nil
ಆರಂಭದಿಂದಲೂ ನಿಮ್ಮ ಚೈತನ್ಯಪೂರ್ಣ ಬರವಣಿಗೆ ಮನ ಸೆಳೆಯಿತು. ಪಟ್ಟಿ ಪಾಡು, ಪರದಾಟಗಳ ನಡುವೆಯೂ ತೂರಿ ಬರುತ್ತಿದ್ದ ನಗೆಚಟಾಕಿ, ಅನ್ಯ ಜನಗಳ ಸ್ನೇಹಮಿಲನ, ವೀಲ್ ಚೇರಿನಲ್ಲಿ ಏಕಾಂಗಿಯಾಗಿ ಪಯಣಿಸಿದ ಪಯಣಿಕರ ಸಾಹಸಗಾಥೆ, ಭಾಷೆ ಬರದ ಹೆಣ್ಣೆಂದು ತನ್ನ ಫೈಟಿಗೆ ಹೋಗುತ್ತಿದ್ದವಳು ಓಡಿ ಬಂದು ನಿಮ್ಮನ್ನು ಅಪ್ಪಿಕೊಂಡು ಹೋದದ್ದು ಒಂದು ರೀತಿಯ ಮಾನವ ವ್ಯಕ್ತಿತ್ವಗಳ ಕಿರು ನೋಟ, ನಿಮ್ಮ ಲವಲವಿಕೆಯ " ಮಾತುಗಳಲ್ಲಿ ರೂಪ ತಾಳಿ. ಇದೊಂದು ಚೆಂದದ ಜೀವಂತ ಕಥಾ ಚಿತ್ರ ಶಿಲ್ಪ. -ಲೀಲಾವತಿ ಎಚ್.ಆರ್
ಈ ಕೃತಿಯನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿರುವ ಡಾ| ಎಚ್.ಆರ್. ಕೃಷ್ಣಮೂರ್ತಿಯವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದವರು. ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನಾಧಿಕಾರಿಯಾಗಿ ಆಕಾಶವಾಣಿ ಪ್ರವೇಶಿಸಿದ ಇವರು, ಈಗ ಆಕಾಶವಾಣಿಯ ದಕ್ಷಿಣ ವಲಯದ ಉನ್ನತಾಧಿಕಾರಿ. ಪ್ರಕೃತಿ, ಪರಿಸರ, ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ವಿಮರ್ಶೆ: ಜಗತ್ತಿನಲ್ಲಿ ಕಣ್ಮರೆಯಾಗುತ್ತಿರುವ ಜೀವಿಗಳ ಪಟ್ಟಿಯಲ್ಲಿ ಮಾರ್ಜಾಲ ಕುಟುಂಬಕ್ಕೆ ಸೇರಿದ ಹುಲಿಗಳೂ ಸೇರಿವೆ. ಹುಲಿಗಳ ಜೀವನದ ಬಗ್ಗೆ ಹಾಗೂ ಅವು ನಶಿಸುತ್ತಿರುವದಕ್ಕೆ ಕಾರಣಗಳನ್ನು ಕಾರಂತರು ಈ ಪುಸ್ತಕದಲ್ಲಿ ನೀಡಿದ್ದಾರೆ. ಮನುಷ್ಯನ ಸಹಜೀವಿಗಳಲ್ಲಿ ಒಂದಾದ ಹುಲಿಯ ಕುರಿತಂತೆ ಆಸಕ್ತ ಇರುವ ಎಲ್ಲರನ್ನೂ ಸೆಳೆಯುವ ಪುಸ್ತಕ ಪ್ರಜಾವಾಣಿ ೧೧ ಮಾರ್ಚ್ ೨೦೦೭. ಹುಲಿಗಳನ್ನು ಏಕೆ ಉಳಿಸಬೇಕು? ಎನ್ನುವ ಲೇಖನದಲ್ಲಿ ಬರೆಯುತ್ತಾ " ನಮ್ಮ ದಾಳಿಗೀಡಾಗಿರುವ ನೈಸರ್ಗಿಕ ಭೂ ಪ್ರದೇಶಗಳು ಎಷ್ಟರ ಮಟ್ಟಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿವೆಯೆಂಬುದನ್ನು ಸೂಚಿಸುವ ಎಚ್ಚರಿಕೆಯ ದೀಪವೇ ಹುಲಿ. ಮಲ್ಲ ಕರ್ನಾಟಕ ೨೩-೦೩-೨೦೦೭.
Showing 9361 to 9390 of 9464 results