. ದಿಲೀಪ್ ಎನ್ನೆ ಒಳ್ಳೆಯ ಕಥೆಗಾರನೆಂಬುದಕ್ಕೆ 'ತಿತ್ತಿದ್ವಾಸನ ಟೈಟಾನ್ ವಾಚು' ಕಥಾ ಸಂಕಲನದೊಳಗಿನ ಒಂಬತ್ತು ಕಥೆಗಳೇ ಸಾಕ್ಷಿ. ಎರಡನೇ ಕಥಾಸಂಕಲನ ಪ್ರಕಟಿಸುತ್ತಿರುವ ಈ ಹೊತ್ತಿನಲ್ಲಿ ವಿಲೀಪರ ಬರವಣಿಗೆಯ ಕೈವಾಡಕ್ಕೆ ಮತ್ತಷ್ಟು ಕಳೆ ಕೂಡಿಕೊಂಡಿದೆ. ಈ ಕಳೆ ಕೂಡಿಕೊಂಡಿರುವುದಕ್ಕೆ ಮಾಯ್ತಾರ ಮಲೆಮಾದಯ್ಯನ ತಳಮನೆಯಾದ ಕೊಳ್ಳೇಗಾಲ ಸೀಮೆಯ ಆಡುಮಾತಿನ ಚಂದ, ಮಾನವ ಜೀವನದ ಚಿತ್ರ-ವಿಚಿತ್ರ ಆಯಾಮಗಳ ಅಂದ, ಜೀವನದ ಒಳಪದರುಗಳಲ್ಲಿ ಅಡಗಿರುವ ವೃಥೆಯ ನಿನಾದ ಮುಂತಾದುವೆಲ್ಲಾ ಕಾರಣವಾಗಿದೆ. ಇವೆಲ್ಲವುಗಳನ್ನೂ ತಮ್ಮದೇ ಆದ ಕಲಾತ್ಮಕ ಶೈಲಿಯಲ್ಲಿ ನಿರೂಪಿಸುತ್ತಾ ಒಮ್ಮೊಮ್ಮೆ ನವ್ಯ ಕಥೆಗಳ ರೂಪದಲ್ಲಿ. ಒಮ್ಮೊಮ್ಮೆ ಮೌಖಿಕ ಕಾವ್ಯಕಥನದ ಧಾಟಿಯಲ್ಲಿ ಕಥೆ ಹೇಳುವ ದಿಲೀಪರ ಕಥನ ಸಾಮರ್ಥ್ಯ ಹುಬ್ಬೇರಿಸುತ್ತದೆ. ಬಂಜಗೆರೆ ಜಯಪ್ರಕಾಶ