಳು ಒಬ್ಬಂಟಿಯಾಗಿ ಬದುಕಲು ಈ ಜಗತ್ತಿನಲ್ಲಿ ಅನುಭವಿಸುವ ಕಷ್ಟಗಳು ಏನು ಎಂಬುದು ಈ ಕಾದಂಬರಿಯ ಮೂಲಕ ವ್ಯಕ್ತವಾಗುತ್ತಿದೆ ಹಾಗೆಯೇ ತನಗಿದ್ದ ಕಷ್ಟ ನೋವುಗಳೆಲ್ಲವನ್ನು ಮೆಟ್ಟಿನಿಂತು ಮುಂದೆ ಬಂದ ಅವಳ ಸಾಧನೆಗೆ ನಾನು ಚಿರಋಣಿ, ಹಾಗೆಯೇ ನಿನ್ನ ಮನದೊಳಗಿನ ವಿಷಯಗಳನ್ನು ಕಾದಂಬರಿ ರೂಪಕ್ಕೆ ತಂದ ನಿನಗೂ ಹಾಗೂ ನಿನ್ನ ಭಾವನೆಗಳಿಗೂ ನಾನು ಸದಾ ಚಿರಋಣಿ 💐💐..

  8. Priyanka Alva (verified owner)

    ನೀನು ರಿಯಲಿ ಗ್ರೇಟ್ ಫೌಝಿ. ತುಂಬಾ ಧೈರ್ಯದವಳು ನೀನು. ಜೀವನದಲ್ಲಿ ಹೆಣ್ಣಾಗಿ ಹುಟ್ಟಿದ್ದು ತಪ್ಪು ಎಂದು ತುಂಬಾ ಸಲ ಕಥೆಯಲ್ಲಿ ಹೇಳಿದ್ದೀಯಾ, ಆದರೆ ಹೆಣ್ಣಾದರೂ ಜೀವನದಲ್ಲಿ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ನೀನೇ ಮಾದರಿ. ಹೊಸ ದೇಶಕ್ಕೆ ಹೋಗಿ, ಅಲ್ಲಿ ಕೆಲಸ ಹುಡುಕಿ ಸೆಟಲ್ ಆಗುವುದು ಎಂದರೆ ತಮಾಷೆಯ ವಿಷಯವಲ್ಲ. ಅಲ್ಲಿ ಕಷ್ಟ ಬಂದು, ನಿನ್ನ ಜೀವನದಲ್ಲಿ ಈ ಹಂತಕ್ಕೆ ತಲುಪಿರುವ ನಿನಗೆ ಹ್ಯಾಟ್ಸಾಫ್. ನಿಜವಾಗಿಯೂ ನಿನ್ನ ಧೈರ್ಯವನ್ನು ಮೆಚ್ಚಬೇಕಾಗಿದೆ. ನಿನ್ನ ಕಥೆಯಲ್ಲಿ ಎಷ್ಟು ಸತ್ಯವಿದೆ ಎಂದರೆ ಅದನ್ನು ಓದುವಾಗಲೇ ಕಣ್ಣೀರು ಬರುತ್ತದೆ. ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕಷ್ಟ ಇದ್ದೇ ಇದೆ. ಆದರೆ ನೀನು ಬಂದ ಕಷ್ಟವನ್ನು ಸಹಿಸಿಕೊಂಡು, ತಾಳ್ಮೆಯನ್ನು ಬಿಡದೆ, ಎಲ್ಲವನ್ನು ಮೆಟ್ಟಿ ನಿಂತ ನಿನಗೆ, ನನ್ನಲ್ಲಿ ಹೇಳಲು ಪದಗಳು ಸಿಗುತ್ತಿಲ್ಲ. ದಯವಿಟ್ಟು ಎಲ್ಲರೂ ಈ ಪುಸ್ತಕವನ್ನು ತೆಗೆದುಕೊಂಡು ಓದಿ. ನಿನ್ನ ಬಾಳು ಬಂಗಾರವಾಗಲಿ ಇನ್ನಷ್ಟು ಪುಸ್ತಕವನ್ನು ಬರೆಯುವಂತಾಗಲಿ. ನೀನು ಇಷ್ಟ ಪಟ್ಟ ಹುಡುಗ ಆಮೇಲೆ ನಿನ್ನ ಜೀವನ ಹೇಗೆ ಇತ್ತು ಎಂಬುದರ ಕಥೆಯು ಮುಂದೆ ಬರಲಿ ಎಂದು ಆಶಿಸುತ್ತೇನೆ. ವೆಲ್ಡನ್ ಫೌಝಿ. ಕೀಪ್ ಅಪ್ ದಿ ಗುಡ್ ವರ್ಕ್. ದೇವರು ನಿನಗೆ ಸಂಪತ್ತು ಸಂತೋಷ ಮತ್ತು ಯಶಸ್ಸನ್ನು ನೀಡಲಿ.

  9. Kumara Shettigar

    ಇಡೀ ದಿನ ಎಂಜಾಯ್ ಮಾಡಿಕೊಂಡು ಸಂತೋಷದಲ್ಲಿ ಊರಿಡೀ ಸುತ್ತುತ್ತಿರುವ ನಿಮಗೆ, ಇಷ್ಟೊಂದು ಅರ್ಥಪೂರ್ಣವಾಗಿ ಮತ್ತೊಬ್ಬರ ಮನಸ್ಸಿಗೂ ನಾಟುವಂತೆ, ಓದುವವರೂ ಆ ನೋವನ್ನು ಅನುಭವಿಸುವಂತೆ ಬರೆಯುವ ನಿಮ್ಮ ಬರವಣಿಗೆ ಶೈಲಿಗೆ ಸಮಯ ಯಾವಾಗ ಮೀಸಲಿಡುತ್ತೀರಾ?

  10. Hiremath Sunil

    I read few story it’s really nice my dear frnd . I wish u all the best and best of luck for yo ur future . 👏 nee dura hodaga nice book I can recommend everyone ..

  11. Veena

    . Thanks for fouzia coming to my house and giving me the books .it’s really a nice novel. All the best Fouzia keep glowing and growing , keep publishing more and more books of your inspiring stories.

  12. Praneetha Sunil

    ನೀ ದೂರ ಹೋದಾಗ ಶೀರ್ಷಿಕೆಯ ಹೆಸರು ತಿಳಿದು ಕತೆಯು ನೀನು ವಿದೇಶಕ್ಕೆ ಹೋದ ಬಗ್ಗೆ ಅಂತ ತಿಳಿದಿದ್ದೇ, ಆದರೆ ಜೀವನದಲ್ಲಿ ಮೇಲಿಂದ ಮೇಲೆ ಕಷ್ಟ ಪಟ್ಟು ಅದನ್ನು ಮೆಟ್ಟಿ ನಿಂತ ಛಲಗಾರ್ತಿಯ ಕಥೆ ಅಂತ ಆಮೇಲೆ ತಿಳಿಯಿತು. ತುಂಬ ಅದ್ಭುತವಾಗಿ ಮೂಡಿ ಬಂದಿದೆ. ಜೀವನದಲ್ಲಿ ಮೇಲಿಂದ ಮೇಲೆ ಕಷ್ಟಪಟ್ಬವರೇ ಮುಂದೊಂದು ದಿನ ತಾವು ಇಷ್ಟ ಪಟ್ಟ ಹಾಗೆ ಜೀವಿಸುತ್ತಾರೆ ಅದಕ್ಕೆ ನೀನೇ ಉದಾಹರಣೆ… ಛಲ, ತಾಳ್ಮೆ ಎಲ್ಲಾ ಹೆಣ್ಣು ಮಕ್ಕಳಲ್ಲಿ ಇರಬೇಕು. ನಿನಗೆ ಶುಭವಾಗಲಿ ಗೆಳತಿ……… ಮುಂದಿನ ಪುಸ್ತಕ ಬೇಗನೆ ಮುದ್ರಣವಾಗಲಿ……..

  13. YAMANOOR MADAR

    ಆತ್ಮೀಯ ವೀರಲೋಕ,

    ಫೌಝಿಯಾ ಮೇಡಂ ಬರೆದಿರುವ ಪುಸ್ತಕದ ಶಿರ್ಷಿಕೆ ಅದ್ಭುತ, ಈ ಪುಸ್ತಕವನ್ನು ನಾನು ಕೂಡ ಓದಿದೆನೆ. ಫೌಝಿಯಾ ಸಲೀಂ ಮೇಡಂ ಬರೆದಿರೋ ಈ ಒಂದು ಪುಸ್ತಕ ಮಹಿಳೆಯರಿಗೆ ಸ್ಪೂರ್ತಿದಾಯಕವಾಗುವುದು ಎಂಬುದು ನನ್ನ ಅಭಿಪ್ರಾಯ. ಕಾರಣ, ಅದರಲ್ಲಿ ಇರುವ ವಿಷಯ ಅವರ ಬಾಲ್ಯದ ಜೀವನದಿಂದ ಹಿಡಿದು ಇಲ್ಲಿಯವರೆಗೂ ಅವರು ನಡೆದು ಬಂದ ದಾರಿ, ಅವರ ಮೇಲೆ ಬೀರಿದ ಅವರೇ ನಂಬಿದ ಜನರ ಪ್ರಭಾವ ಮತ್ತು ಪರಿಣಾಮ, ಈ ನಾಟಕೀಯ ಮತ್ತು ಎಪ್ಪೂಗಟ್ಟಿದ ಸಮಾಜದಲ್ಲಿ ಒಂದು ಯುವತಿ ಒಬ್ಬ ಮಹಿಳೆಯಾಗಿ ಎದುರಿಸಿದ ಸವಾಲುಗಳು, ಸಮಸ್ಯೆಗಳು, ಕ್ಷಣಗಳು ಇವೆಲ್ಲವೂ ಈ ಪುಸ್ತಕದಲ್ಲಿ ರೋಚಕವಾಗಿ ಕಂಡು ಬರುತ್ತವೆ. ಇಂಥಹ ಲೇಖಕರು ಸ್ತ್ರೀವಾದಿಯಾಗಿ ಈ ಸಮಾಜದಲ್ಲಿ ಮಹಿಳೆಯರ ಪರವಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ. ಇವರ ಬರವಣಿಗೆಯ ಮೂಲಕ ಸಮಾಜದಲ್ಲಿ ನಡೆಯುವ ಅನೇಕ ವಿವಾದಾತ್ಮಕ, ವಿಶೇಷಾತ್ಮಕ ಸಮಸ್ಯೆಗಳಿಗೆ ಇಂತವರು ಉದಾಹರಣೆ ಮತ್ತು ಮಾದರಿಯಾಗಿ ಇರಲಿ ಎಂಬುದು ನನ್ನ ಅಭಿಪ್ರಾಯ.
    ಅವರಿಗೆ ಈ ಒಂದು ಪುಸ್ತಕವನ್ನು ಬರೆಯುವುದರಿಂದ ಹಿಡಿದು ಬಿಡುಗಡೆಯಾಗುವವರೆಗೂ ಅವರಿಗೆ ಪ್ರೋತ್ಸಾಹ, ಬೆಂಬಲ ನೀಡಿ ಪ್ರೀತೀ, ಸ್ನೇಹ ಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ, ನನ್ನ ಒಂದಿಷ್ಟು ಅಭಿಪ್ರಾಯಗಳನ್ನು ತಿಳಿಸಲು ಇಚ್ಚಹಿಸುತ್ತೇನೆ.

    ನಮಸ್ಕಾರ…🙏🙏🙏

    ಇಂತಿ ನಿಮ್ಮ ಪ್ರೀತಿಯ ಓದುಗ….

  14. Vidya shekar

    ಸಾಗರದಿಂದ ಆರಂಭವಾಗುವ ನಿಮ್ಮ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿದೆ.ಕಷ್ಟದ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ತುಂಬಾ ಸಹಾಯ ಮಾಡಿದ್ದಾರೆ. ಅದೆಲ್ಲವನ್ನು ನೀವು ಮಾರ್ಮಿಕವಾಗಿ ಬರೆದಿದ್ದೀರಿ. ನೀವು ಕಾದಂಬರಿಯಲ್ಲಿ ಬರೆಯುವ ಪದಗಳು ಸಿನಿಮಾವನ್ನು ನೋಡಿದಂತೆ ಒಂದು ಅನುಭವ ತರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಂಡಿರುವುದು ಅಣ್ಣ ತೀರಿಹೋದ ಸಂದರ್ಭ. ಅದನ್ನು ನೀವು ತುಂಬಾ ಎದೆಯಾಳದಿಂದ ಬರೆದಿದ್ದೀರಿ. ಅದು ನಮಗೆ ತುಂಬಾ ನೋವು ತರಿಸಿದೆ. ಆ ಸಾವಿನ ಮನೆಯಲ್ಲಿ ನಾವು ಇದ್ದಹಾಗೆ ಭಾವನೆ ಬರುತ್ತದೆ. ಬರವಣಿಗೆಯಲ್ಲಿ ಅದೇ ಮುಖ್ಯ. ಆ ದಾಟಿಯಲ್ಲಿ ಒಂದು ಕಡೆ ಎಲ್ಲಿಯಾದರೂ ಬರೆಯಿರಿ. ಅದು ತುಂಬಾ ಪರಿಣಾಮಕಾರಿಯಾಗಿ ಗೋಚರಿಸುತ್ತಾ ಉಂಟು. ಆ ಶೈಲಿ, ಆ ಭಾಷೆ, ಆ ಸಂದರ್ಭ ಅದೆಲ್ಲಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಮಗೆ ಶುಭವಾಗಲಿ.

  15. Rakshitha kottary

    Hi. ಸೂಪರ್ ಫೌಝಿಯಾ.. ನೀ ಬರೆದ ಪುಸ್ತಕದ ಶೀರ್ಷಿಕೆ ತುಂಬಾ ಅದ್ಭುತ ವಾಗಿದ್ದು. ಕಥೆ ಚೆನ್ನಾಗಿ ಮೂಡಿ ಬಂದಿದೆ.ಯಾಕೆಂದರೆ ಇದು ನೊಂದು _ಬೆಂದು ಹೋದ ದಿಟ್ಟ ಹೆಣ್ಣೋಬ್ಬಳ ಜೀವನದ ಹೋರಾಟದ ನೈಜ ಕಥೆ..ಇದೆ ತರ ಹೀಗೆ ನೂರಕ್ಕೂ ಹೆಚ್ಚು ಕಾದಂಬರಿ ಗಳನ್ನು ಬರೆಯಲಿ ಎಂದು ಆಶಯಿಸುತ್ತೆನೆ. All the best fouzi 💐💐

  16. Mohan Kumar T

    ಫೌಝಿಯಾ ಸಲೀಂ ರವರ ಕಾದಂಬರಿ “ನೀ ದೂರ ಹೋದಾಗ” ಇದು ಒಬ್ಬ ಹೆಣ್ಣೊಬ್ಬಳು ಸ್ವತಂತ್ರಕ್ಕಾಗಿ ಹೋರಾಡುವ ಜೀವನದ ಕಥಾನ ಎಂದರೆ ತಪ್ಪಾಗಲಾರದು. ತನಗಾಗಿ ತನ್ನತನಕ್ಕಾಗಿ ಪ್ರತಿಕ್ಷಣವೂ ಹೋರಾಡುತ್ತ ಬದುಕುತ್ತಾಳೆ. ಅವಳಿಗೆ ಅವಳದೇ ಆದ ಕೆಲವೊಂದು ಕಟ್ಟುಪಾಡುಗಳಿವೆ. ಬದುಕಿಗೆ ಹಾಕಿಕೊಂಡ ರೀತಿ ನಿಯಮಗಳಿವೆ. ಅವಳೆಷ್ಟೆ ಮುಂದುವರಿದಿದ್ದರೂ ತನ್ನೊಳಗಿನ ಚೌಕಟ್ಟು ಮೀರಲಾರಳು. ತಾನು ಅಂದುಕೊಂಡ ರೇಖೆಯನ್ನು ಬದಲಿಸಲಾರಳು. ಇದು ಪ್ರತಿಯೊಬ್ಬ ಹೆಣ್ಣಿನೊಳಗಿರುವ ಸ್ವಭಾವ. ಒಮ್ಮೆ ಬಿರುಗಾಳಿಯಾದರೆ ಮತ್ತೊಮೆ ಶಾಂತಮೂರ್ತಿಯಾಗಿ ಸಂತೈಸುವವಳೇ ಈ ಹೆಣ್ಣು. ಹೆಣ್ಣೆಂದರೆ ಜೀವ ಚೈತನ್ಯವಿದ್ದಂತೆ. ನೋವಲ್ಲೂ ನಗುವನ್ನ ಕಲಿತವಳು. ಸೋತಾಗ ಸಂತೈಸಿ ಮೈದಡವುವ ಕರುಣಾಮಯಿ. ಅತ್ತಾಗ ಮಡಿಲಲ್ಲಿ ಸಾಂತ್ವನಿಸುವ ಮಮತಾಮಯಿ. ಅದಕ್ಕೆ ಹೆಣ್ಣೆಂದರೆ ಶಕ್ತಿ.

    ನೀ ದೂರ ಹೋದಾಗ ಕಾದಂಬರಿಯು ಒಂದು ಚಿಕ್ಕ ಹಳ್ಳಿಯಲ್ಲಿ ಬೆಳೆದ ಹೆಣ್ಣು ಮಗಳು ಒಬ್ಬಳು ವಿದೇಶದಲ್ಲಿ ಯಾವ ರೀತಿ ಬದುಕುತ್ತಿದ್ದಾಳೆ ಎಂಬುದರ ಸತ್ಯ ಘಟನೆ ಆಧಾರಿತವಾದ ಕಾದಂಬರಿ. ಸ್ತ್ರೀಸಂವೇದನೆಯ ನೆಲೆಗಳು ಮುಟ್ಟುತ್ತಿರುವ ಹಾದಿಗಳನ್ನು ಗುರುತಿಸುವ ಪುಟ್ಟ ಪ್ರಯತ್ತ ಇದು ಎನ್ನಬಹದು. ಹಾಗೆಯೇ ಇಲ್ಲಿ ವಿಶ್ಲೇಷಣೆಗೆ ಹೆಚ್ಚು ಗಮನಹರಿಸಿ ಉದಾಹರಣೆಗಳನ್ನು ಕ್ವಚಿತ್ತಾಗಿ ಬಳಸಿ ಕೊಳ್ಳಲಾಗಿದೆ. ಸದ್ಯದ ವರ್ತಮಾನದಲ್ಲಿ ಬರೆಯತ್ತಿರುವ ಸ್ತ್ರೀಲೇಖಕಿಯರ ಬರವಣಿಗೆಗಳ ಬಗ್ಗೆಯೇ ನಾನು ಹೆಚ್ಚು ಕುತೂಹಲಿ ಎಂದರೆ ತಪ್ಪಾಗಲಾರದು.

    ಫೌಝಿಯಾ ಪಟ್ಟ ಕಷ್ಟಗಳು ಎಲ್ಲವೂ ಸೇರಿ ದೃಢ ನಿರ್ಧಾರದಿಂದ ಬೆಳೆದು ದೊಡ್ಡವಳಾಗಿ ಎಲ್ಲರಂತೆ ತಾನು ಒಬ್ಬಳು ದಿಟ್ಟ ಮಹಿಳೆಯಾಗಿ ಬೆಳೆಯಬೇಕೆಂಬ ಆಸೆಯಿಂದ ಕನಸುಗಳನ್ನು ಕಟ್ಟಿಕೊಂಡು ಕೆಲಸಗಳನ್ನು ಹುಡುಕುತ್ತಾ ಜೀವನವನ್ನು ಸಾಗಿಸುವ ರೀತಿ. ಹೆಣ್ಣು ಮಗಳೊಬ್ಬಳು ಯಾರ ಸಹಾಯವೂ ಇಲ್ಲದೆ ಯಾರಿಂದಲೂ ಹಣವನ್ನು ಪಡೆಯುತ್ತೆ ತಾನು ದುಡಿದ ಹಣದಲ್ಲೇ ಸ್ವಲ್ಪವನ್ನು ಶೇಖರಣೆ ಮಾಡಿ ಇಟ್ಟುಕೊಂಡು ದುಬೈಗೆ ಆರುವ ರೀತಿ ಅವಳು ಪಡುವ ಕಷ್ಟಗಳನ್ನು ಇಂಚಿಂಚಾಗಿ ಪ್ರತಿಯೊಂದು ವಿವರಣಾತ್ಮಕವಾಗಿ ತಿಳಿಸಿಕೊಟ್ಟಿದ್ದಾರೆ ಇಲ್ಲಿ ಹೆಣ್ಣು ಮಗಳೋಒಬ್ಬಳು ತನ್ನ ಜೀವನವನ್ನು ಯಾವ ರೀತಿ ಯಾರ ಸಹಾಯವೂ ಇಲ್ಲದೆಯೇ ಬಂಧು-ಬಳಗ, ಕುಟುಂಬ ವರ್ಗದವರ ಸಹಾಯವು ಇಲ್ಲದೇ ಜೀವನದ ಹೋರಾಟದಲ್ಲಿ ಬದುಕುತ್ತಾಳೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

    ಇಲ್ಲಿ ಬರುವ ಕೊನೆಯ ಪ್ರವಾಸಿಯಲ್ಲಿ ಆ ಹೆಣ್ಣು ಮಗಳು ದುಬೈಗೆ ಹೋದಾಗ ಅವಳು ಅನುಭವಿಸುವ ಕಷ್ಟಗಳು ಉದ್ಯೋಗ ಸಿಗದೇ ಯಾವ ರೀತಿ ಜೀವನ ನಡೆಸುತ್ತಿದಳು ಎಂಬುದನ್ನು ನೀವು ಈ ಕಾದಂಬರಿಯಲ್ಲಿ ತಿಳಿಯಬೇಕಾದ ಮುಖ್ಯ ಅಂಶ. ಕೊನೆಗೆ ಅವಳಿಗೆ ಕೆಲಸ ಸಿಕ್ಕಿತೆ..! ಕೊನೆಗೆ ಆ ಹೆಣ್ಣು ಮಗಳು ಭಾರತಕ್ಕೆ ಬರುವಳೇ….! ಎಂಬುದನ್ನು ನೀವು ಕಾದಂಬರಿಯನ್ನು ಓದಿ ತಿಳಿದುಕೊಳ್ಳಬೇಕಾಗಿ ವಿನಂತಿ. ಇದು ಸ್ತ್ರೀವಾದಿ ದೃಷ್ಟಿಯಿಂದ ಮಹತ್ತ್ವದ ಕೃತಿಯಾಗಿದೆ. ಏಕೆಂದರೆ ಇದು ಒಬ್ಬ ನೊಂದು-ಬೆಂದು ಹೋದ ದಿಟ್ಟ ಹೆದ್ದೂಬ್ಬಳ ಜೀವನದ ಹೋರಾಟದ ನೈಜ ಕಥೆ..! ಒಂದು ಮುಸ್ಲಿಂ ಸಮುದಾಯದ ಹೆಣ್ಣು ಹಾಗೂ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿ ಪ್ರದೇಶದ ಕಥೆ.

Add a review

Your email address will not be published. Required fields are marked *

Related Products