ವೀರಲೋಕದ 63ನೇ ಕೃತಿ ವಿಕ್ರಮ್ ಹತ್ವಾರ್ ಅವರ “ಕಾಗೆ ಮೇಷ್ಟ್ರು”… ಝೀರೋ ಮತ್ತು ಒಂದು’ ಹಾಗು ‘ಹಮಾರಾ ಬಜಾಜ್’ ಎಂಬ ಕಥಾ ಸಂಕಲನದಿಂದ ಓದುಗರನ್ನು ಸೆಳೆದಿರುವ ವಿಕ್ರಮ ಹತ್ವಾರ್, ಕನ್ನಡದ ಅನನ್ಯ ಕತೆಗಾರ ಮತ್ತು ಕವಿ.
Category: | E-books |
Sub Category: | |
Author: | ವಿಕ್ರಮಹತ್ವಾರ |
Publisher: | |
Language: | Kannada |
Number of pages : | |
Publication Year: | |
Weight | |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಹೊಸ ಭಾಷೆ, ವಿಶಿಷ್ಟ ವಸ್ತು-ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಯುಗದ ಪಲ್ಲಟಗಳು, ಜಾಗತೀಕರಣ ಸಂದರ್ಭದಲ್ಲಿನ ಮನುಷ್ಯ ಸಂಬಂಧಗಳು, ದ್ವಂದ್ವಗಳು, ಆಧುನಿಕ ಮನುಷ್ಯನ ಸಂಕಟ ತವಕ-ತಾಕಲಾಟ ಹುಡುಕಾಟ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಮೌಲ್ಯ – ಇವು ವಿಕ್ರಮ ಹತ್ವಾರರ ಕತೆಗಳಲ್ಲಿ ವಿಮರ್ಶಕರು ಗುರುತಿಸಿರುವ ಕೆಲವು ವಿಶೇಷತೆಗಳು.
ಪ್ರಸ್ತುತ ‘ಕಾಗೆ ಮೇಷ್ಟ್ರು’ ಎಂಬ ಕಥಾ ಸಂಕಲನದಲ್ಲಿ ಹುಟ್ಟು ಸಾವು ಎನ್ನುವ ಎರಡು ತುರೀಯ ಸತ್ಯಗಳ ನಡುವೆ, ಮನುಷ್ಯನ ನೆಮ್ಮದಿಯ ಹುಡುಕಾಟದಲ್ಲಿ ವೇದ್ಯವಾಗುವ ಅಸಂಖ್ಯ ಅಣು ಸತ್ಯಗಳ ಮೇಳವಿದೆ. ಬದುಕಿನ ಅಸಂಗತ ಕ್ಷಣಗಳ ಆಳದಲ್ಲಿ ಹುದುಗಿರುವ ದರ್ಶನವು ಕತೆಗಾರನ ಕಾವ್ಯ ಕುಸುರಿಯಲ್ಲಿ ಅನಾವರಣಗೊಳ್ಳುವ ಸೋಜಿಗವನ್ನು ಓದಿನ ಮಾಯೆಯಲ್ಲೇ ಅನುಭವಿಸಬೇಕು. ಇಂಥ ಅನುಭವ ಸುಖದ ಸೆಳೆತ ಈ ಕತೆಗಳನ್ನು ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತವೆ.
ಓದುವ ನಶೆ ನಿಮಗೇರಲಿ…
ವಿಕ್ರಮಹತ್ವಾರ |
0 average based on 0 reviews.