nil
#
ಡಾ ನಾ ಸೋಮೇಶ್ವರ ಒಬ್ಬ ಭಾರತೀಯ ರಸಪ್ರಶ್ನೆ ಮಾಸ್ಟರ್, ದೂರದರ್ಶನ ನಿರೂಪಕ ಮತ್ತು ಬರಹಗಾರ. ಅವರು ವಿಜ್ಞಾನ ಮತ್ತು ವೈದ್ಯಕೀಯವನ್ನು ಮುದ್ರಣದಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡ ಭಾಷೆಯಲ್ಲಿ ಜನಪ್ರಿಯಗೊಳಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಜೀವನಾಡಿ ಎಂಬ ಮಾಸಿಕ ವೈದ್ಯಕೀಯ ಪತ್ರಿಕೆಯ ಸಂಪಾದಕರೂ ಆಗಿದ್ದರು.
ಮೌಲ್ಯಗಳ ಸರದಾರ ಡಾ. ರಾಜ್ ಕುಮಾರ್.
ಮಲ್ಲಿಗೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕುವೆಂಪು, ಬೇಂದ್ರೆ,ಕಾರಂತಜ್ಜರ ಬಣ್ಣಬಣ್ಣದ ಚಿತ್ರಗಳಿಂದ ಕೂಡಿದ್ದ ಶಾಲೆಯ ಗೋಡೆ, ಊರಿನ ಪರಿಸರ ಇವೆಲ್ಲಾ ಪುಸ್ತಕದ ಪುಟ ತಿರುಗಿಸುತಿದ್ದಂತೆ ಎಂಥವರನ್ನು ಕೂಡ ತಮ್ಮ ಬಾಲ್ಯಕ್ಕೆ ಮರಳಿ ಕರೆದೊಯ್ಯೋದರಲ್ಲಿ ಡೌಟೇ ಇಲ್ಲ.. ಅಷ್ಟು ಚೆಂದವಾಗಿ ಕಥೆಗೆ ಪೂರಕವಾಗಿ ಆಕರ್ಷ್ ಎಂ.ಆರ್ ಅವರು ಚಿತ್ರಗಳ ಬಿಡಿಸಿದ್ದಾರೆ. ತರಲೇ ಕಿತಾಪತಿ ತುಂಟಾಟಗಳಿಗೆ ಎತ್ತಿದ ಕೈ, ಓದುವುದರಲ್ಲೂ ಕೂಡ ಅಷ್ಟೇ ಫೇಮ್ಮಸ್ಸಾದ ಆರನೇ ತರಗತಿಯ ಐವರು ಮಕ್ಕಳು ಸೇರಿ ಒಂದು ತಂಡ ಕಟ್ಟಿಕೊಂಡು ಶಾಲೆಯ ಪ್ರತಿಭಾ ಕಾರಂಜಿಯಲ್ಲಿ ಸೋಲಾರ್ ಪ್ಯಾನೆಲ್ ತಯಾರಿಸಿ, ಗೆದ್ದು ಇಡೀ ಊರಿಗೆ ಮಾದರಿಯಾದ ಮಕ್ಕಳ ಸಾಹಸಮಯ ಎಳೆ ಹೊಂದಿರುವ ಕಾದಂಬರಿ ಮೂರರಿಂದ ಹನ್ನೆರಡನೇ ವಯಸ್ಸಿನ ಮಕ್ಕಳವರೆಗೂ ಒಂದೊಳ್ಳೆ ಕಥೆಯ ಜೊತೆಗೆ ಸೋಲಾರ್ ಪ್ಯಾನಲ್ ಹೇಗೆ ತಯಾರಿಸುತ್ತಾರೆ, ಅದರ ಕಾರ್ಯವೈಖರಿ ಹೇಗೆ? ಪ್ಯಾನಲ್ನ ಮುಖ್ಯ ಕೆಲಸವೇನು? ಈರುಳ್ಳಿ ಕತ್ತರಿಸಿದಾಗ ಕಣ್ಣಲ್ಲೇಕೆ ನೀರು ಬರುತ್ತೆ ಹೀಗೆ ವಿಜ್ಞಾನದ ಪಾಠವನ್ನು ತಿಳಿಸುತ್ತದೆ.
ಯಂತ್ರ ಕಥೆ ಯಂತ್ರ ಸಾಧನಗಳ ಉಗಮ, ಇತಿಹಾಸ ಹಾಗೂ ದೈನಂದಿನ ಬದುಕಿನಲ್ಲಿ ಅವುಗಳ ಪಾತ್ರವನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಒಂದು ಪ್ರಯತ್ನ. ವಿಜ್ಞಾನದ ಪ್ರಗತಿಯಲ್ಲಿ ಯಂತ್ರಗಳ ಪಾತ್ರ ಮಹತ್ತರ. ಪ್ರತಿಯೊಂದು ಯಂತ್ರವೂ ವಿಕಾಸದ ಹಾದಿಯಲ್ಲಿ ತನ್ನ ವಿಶಿಷ್ಟ ಕೊಡುಗೆ ನೀಡಿದೆ. ಯಂತ್ರೋಪಜೀವಿ ಮಾನವನಿಗೆ ಈ ಪರಂಪರೆಯ ಅಧ್ಯಯನ ಅನಿವಾರ್ಯ, ಲಾಭದಾಯಕ. ಈ ಪುಸ್ತಕದ ಲೇಖಕರಾದ ಶ್ರೀ ಎಂ. ಶಿವಕುಮಾರ್ ಸ್ವತಃ ಯಂತ್ರ ವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿರುವವರು, ಹಲವು ಯಂತ್ರ ಹತಾರಗಳ ವಿನ್ಯಾಸಕ್ಕೆ, ನಿರ್ಮಾಣಕ್ಕೆ ಕಾರಣ ಪುರುಷರು. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಲೇಖಕರ ಈ ಕೃತಿ ವಿಜ್ಞಾನ ವಿಷಯಕ್ಕೆ ಸಾಹಿತ್ಯದ ಮೆರುಗನ್ನು ಪಡೆದಿದ್ದು, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಥಮ ಪ್ರಶಸ್ತಿ ಪಡೆದ ಪುಸ್ತಕವಾಗಿದೆ.
Showing 2461 to 2490 of 3346 results