ಪ್ರೊ ಬಿ ಗಂಗಾಧರಮೂರ್ತಿ



ಪ್ರೊ.ಬಿ.ಗಂಗಾಧರಮೂರ್ತಿ
ಗೌರಿಬಿದನೂರು ನ್ಯಾಷನಲ್ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿ 2003ರಲ್ಲಿ ನಿವೃತ್ತರಾದ ಪ್ರೊ.ಬಿ.ಗಂಗಾಧರಮೂರ್ತಿಯವರು ಕಳೆದ ನಾಲ್ಕು ದಶಕಗಳಿಂದ ಬಂಡಾಯ ಸಾಹಿತ್ಯ, ದಲಿತ ಚಳುವಳಿ, ಜನವಿಜ್ಞಾನ ಚಳುವಳಿ, ವಿಚಾರವಾದಿ ಚಳುವಳಿಯಂತಹ ಪ್ರಗತಿಪರ ಚಳುವಳಿಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದವರು. ಬರಹಗಾರರಾಗಿ, ಸಂಸ್ಕೃತಿ ಚಿಂತಕರಾಗಿ, ಅನುವಾದಕರಾಗಿ, ಸಂಪಾದಕರಾಗಿ ಕನ್ನಡ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಇವರು ‘ಭಾರತ ಜ್ಞಾನ ವಿಜ್ಞಾನ ಸಮಿತಿ’ಯು ಪ್ರಕಟಿಸುತ್ತಿರುವ ಮಾಸಪತ್ರಿಕೆಗೆ ಕಳೆದ ಹತ್ತು ವರ್ಷಗಳಿಂದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1938ರ ಧ್ವಜಸತ್ಯಾಗ್ರಹ ಹತ್ಯಾಕಾಂಡದ ನಂತರ ‘ಕರ್ನಾಟಕದ ಜಲಿಯನ್‌ವಾಲಾ ಬಾಗ್’ ಎಂದು ಕರೆಯಲಾಗುವ ವಿದುರಾಶ್ವತ್ಥದಲ್ಲಿ ರೂಪುಗೊಳ್ಳುತ್ತಿರುವ ‘ಸ್ವಾತಂತ್ರ್ಯ ಸ್ಮಾರಕ ಸಂಕೀರ್ಣ’ದ ಪರಿಕಲ್ಪನೆ ಮತ್ತು ವಿನ್ಯಾಸಕಾರರಾಗಿ, ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಪಟ ಗ್ಯಾಲರಿ ನಿರ್ಮಾಣ ಮತ್ತು ಥೀಮ್ ಗ್ರಂಥಾಲಯ ಸಂಯೋಜನೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರಕಟವಾದ ಕೃತಿಗಳು:
ಹೂ ಅರಳುವಂಥ ಮಣ್ಣು (ಕವನ), ಸಂಸ್ಕಾರ ಸಮೀಕ್ಷೆ (ಸಂ: ವಿಮರ್ಶಾ ಲೇಖನಗಳು), ಭಾರತೀಯ ಸಾಹಿತ್ಯದ ವರ್ಗನೆಲೆ (ಸಹ ಸಂ: ವಿಮರ್ಶಾ ಲೇಖನಗಳು), ನಾಗಸಂದ್ರ ಭೂ ಆಕ್ರಮಣ ಚಳುವಳಿ, ಮಕ್ಕಳಿಗಾಗಿ ಸೂಫಿಕತೆಗಳು, ಭಾರತ ಸ್ವಾತಂತ್ರ್ಯ ಚಳುವಳಿಯ ಪ್ರಧಾನೇತರ ಹೋರಾಟಗಳು, The Politics of Banning Beef, ಕರ್ನಾಟಕದ ಜಲಿಯನ್‌ವಾಲಾ ಬಾಗ್ ವಿದುರಾಶ್ವತ್ಥ (ಸ್ಮಿತಾರೆಡ್ಡಿ ಅವರೊಂದಿಗೆ), ಪದ್ಮಭೂಷಣ ಡಾ.ಎಚ್‌.ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ), ಭಾರತದ ಬೌದ್ಧಿಕ ದಾರಿದ್ರ (ಅನು), ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ (ಅನು), ಅಂಬೇಡ್ಕರ್ ಮತ್ತು ಮುಸ್ಲಿಮರು (ಅನು), ವಸಾಹತು-ಪೂರ್ವ ಕಾಲದ ಜಾತಿ ಹೋರಾಟಗಳು (ಅನು), ಹಿಂದುತ್ವ ಮತ್ತು ದಲಿತರು (ಅನು), ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನ (ಅನು)