ಜಯರಾಮಾಚಾರಿ

ಮೈಸೂರಿನಲ್ಲಿ ೧೯೮೭ರಲ್ಲಿ ಜನನ. ಬೆಳೆದದ್ದು ಬೆಂಗಳೂರಿನಲ್ಲಿಯಾದರೂ ಸಾಹಿತ್ಯ,
ಕಲೆಯ ಬಗೆಗೆ ಅಪಾರವಾದ ಆಸಕ್ತಿಯುಳ್ಳವರು. ಎಲೆಕ್ಟ್ರಿಕಲ್ ವಿಭಾಗದಲ್ಲಿ ಎಸ್.
ಜೆ. ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಡಿಪ್ಲೊಮಾ ಪದವೀಧರರಾದ ಮೇಲೆ (೨೦೦೭),
ಯು.ವಿ.ಸಿ.ಇ. ಸಂಸ್ಥೆಯಲ್ಲಿ ಎಂಜಿನಿಯರಿಂಗ್ (೨೦೧೨) ಓದಿ ಮುಗಿಸಿದ್ದಾರೆ.
೨೦೧೩ರಿಂದ ನಮ್ಮ ಮೆಟ್ರೊದಲ್ಲಿ ಉದ್ಯೋಗವನ್ನು ಪಡೆದು ಸದ್ಯ ಸ್ಟೇಷನ್
ಸೂಪರಿಡೆಂಟ್ ಆಗಿದ್ದಾರೆ.
ಓದು, ಬರಹ ಮತ್ತು ಸಿನಿಮಾ ಇವರ ನೆಚ್ಚಿನ ಹವ್ಯಾಸಗಳು. ಶ್ರೀಯುತ ನಾಗತಿಹಳ್ಳಿ
ಚಂದ್ರಶೇಖರ್‌ರವರ “ಟೆಂಟ್ ಶಾಲೆ”ಯಲ್ಲಿ ಡಿಪ್ಲೊಮಾ ಇನ್ ಫಿಲ್ಮ್ ಮೇಕಿಂಗ್
ತರಬೇತಿಯನ್ನು ಪಡೆದ ಲೇಖಕರು ಕೆಲವು ಕಿರುಚಿತ್ರಗಳನ್ನೂ ನಿರ್ದೇಶಿಸಿದ್ದು,
ಸಿನಿಮಾಕ್ಕೆ ಸಂಭಾಷಣೆ ಮತ್ತು ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶನ
ವಿಭಾಗದಲ್ಲಿ ಕೆಲಸ ಮಾಡಿರುತ್ತಾರೆ.
“ಸುಯ್ ಟಪಕ್” ಎಂಬ, ಸಾಹಿತ್ಯ ಸಿನಿಮಾ ಹಾಸ್ಯ ಕಿರುಚಿತ್ರ ಮತ್ತಿತರ ಕಂಟೆAಟ್
ಉಳ್ಳ ಯೂಟ್ಯೂಬ್ ಚಾನೆಲ್, http://neenirabekkittu.blogspot.com/
ಎಂಬ ಬ್ಲಾಗ್ ಜನಮೆಚ್ಚುಗೆಯನ್ನು ಗಳಿಸಿದೆ.
ಕ್ಲಬ್‌ಹೌಸಿನಲ್ಲಿ ನಿತ್ಯ ಓದಿನ ಜಾತ್ರೆಯಾದ ಓದು ಜನಮೇಜಯ ಕಾರ್ಯಕ್ರಮ
ಮತ್ತು ಅಡಕಸಬಿ ಅಡ್ಡ ಶುರುಮಾಡಿ ಅನೇಕ ಸದ್ವಿಚಾರಗಳ ಚರ್ಚೆಗೆ
ದಾರಿಯಾಗಿದ್ದಾರೆ.
ಕರಿಮುಗಿಲ ಕಾಡಿನಲಿ (ಕತಾ ಸಂಕಲನ) ಇವರ ಮೊದಲ ಪುಸ್ತಕವಾದರೆ (೨೦೧೫),
ಅವ್ವನ ಬಯೋಗ್ರಫಿ (೨೦೨೨) ಹೆಚ್ಚು ಪ್ರಕಟಣೆಗಳನ್ನು ಕಂಡ ಪುಸ್ತಕವಾಗಿದೆ.