| Category: | ಕನ್ನಡ |
| Sub Category: | ಅನುಭವ ಕಥನ |
| Author: | FATHIMA RALIYA |
| Publisher: | Jeerunde Books |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಫಾತಿಮಾ ರಲಿಯಾ, ತಮ್ಮ ತಾಯಿಗೆ ಕ್ಯಾನ್ಸರ್ ಬೇನೆ ಬಂದಾಗ, ಅವರ ಜತೆಯಲ್ಲಿದ್ದು ಆಸ್ಪತ್ರೆಯಲ್ಲಿ ಕಳೆದ ಅನುಭವ ಕಥನವಿದು. ಆದರೆ ಇದರ ಪರಿಧಿ ಕೇವಲ ತಾಯಿಯ, ಕಾಯಿಲೆಯ ಮತ್ತು ಆಸ್ಪತ್ರೆಲೋಕದ ವಿವರಗಳಿಗೆ ನಿಲ್ಲುವುದಿಲ್ಲ. ತಾಯ ಕಥನದ ಜತೆಗೆ, ಆಸುಪಾಸಿನ ಬದುಕಿನಲ್ಲಿ ನಡೆವ ಹಲವು ವಿದ್ಯಮಾನಗಳನ್ನೂ, ಹಲವರ ವೇದನೆ ಮತ್ತು ಸಂತಸಗಳನ್ನು ಸಮುದಾಯ ಪ್ರಜ್ಞೆಯಲ್ಲಿ ಒಳಗೊಳ್ಳುತ್ತ, ಕಾದಂಬರಿಯಂತೆ ವಿಸ್ತರಣೆ ಪಡೆಯುತ್ತದೆ. ಹೀಗಾಗಿಯೇ ಇದು ಕರಾವಳಿಯ ಅಥವಾ ಭಾರತದ ಸಾಮಾಜಿಕ ಕಾಯಿಲೆಗಳ ಕಥನವಾಗುವುದಕ್ಕೆ ನಿಲ್ಲುವುದಿಲ್ಲ. ಇಲ್ಲಿನ ವ್ಯಕ್ತಿ ಮತ್ತು ಸ್ಥಳಗಳ ಹೆಸರನ್ನು ಬದಲಿಸಿದರೆ, ಎಲ್ಲ ದೇಶದ ಎಲ್ಲ ಕಾಲದ ಮನುಷ್ಯರ ಕಥನವೂ ಆಗುವಂತೆ ಅರಳಿಕೊಳ್ಳುತ್ತದೆ. ಈ ಕಥನದ ಮುಖ್ಯ ಪಾತ್ರವಾದ ಅಮ್ಮ, ಸಾವಿನ ಸಮೀಪ ಹೋಗಿಬರುತ್ತ, ಮಗಳಿಗೆ ಬದುಕಿನ ಪಾಠಗಳನ್ನು ಕಲಿಸುತ್ತ, ಎಲ್ಲರ ತಾಯಾಗುತ್ತಾಳೆ, ದಾರ್ಶನಿಕಳಾಗುತ್ತಾಳೆ. ಇಲ್ಲಿನ ರೂಪಕ ಭಾಷೆಯ ಸೂಕ್ಷ್ಮ ಗದ್ಯವು ಕೆಲವೆಡೆ ಕವಿತೆ ಓದುವ ಅನುಭವ ಕೊಡುತ್ತದೆ. ಇಲ್ಲಿರುವ ವಿಷಾದ ಮತ್ತು ಉತ್ಕಟತೆಗಳು, ಸಾವಿನ ಸನ್ನಿಧಿಯಲ್ಲಿ ಚಿಗುರುವ ಜೀವನಮೀಮಾಂಸೆ ಆಗುತ್ತವೆ. - ರಹಮತ್ ತರೀಕೆರೆ
FATHIMA RALIYA |
0 average based on 0 reviews.