ಕುಣಿಗಲ್ ಟು ಕಂದಹಾರ್

 221

Buy E_Book

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
ISBN
Publications
(6 customer reviews)

SYNOPSIS

ಇದುವರೆಗೂ ಯಾರೂ ಮುಟ್ಟದ ಕ್ಷೇತ್ರವೊಂದರ ಅನುಭವ ಕಥನ ಓದಲು ಸಿದ್ಧರಾಗಿ!
ಆಫ್ಘಾನಿಸ್ತಾನವೆಂಬ ಕೌತುಕ ರಾಷ್ಟ್ರದ, ಹೊರಜಗತ್ತಿಗೆ ನಿಲುಕದ ಅನೂಹ್ಯ ಲೋಕವೊಂದರ ಅನಾವರಣ.
ಆಫ್ಘಾನಿನ ಯುದ್ಧಭೂಮಿಯಲ್ಲಿದ್ದ ಸೈನಿಕನಲ್ಲದ ಸಾಮಾನ್ಯ ಕನ್ನಡಿಗನೊಬ್ಬನ ಅಸಾಮಾನ್ಯ ಕಥನ.
ಆಫ್ಘಾನಿಸ್ತಾನವಷ್ಟೇ ಅಲ್ಲದೆ ಮೆಸಿಡೋನಿಯ, ಇರಾಕ್ ಮತ್ತು ಸೌದಿಯ ವಿಶೇಷ ಅನುಭವಗಳ ಮಾಲಿಕೆ.

ಅಪಾಯಕಾರಿ ಹಾಗೂ ಇತರೆ ವಿಶಿಷ್ಟ ಅನುಭವಗಳ ನೇರ, ಸರಳ ಪ್ರಸ್ತುತಿ ನಿಮ್ಮಮುಂದೆ ಪುಸ್ತಕ ರೂಪದಲ್ಲಿ!

ABOUT AUTHOR

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ೧೯೮೨ರಂದು ಜನನ. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಗಿದೆ. ೨೦೦೧ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (JSW) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರ್ಪಡೆ. ಅದಾದ ಐದು ವರ್ಷಗಳ ನಂತರ ಎಲ್&ಟಿ ಕಂಪನಿಗೆ ಸೇರಿ ಹೈದರಾಬಾದ್    Read More...

Opinion of Others

  1. Suvarnini Konale

    Suvarnini Konale Doctor- Writer

    ಕೃತಿ: #ಕುಣಿಗಲ್_to_ಕಂದಹಾರ್ ಕರ್ತೃ: #ಮಂಜುನಾಥ್_ಕುಣಿಗಲ್ ಪ್ರಕಾಶನ: #ವೀರಲೋಕ ಕುಣಿಗಲ್ ಮಂಜುನಾಥರ ಪರಿಚಯ ನನಗಿಲ್ಲ. ಆದರೆ ಈ ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಅವರು ಮಿತ್ರರೇನೋ ಅನಿಸುತ್ತಿದೆ. ಅವರ ಬರೆಹದ ಶೈಲಿ ಅದಕ್ಕೆ ಕಾರಣ. ಇದು ಕಥೆ ಬರೆದದ್ದಲ್ಲ, ಅಚ್ಚ ಕನ್ನಡಿಗನೊಬ್ಬ ಕಥೆ ಹೇಳಿದ್ದು. ಯುದ್ಧನಗರಗಳ ನಿರ್ಮಾಣದ ಕಾರ್ಯದಲ್ಲಿ ತೊಡಗಿ, ತಿಂಗಳುಗಟ್ಟಲೆ ಅವಧಿಯನ್ನು ವಿದೇಶದ ಯುದ್ಧಭೂಮಿಯಲ್ಲಿ ಕಳೆಯುವ ಕನ್ನಡಿಗನೊಬ್ಬನ ಅನುಭವಗಳು ಇವು. ಆ ಅನುಭವಗಳಿಗೆ ಯಾವುದೇ ವಿಶೇಷ ಲೇಪಗಳಿಲ್ಲದೇ ಸಹಜವಾಗಿ ಸ್ನೇಹಿತನೊಬ್ಬ ತನ್ನ ಅನುಭವ ಹಂಚಿಕೊಳ್ಳುವಷ್ಟು ಸರಳವಾಗಿಯೂ ಆಪ್ತವಾಗಿಯೂ ಆಸಕ್ತಿದಾಯಕವಾಗಿಯೂ ಓದಿಸಿಕೊಳ್ಳುತ್ತದೆ ಈ ಪುಸ್ತಕ. ಕನ್ನಡ ಸಾಹಿತ್ಯದಲ್ಲಿ ಇದೊಂದು ವಿಶಿಷ್ಟ ಕೃತಿ. ಏಕೆಂದರೆ ಇದರಲ್ಲಿ ಬರುವ ವಿಚಾರಗಳು ನಮಗೆ ಹೊಸತು. ರಾಮಾಯಣ, ಮಹಾಭಾರತ, ಪುರಾಣಗಳು, ಇತ್ತೀಚಿನ ಇತಿಹಾಸದ ವರೆಗೂ‌ ನಡೆದ ಹಲವಾರು ಯುದ್ಧಗಳ ಕಥೆಗಳನ್ನು ನಾವು ಕೇಳಿದ್ದೇವೆ. ಎಲ್ಲಾ ಕಾಲದ ಶಸ್ತ್ರಾಸ್ತ್ರಗಳೂ, ಯೋಧರ ಹುಮ್ಮಸ್ಸು, ಯುದ್ಧದಲ್ಲಿ ನಡೆಯುವ ಸಾವು ನೋವು, ಸೋಲು ಗೆಲುವು ಇವೆಲ್ಲವನ್ನೂ ನಾವು ಓದಿದ್ದೇವೆ, ಈಗಿನ ಕಾಲದಲ್ಲಿ ವಿಡಿಯೊಗಳನ್ನೂ ನೋಡಿದ್ದೇವೆ. ಆದರೆ ನಾವು ಕಾಣದ ಅಂಶವೆಂದರೆ ಹಾಗೆ ಮನೆಯಿಂದ ದೂರ, ಊರಿನಿಂದ ಹೊರಗೆಲ್ಲೋ ಉಳಿದು ಯುದ್ಧ ಮಾಡುವ ಯೋಧರ ವಸತಿ, ಊಟದ ವ್ಯವಸ್ಥೆ ಏನು? ಲಕ್ಷಾಂತರ ಯೋಧರು ಉಳಿಯುವ ವಸತಿ ಸಮುಚ್ಚಯದಲ್ಲಿನ ಇತರ ವ್ಯವಸ್ಥೆಗೆ ಅಗತ್ಯವಾದ ತಾತ್ಕಾಲಿಕ ನಿರ್ಮಾಣಗಳೂ, ನಿರ್ವಹಣೆಗೆ ಅಗತ್ಯವಾದ man power, ಅಲ್ಲಿನ ಜೀವನಕ್ರಮ, ಅಲ್ಲಿನ ಸಂಕಷ್ಟಗಳು... ಹೀಗೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ ಲೇಖಕರು. ತಾಲಿಬಾನಿಗಳ ದೇಶವಾಗಿ ಗೊತ್ತಿರುವ ಆಫ್ಘನ್ನಿನ ಇನ್ನೊಂದು ಮುಖವನ್ನೂ, ಯುದ್ಧನಗರಿಯಲ್ಲಿ ಅನಿವಾರ್ಯವಾಗಿ ಸಿಲುಕಿದ ಬೇರೆ ಬೇರೆ ದೇಶದ ಜನಗಳ ಜೊತೆಗಿನ ಒಡನಾಟದ ನೆನಪುಗಳನ್ನೂ, ಯಾವಾಗ ಏನಾಗುತ್ತದೆಯೋ ಎಂಬ ನಿರಂತರ ಭಯದ ಅನುಭವವನ್ನೂ ಇಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ವಿಶಿಷ್ಟ ಅನುಭವಗಳನ್ನು ಸರಳವಾದ ಆದರೆ ಶುದ್ಧವಾದ ಭಾಷೆಯ ನಿರೂಪಣೆಯ ಮೂಲಕ ಕನ್ನಡಿಗರಿಗೆ ತಲುಪಿಸಿದ ಲೇಖಕ ಮಂಜುನಾಥ್ ಕುಣಿಗಲ್ ಅವರಿಗೆ ಕೃತಜ್ಞತೆ!

  2. Delhi Kannadiga Prakash

    Delhi Kannadiga Prakash

    #ನಾ_ಓದಿ_ಮೆಚ್ಚಿದ_ಪುಸ್ತಕ #ಕುಣಿಗಲ್_ಟು_ಕಂದಹಾರ್ ಅಪಘಾನಿಸ್ತಾನ ಈ ಜಗತ್ತಿಗೆ ಒಂದು ಅಚ್ಚರಿಯ ರಾಷ್ಟ್ರ...ತಾಲಿಬಾನ್ ಆಡಳಿತ ಪ್ರಾರಂಭವಾದ ನಂತರವಂತೂ ಒಂದಲ್ಲ ಒಂದು ರೀತಿಯ ಕೌತುಕ ನಮ್ಮಲ್ಲಿ ಮೂಡಿ ಅಲ್ಲಿನ ಸುದ್ದಿಗಳು ಏನಾದ್ರೂ ಬಂದಾಗ ಅಚ್ಚರಿಯಿಂದ ಓದ್ತಿವಿ ಕೇಳ್ತಿವಿ.. ಆದ್ರೆ ತಾಲಿಬಾನ್ ಆಡಳಿತ ಬರುವುದಿಕ್ಕಿಂತ ಮುಂಚಿನ ಅಫ್ಘಾನಿಸ್ತಾನ್ ಹೇಗಿತ್ತು ಮಿಲ್ಟ್ರಿ ಆಡಳಿತ ಅಲ್ಲಿ ಹೇಗೆ ನೆಲೆಯೂರಿತ್ತು ಅನ್ನುವ ಲೇಖಕರ ಸ್ವ ಅನುಭವದ ಕಥನ ಕೌತುಕದ ಪುಸ್ತಕ "ಕುಣಿಗಲ್ ಟು ಕಂದಹಾರ್" ಲೇಖಕರು ದುಬೈ ಮೂಲದ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿ ಸೇರಿದ ನಂತರ, ಯುದ್ಧ ಪೀಡಿತ ಅಪಘಾನಿಸ್ತಾನದಲ್ಲಿದ ನ್ಯಾಟೊ ಆರ್ಮಿ ಪಡೆಗೆ ಅಗತ್ಯ ವಸ್ತುಗಳನ್ನ ಪೂರೈಸುವ ಪ್ರಾಜೆಕ್ಟ್ ವರ್ಕ್ ಮೇಲೆ ಲೇಖಕರ ಸವಾರಿ ಅಫ್ಘಾನಿಸ್ತಾನ್ ಕಡೆಗೆ ಪ್ರಾರಂಭವಾಗುತ್ತೆ .. ಲೇಖಕರು ಅಪಘಾನಿಸ್ತಾನ ದಲ್ಲಿನ ಅನುಭವಗಳನ್ನ ಕಟ್ಟಿಕೊಟ್ಟಿರುವದನ್ನ ಓದುತ್ತಾ ಹೊಂದಂತೆ ನಾವು ಅಫ್ಘಾನಿಸ್ತಾನ್ ತಿರುಗಿ ಬಂದಂತಾಗುತ್ತೆ.. ಸದಾಕಾಲ ಒತ್ತಡದಲ್ಲಿ ಬದುಕುವ ಅಫ್ಘಾನಿಸ್ತಾನ ಜನರ ಬದುಕು, ನಿರಂತರ ನಡೆಯುವ ರಾಕೆಟ್ ದಾಳಿ, ಸಾವು ನೋವುಗಳು, ಹತಾಶೆ ತುಂಬಿದ ಸೈನಿಕರ ಮನಸ್ಥಿತಿ ಎಲ್ಲವೂ ಓದುತ್ತಾ ಜಗತ್ತಿನಲ್ಲಿ ಹಿಂತಹ ಒಂದು ದೇಶ ಇದೆಯಾ ಅನಿಸಿ ಮನಸ್ಸು ಒಂದು ತೆರನಾಗಿ ಭಾರವಾಗುತ್ತೆ.. ಈಗ ತಾಲಿಬಾನ್ ಆಡಳಿತ ಬಂದ ಮೇಲೆ ಎಲ್ಲವೂ ಬದಲಾಗಿದೆ ಆದರೆ ಜನರ ಬದುಕೊಂದು ಬಿಟ್ಟು ಅನ್ನೋದು ಸತ್ಯ. ಅಫ್ಘಾನಿಸ್ತಾನ್ ಮಾತ್ರವಲ್ಲದೆ ಅಲೆಕ್ಸಾಂಡರ್, ಮದರ್ ತೆರೇಸಾರ ಜನ್ಮಭೂಮಿ ಮೆಸಿಡೊನೀಯ,ತೈಲ ಸಾಮ್ರಾಜ್ಯದ ಜೊತೆಗೆ ಯುದ್ಧಭೂಮಿ ಆಗಿ ಕೂಡಾ ಪ್ರಸಿದ್ಧಿ ಪಡೆದಿರುವ ಇರಾಕ್ ಮತ್ತು ಸೌದಿ ಅರೇಬಿಯಾದ ಒಂದಿಷ್ಟು ಅನುಭವಗಳ ವಿಶೇಷಗಳು ಪುಸ್ತಕದಲ್ಲಿವೆ. 216 ಪುಟಗಳ ಪುಸ್ತಕವನ್ನ ಎರಡೇ ದಿನದಲ್ಲಿ ಓದಿ ಮುಗಿಸಿದೆ.. ಅಷ್ಟೊಂದು ರೋಚಕತೇ ತುಂಬಿದೆ "ಕುಣಿಗಲ್ ಟು ಕಂದಹಾರ್" ನಲ್ಲಿ😍 Manjunath Kunigal ಅಭಿನಂದನೆಗಳು ಸರ್.. ಪುಸ್ತಕ ತುಂಬಾ ಚೆನ್ನಾಗಿ ಮೂಡಿ ಬಂದಿದೆ💐

  3. Darshan Jayanna

    Darshan JayannaAuthor

    ಕುಣಿಗಲ್ಲಿನ ಕಾಬೂಲಿವಾಲ.... ಈ ಕೃತಿ ತನ್ನ ಹೆಸರಿನಿಂದಲೇ ನನ್ನನ್ನು ಆಗಾಗ ಓದಲು ಪ್ರಚೋದಿಸುತ್ತಿತ್ತು. ಕೊಂಡ ಒಂದು ಪುಸ್ತಕವನ್ನ ಸ್ನೇಹಿತರೊಬ್ಬರಿಗೆ ಓದಲು ಕೊಟ್ಟೆ. ನಂತರ ಕೊಂಡದ್ದನ್ನು ನೆನ್ನೆ ಸಂಪೂರ್ಣ ಓದಿ ಮುಗಿಸಿದ ಮೇಲೆ ನನಗೆ ಅನ್ನಿಸಿದ್ದು ಈ ಕೃತಿ ಬೇರೆ ಭಾಷೆಗಳಿಗೆ ಅನುವಾದವಾಗಬೇಕು, ಹೆಚೆಚ್ಚು ಜನರಿಗೆ ತಲುಪಬೇಕು, ಕಾರಣ ಇಲ್ಲಿರುವ ವಿಶಿಷ್ಟ, ವಿಕ್ಷಿಪ್ತ ಅನುಭವಗಳು. ಮಿಲಿಯನ್ ಗಟ್ಟಲೆ ಡಾಲರ್ ಹಣ ತೆತ್ತರೂ ಈ ಅನುಭವ ನಮಗೆ ಸಿಗುವುದಿಲ್ಲ. ತಾಲಿಬಾನಿನಂತಹಾ ಗೆರಿಲ್ಲ ಪಡೆ ಇತ್ತೀಚೆಗೆ ಶಕ್ತ ರಾಷ್ಟ್ರಗಳಾದ ಅಮೇರಿಕಾ, ನೆಟೋ ಪಡೆ, ಶೀತಲ ಸಮರದಲ್ಲಿ mighty ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಿದೆ. ಅಲ್ಲಿನ ಬಂಡುಕೋರರನ್ನು ಬಗ್ಗು ಬಡಿಯಲು ಬಹುಪಾಲು ಇವರೆಲ್ಲಾ ಸೇರಿ ಸಫಲವಾಗಿಲ್ಲ... ಅದಕ್ಕೆ ಕಾರಣ ಏನು? ವಿಶ್ವದ ನಾನಾ ಕಡೆಗಳಿಂದ ಬಂದ ಜನರು ಇಲ್ಲೇಕೆ ಕೆಲಸ ಮಾಡುತ್ತಾರೆ? ಮಿಲಿಟರಿ ಕ್ಯಾಂಪ್ನಲ್ಲಿ ಏಕೆ ಮತ್ತು ಹೇಗೆ ಇರುತ್ತಾರೆ? ಅವರ ತಳಮಳಗಳೇನು? ಅವಶ್ಯಕತೆಗಳೇನು? ಯಾರು ಇವನ್ನೆಲ್ಲಾ ಯಾವ ಕಾರಣಕ್ಕೆ ಹೇಗೆ ನಡೆಸುತ್ತಾರೆ? ಇದರಲ್ಲಿ ಕಾರ್ಪೊರೇಟ್ಗಳ ಹಾಗು ಸರ್ಕಾರಗಳ ಪಾತ್ರವೇನು? ಅಲ್ಲಿಗೆ ತಮ್ಮ ದೇಶದಿಂದ freedom ಡಿಫೆಂಡ್ ಮಾಡಲು ಬರುವ ಯೋಧರು ನಿಜವಾಗಿ ಯಾರ ಸ್ವಾತಂತ್ರ್ಯವನ್ನ ಡಿಫೆಂಡ್ ಮಾಡುತ್ತಾರೆ? ಇದರಿಂದ ಯಾರಿಗೆ ಲಾಭವಾಗುತ್ತದೆ? ಸಾಮಾನ್ಯ ಪ್ರಜೆಗೆ ಇದೆಲ್ಲಾ ಹೇಗೆ ತಟ್ಟುತ್ತದೆ? ಹೀಗೆ ಹಲವಾರು ಸಂಗತಿಗಳು ಕೊಂಚ ಮಟ್ಟಿಗೆ ಮನದಟ್ಟಾಗುತ್ತವೆ. ಎಲ್ಲದಕ್ಕಿಂತಾ ಹೆಚ್ಚು ಇಷ್ಟವಾಗುವುದು ಮಂಜುನಾಥ್ ಅವರ ಬರವಣಿಗೆಯ ಶೈಲಿ. ಅಲ್ಲಿ ಅತಿರೇಕ, ಅತಿಶಯೋಕ್ತಿಗಳಿಲ್ಲ. ನಮ್ಮನ್ನು ಮೆಚ್ಚಿಸುವ ಹುನ್ನಾರಗಳಿಲ್ಲ. ಆದರೆ ಓದಿನ ಒಘಕ್ಕೆ ತೊಂದರೆಯೇ ಇಲ್ಲ. ಅದಕ್ಕೆ ಕಾರಣ, ಅವರು ಎಲ್ಲವನ್ನೂ ಸ್ವಾರಸ್ಯಕರವಾಗಿ ಮತ್ತು ಪ್ರಾಮಾಣಿಕವಾಗಿ ವಿವರಿಸುವ ರೀತಿ. ಐದು ವರ್ಷಗಳಿಂದ ಸೌದಿಯೂ ಸೇರಿ ನಾನು ಸುತ್ತಿರುವ ಅನೇಕ ಅರಬ್ ರಾಷ್ಟ್ರಗಳ ಸಂಸ್ಕೃತಿಯ ಹಿನ್ನೆಲೆಯಲ್ಲಿ ಒಂದಷ್ಟು ರಿಲೇಟ್ ಮಾಡಿಕೊಳ್ಳುವ ಸಂಗತಿಗಳಿದ್ದರೂ ಮಂಜುನಾಥ್ ರವರ ಕಾರ್ಯಾನುಭವ, ಸುತ್ತಾಟ ಅಗಾಧ ಮತ್ತು ಅನನ್ಯ ಬಗೆಯದ್ದು. ಹತ್ತು ಹದಿನೈದು ದಿನಗಳ ಕಾಲ ಕಾಶ್ಮೀರಕ್ಕೆ ಹೋಗಿ ಬಂದು ಕಥೆ ಹೊಡೆಯುವ ಮಾದರಿಯಲ್ಲ... ಹತ್ತಾರು ವರ್ಷ ಅಂತಹ ಆಯಕಟ್ಟಿನ ಮಿಲಿಟರಿ ಬೇಸ್ನಲ್ಲಿ ಕೆಲಸ ಮಾಡಿ, ಸಾವನ್ನು ಹತ್ತಿರದಿಂದ ನೋಡಿ, ಇಲ್ಲಿಗೆ ಯಾಕೆ ಬಂದೆನೋ ಎಂದು ತನ್ನನ್ನು ತಾನೇ ಶಪಿಸಿಕೊಂಡು ಆದರೂ ಮತ್ತೆ ಮತ್ತೆ ಹೋಗಬೇಕಾಗಿ ಬಂದು, ಕಡೆಗೆ ಇದನ್ನೆಲ್ಲಾ ಬರೆಯಬೇಕಾ ಎಂದು ಕೇಳಿಕೊಳ್ಳುವ ಪ್ರಾಮಾಣಿಕ ಗೊಂದಲದ ಮನಸ್ಸು ಅವರದ್ದು. ಇದನ್ನು ಇವರು ಕನ್ನಡದಲ್ಲಿ ಬರೆಯದೇ ಹೋಗಿದ್ದರೆ ನಮಗೆ ಯುದ್ಧ ಕ್ಯಾಂಪ್ಗಳ ಎಷ್ಟೋ ವಿಷಯಗಳ ಬಗ್ಗೆ ತಿಳಿಯುತ್ತಲೇ ಇರಲಿಲ್ಲ! ಕಾರಣ ಅದರ ವಸ್ತು ವಿಷಯ, ಅವರಿಗೆ ತಮ್ಮ ಕೆಲಸದ ನಿಮಿತ್ತ ಅಲ್ಲಿ ಸಿಕ್ಕ ಅಕ್ಸಸ್ ಮತ್ತು ಅದೆಲ್ಲವನ್ನು ಗಮನಿಸಿ ಬರೆದ ಅವರ ಸೂಕ್ಷ್ಮಗ್ರಾಹಿತನ. - Darshan Jayanna

Customer Reviews

6 reviews for ಕುಣಿಗಲ್ ಟು ಕಂದಹಾರ್

  1. Poornima

    That is great full of life story

  2. Roopa.g

    That’s scariest life story

  3. Dhanush

    Greatest and scary story about self
    You must read this book

  4. ಎನ್ ಮಂಜುನಾಥ್

    ಕನ್ನಡ ಸಾಹಿತ್ಯದಲ್ಲಿ ವಿನೂತನ ಪುಸ್ತಕ. ಅತ್ಯದ್ಭುತ ಅನುಭವ ಕಥನ. ಸರಳ ಸುಂದರ ನಿರೂಪಣೆ. ಲೇಖಕರಿಗೆ ಮತ್ತು ಪ್ರಕಾಶಕರಿಗೆ ಧನ್ಯವಾದಗಳು.

  5. Manjunath Kunigal

    ಕೊಂಡು ಓದಿ, ಪುಸ್ತಕದ ಬಗ್ಗೆ ಒಳ್ಳೆಯ ಮಾತನಾಡಿದ ಪ್ರಿಯ ಓದುಗರೆಲ್ಲರಿಗೂ ಅಭಿವಂದನೆಗಳು –
    _ ಮಂಜುನಾಥ್ ಕುಣಿಗಲ್

  6. ಶ್ರೀನಾಥ್

    ಈ ಪುಸ್ತಕ ಒದುತ್ತಿದರೆ ನಾವೆ ಬೆಂಗಳೂರಿಂದ ಕಂದಹಾರ್ ಪ್ರಯಣಿಸಿದ ಆನುಭವ .ಅಲ್ಲಿನ ವಾಸ್ತವ ನೋಡಿದ ಆನುಭವ.

Add a review

Your email address will not be published. Required fields are marked *