ಮದುವೆಗೆ ಮುನ್ನ ವಧುವಿನ ಪೋಷಕರು, ಕಡೆಯವರು ವರನ ವರಮಾನ ಎಷ್ಟಿದೆ ಎಂಬುದನ್ನು ಆದ್ಯತೆಯ ಮೇರೆಗೆ ಪರಿಗಣಿಸದೆ ಇರುವುದಿಲ್ಲ. ನಾಲ್ಕು ಪುರುಷಾರ್ಥಗಳಲ್ಲಿ ಅರ್ಥಕ್ಕೆ ಎರಡನೇ ಸ್ಥಾನವಿದೆ. ಕ್ರಿಸ್ತಪೂರ್ವ ಕಾಲದಲ್ಲೇ ಭಾರತದಲ್ಲಿ ಚಾಣಕ್ಯ, ಅರ್ಥಶಾಸ್ತ್ರವನ್ನು ಬರೆದಿದ್ದ! ಈ ಮೂಲಕ ಹಣದ ಸಂಪಾದನೆಯನ್ನು ವಿಜ್ಞಾನಕ್ಕೆ ಸಮವೆಂದು ಪ್ರಾಚೀನ ಭಾರತ ಪುರಸ್ಕರಿಸಿತ್ತು. ಅಂಥ ದೇಶದಲ್ಲಿ ಹಣಕಾಸು ಸಾಕ್ಷರತೆ ಎಷ್ಟು ಕಡಿಮೆ ಎಂದರೆ ದಿಗ್ಧಮೆಯಾಗುತ್ತದೆ. ಹಣದ ಬಗ್ಗೆ ಬಹಿರಂಗವಾಗಿ ಮಾತನಾಡುವುದೇ ಪಾಪ ಎಂಬ ನಿಷೇಧಾತ್ಮಕ ಮನಸ್ಥಿತಿಯಿಂದ ಕುಟುಂಬ, ಸಮಾಜ, ದೇಶಕ್ಕೆ ಉಂಟಾಗಿರುವ ನಷ್ಟದ ಲೆಕ್ಕ ಇಟ್ಟವರಿಲ್ಲ. ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಆರ್ಥಿಕ ಬೆಳವಣಿಗೆ ಪ್ರತಿಯೊಬ್ಬನ ವೈಯಕ್ತಿಕ ಸಂಪತ್ತಿನ ಹೆಚ್ಚಳಕ್ಕೂ ಕಾರಣವಾಗಬೇಕಿದ್ದರೆ, ಸಿರಿವಂತಿಕೆಯ ಸೂತ್ರಗಳನ್ನು 100% ತಿಳಿಯಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕವನ್ನು ನಯ ಓದುಗರ ಮಡಿಲಿಗೆ ಇಡುತ್ತಿದ್ದೇವೆ.
Category: | ಕನ್ನಡ |
Sub Category: | ಹಣಕಾಸು - ವ್ಯವಹಾರ |
Author: | Keshava prasad B |
Publisher: | Sneha Book House |
Language: | Kannada |
Number of pages : | |
Publication Year: | 2024 |
Weight | 1/8 demi |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
Keshava prasad B |
0 average based on 0 reviews.