
ಕಾದಂಬರಿಯಲ್ಲಿ ಆದರ್ಶ ಶಿಕ್ಷಕನಾಗಿರುವ ತಂದೆಯ ಮೌಲ್ಯಗಳು ಒಂದೆಡೆಯಾದರೆ, ಅದೇ ದಾರಿಯಲ್ಲಿ ನಡೆದುಬಂದ ಮಗನ ವ್ಯಾಪಾರಿಕ ಆಲೋಚನೆಗಳು ಬೇರೆಯಾಗಿರುತ್ತವೆ. ಇಬ್ಬರು ಬದುಕಿನಲ್ಲಿ ಆರಿಸಿಕೊಂಡ ದಾರಿ ಒಂದೇಯಾದರೂ.. ನೋಡುವ ದೃಷ್ಟಿಕೋನಗಳು ಬೇರೆ ಬೇರೆ. ಇದು ಬರಿ ಅಪ್ಪ ಮಗನ ಕತೆ ಅಲ್ಲ, ಎರಡು ತಲೆಮಾರುಗಳ ನಡುವೆ ಬದಲಾದ ಮನಸ್ಥಿತಿಗಳ ಅಂತರದ ಕತೆ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ವಿವೇಕಾನಂದ ಕಾಮತ್ |
Publisher: | ವೀರಲೋಕ |
Language: | Kannada |
Number of pages : | 156 |
Publication Year: | 2023 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ತಂದೆ ನಿವೃತ್ತ ಆದರ್ಶ ಶಿಕ್ಷಕ. ನೈತಿಕ ಮೌಲ್ಯಗಳಿಗೆ ಸದಾ ಬೆಲೆ ಕೊಟ್ಟು ಬದುಕುತ್ತಾ ಬಂದವನು. ಬದುಕಿನುದ್ದಕ್ಕೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಿ ಕೊಡುವಲ್ಲಿ, ಶಿಕ್ಷಣದ ಜೊತೆ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತರಿಸಿ, ಸದಾ ಅವರ ಶ್ರೇಯಸ್ಸಿಗಾಗಿ ಬದುಕಿದವನು.
ಈತನ ಮಗ, ತಂದೆಯ ಹಾದಿಯಲ್ಲೇ ನಡೆದವನು. ಮುಂದೆ ಅದೇ ಶಿಕ್ಷಣವನ್ನು ವಾಣಿಜೀಕರಿಸಿ ಬಿಕರಿಗಿಡುತ್ತಾನೆ. ಅವನಿಗೆ ಶಿಕ್ಷಣ ವ್ಯಾಪಾರ. ವಿದ್ಯಾರ್ಥಿಗಳು ಗ್ರಾಹಕರು.
ಇಲ್ಲಿ ಮೌಲ್ಯಗಳ ಮುಂದೆ ವ್ಯಾಪಾರ, ಸ್ವಾರ್ಥ, ಆಮಿಷ, ಪ್ರತಿಷ್ಠೆ ಎಲ್ಲವೂ ಮುಖಾಮುಖಿಯಾಗಿದೆ. ಪುತ್ರ ಮೋಹದ ಮುಂದೆ ನೈತಿಕತೆ ಸೋಲುವುದೋ? ಗೆಲ್ಲುವುದೋ? ಎನ್ನುವುದೇ ಕಥೆ.
ಮಹತ್ವಕಾಂಕ್ಷೆಗಳ ರೆಕ್ಕೆ ಕಟ್ಟಿಕೊಂಡು ಕಲುಷಿತ ಗಾಳಿಯೊಳಗೆ ಇಳಿದ ಬಳಿಕ ಅದು ನಿರಾಯಸವಾಗಿ ನಮ್ಮನ್ನು ಆವರಿಸಿ ಬಿಡುತ್ತದೆ. ಇಲ್ಲಿ ಮಗನಿಗಾದದ್ದು ಇದೇ.. ಇದು ಗುರು ಶಿಷ್ಯನ, ತಂದೆ ಮಗನ, ಎರಡು ತಲೆಮಾರಿನ ನಡುವೆ ಬದಲಾದ ಮನಸ್ಥಿತಿಗಳ ಅಂತರದ ಕಥೆ. ಒಳ ಲೋಕದ ಆರೋಹಣದ ಕಥೆ.
-ವಿವೇಕಾನಂದ ಕಾಮತ್
ವಿವೇಕಾನಂದ ಕಾಮತ್ |
0 average based on 0 reviews.