Delivery between 2-8 Days
No returns accepted. Please refer our full policy
Your payments are 100% secure
ಡಿ.ಎಸ್. ಚೌಗಲೆ ಅವರ ಕಾದಂಬರಿ ‘ಸದರಬಜಾರ್’ ಹಲವು ವರ್ಗಗಳ ಓದುಗರಿಗೆ ಅಪರಿಚಿತವಾದ ಸಾಮಾಜಿಕ ಲೋಕವೊಂದನ್ನು ತೆರೆದಿಡುತ್ತದೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗ, ಈಚಲ್ಕರಂಜಿ, ಅಬ್ದುಲ್ಲಾಟ್ ಇವು ಜವಳಿ ಉದ್ಯಮ, ಸಕ್ಕರೆ ಕಾರಖಾನೆಗಳು ಇವುಗಳಿಂದ ಬೆಳೆದ ವಿಶಾಲವಾದ ಕಾರ್ಮಿಕರ ಕಾಲನಿಗಳಂತೆ ಬೆಳೆದ ಊರುಗಳು. ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದವರು, ಬರಗಾಲದಲ್ಲಿ ಗುಳೆ ಹೊರಟು ಬಂದವರು, ಕುಟುಂಬ ಹಾಗೂ ಸಮಾಜಗಳ ದೌರ್ಜನ್ಯಗಳಿಂದಾಗಿ ಓಡಿ ಬಂದು ಇಲ್ಲಿ ವೇಶೈಯರಾಗಿ ಬದುಕುತ್ತಿರುವವರು- ಇವರಲ್ಲಿ ಬಹುಪಾಲು ಕರ್ನಾಟಕದವರು, ಕನ್ನಡ ಭಾಷಿಕರು, ಗಡಿ ಭಾಗಗಳಲ್ಲಿ ಸಹಜವಾಗಿರುವ ಸಂಕರ ಭಾಷೆಯಲ್ಲಿ ಮಾತನಾಡುವವರು. ಕೆಲವರು ತಾಯಿನುಡಿಯನ್ನು ಮರೆತವರು. ಈ ಸಮಗ್ರ ಸಾಮಾಜಿಕ ಲೋಕವನ್ನು ಚೌಗಲೆಯವರು ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ಈ ಕೃತಿಯಲ್ಲಿ ನಿರೂಪಿಸಿದ್ದಾರೆ.
– ರಾಜೇಂದ್ರ ಚೆನ್ನಿ
ಡಾ ಡಿ ಎಸ್ ಚೌಗಲೆ |
0 average based on 0 reviews.