ಸದಾಶಿವ ಶೆಣೈ



ಸದಾಶಿವ ಶೆಣೈ, ಆದರೆ ಶೆಣೈ ಎಂದೇ ಪರಿಚಿತ, ಹುಟ್ಟಿದ್ದು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ, ದಿ. ಪ್ರಭಾಕರ ಶೆಣೈ ಪ್ರೇಮಾ ಶೆಣೈ ಅವರ ಐದನೇ ಮಗ, ವಿದ್ಯಾರ್ಹತೆ ಎಂ.ಕಾಂ, ಎಲ್‌ಎಲ್‌ಒ,ಡಿಪ್ಲೊಮಾ ಇನ್ ಜರ್ನಲಿಸಂ,ಪಿಯುಸಿ ಓದಿದ್ದು ಬೆಳ್ತಂಗಡಿ ಜೂನಿಯರ್ ಕಾಲೇಜ್‌ನಲ್ಲಿ. ಧಾರವಾಡ ಯೂನಿವರ್ಸಿಟಿಯಿಂದ ಅಂಚೆ ಥೆರಪಿನಲ್ಲಿ ಬಿಕಾಂ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಎಂ.ಕಾಂ, ಬೆಂಗಳೂರಿನ ಎಸ್‌.ಜೆ.ಆರ್.ಸಿ. ಕಾಲೇಜಿನಿಂದ ಕಾನೂನು ಪದವಿ ಮತ್ತು ಮೈಸೂರಿನ ಓಪನ್ ಯೂನಿವರ್ಸಿಟಿಯಲ್ಲಿ ಡಿಪ್ಲೊಮಾ ಇನ್ ಜರ್ನಲಿಸಂ,ವೃತ್ತಿಜೀವನ ಆರಂಭವಾಗಿದ್ದು ಮುಂಜಾನೆ ದಿನಪತ್ರಿಕೆಯಿಂದ, ಜಯಶೀಲರಾವ್ ಮಾರ್ಗದರ್ಶನದಲ್ಲಿ ಆರಂಭವಾದ ಪತ್ರಕರ್ತ ಜೀವನ ಪಿ. ಲಂಕೇಶ್ ಗರಡಿಯಲ್ಲಿ ಪಕ್ವಗೊಂಡಿದ್ದು, ಈ ಮಧ್ಯೆ ಅರಗಿಣಿ, ಮಾರ್ದನಿ, ಪಿ.ಬಿ.ಐ, ಎ.ಐ.ಆರ್, ಬ್ಯಾಂಗಲೂ‌ ಬಯಾಸ್, ದೂರದರ್ಶನ ಮೊದಲಾದೆಡೆ ಅರೆಕಾಲಿಕ ವೃತ್ತಿ. ‘ಚಿತ’ ಸಿನಿಮಾ ಮಾಸಿಕದ ಸಂಪಾದಕನಾಗಿ ಒಂದಷ್ಟು ದಿನ ಕಾರ್ಯನಿರ್ವಹಣೆ.
ಆನಂತರ ಎರಡು ದಶಕಗಳ ಕಾಲ ಲಂಕೇಶ್‌ ಪತ್ರಿಕೆಯೇ ಕಾರ್ಯಸ್ಥಾನ. ಜೊತೆಗೆ ಈ ಟಿವಿಯಲ್ಲಿ ಒಂದು ಮಾತು’ ಕಾರ್ಯಕ್ರಮದ ನಿರೂಪಣೆ-ನಿರ್ದೆಶನ, ‘ಪ್ರಾರ್ಥನೆ’ ಎಂಬ ಸಿನಿಮಾ ನಿರ್ದೆಶನದ ಜವಾಬ್ದಾರಿಯನ್ನು ನಿರ್ವಹಿಸಿದರು. ಮನೆಯೊಂದು ಮೂರು ಬಾಗಿಲು ಧಾರಾವಾಹಿಯ ಮೂಲಕ ನಟನೆಗೂ ಪಾದಾರ್ಪಣೆ, ಸದ್ಯಕ್ಕೆ ಬಿಟಿವಿಯಲ್ಲಿ ಮನರಂಜನಾ ವಿಭಾಗದ ಮುಖ್ಯಸ್ಥ.