ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ..? ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲೀವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟುಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!” ಕಳ್ಳನನ್ನು ಹಿಡಿದಂತೆ ಮಾತಾಡಿದಳು. ಥತ್! ನನ್ನನ್ನ ಡೈಲೆಮಾದಲ್ಲಿ ಹಾಕುತ್ತಿದ್ದಾಳಲ್ಲ ಇವಳು ಎನ್ನಿಸಿತು. -'ಸೀಕ್ರೆಟ್ ಸ್ಯಾಂಟಾ' ಕತೆಯಿಂದ ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದವನು ಅವನೇ... ಮಗಳನ್ನು ಪೂರ್ವಿ ಎಂದೇ ಕರೆಯಬೇಕೆಂದು ನಿರ್ಧರಿಸಿದವನು ಅವನೇ... ಹಡೆದ ಹನ್ನೊಂದನೇ ದಿನಕ್ಕೆ ಬೆತ್ತದ ಡಬ್ಬಿಯ ಮುಚ್ಚಳದಲ್ಲಿ ಗುಲಾಬಿ ದಾಸವಾಳದ ಪಕಳೆಯಂತೆ ಮಲಗಿದ ಮಗುವನ್ನು ಹೊತ್ತು ಹೊಸ್ತಿಲು ದಾಟಿಸಿದವನೂ ಅವನೇ... ದಾವಣಗೆರೆಗೆ ಹೊರಡುವ ಮುಂಚೆ ಪೂರ್ವಿಯನ್ನು ತೋಳಲ್ಲೆತ್ತಿಕೊಂಡು ಕುಮಾರವ್ಯಾಸ ಭಾರತದ 'ಗಜಮುಖನೆ ಮೆರೆವೇಕದಂತನೆ ನಿಜಗುಣಾನ್ವಿತ ಪರಶುಧಾರನೆ' ಸಾಲುಗಳನ್ನು ರಾಗಬದ್ಧವಾಗಿ ಹಾಡಿದವನೂ ಅವನೇ... ಮಗುವಿಗೆ ತಿಂಗಳು ತುಂಬಲು ಇನ್ನೇನು ಎರಡು ದಿನ ಇರುವಾಗ ದಾವಣಗೆರೆಯಿಂದ ಅಂಬ್ಯುಲೆನ್ಸಿನಲ್ಲಿ ಉದ್ದುದ್ದ ಮಲಗಿ ಹೆಣವಾಗಿ ಬಂದವನೂ ಅವನೇ. - 'ಪಟಾಕಿ ಕೈಚೀಲ' ಕತೆಯಿಂದ ಎಲ್ಲೋ ನೆಮ್ಮದಿಯಲ್ಲಿ ತಂಗಿದ್ದ, ಇನ್ನೆಲ್ಲೋ ಬವಣೆಗಳಿಂದ ಬೇಸತ್ತಿದ್ದ ಮತ್ತೆಲ್ಲೋ ವೈರಾಗ್ಯ ತಳೆದು ಕೂತಲ್ಲೇ ಹುತ್ತ ಬೆಳೆಸಿಕೊಂಡಿದ್ದ ಕತೆಗಳನ್ನು ಅವುಗಳ ಪಾಡಿಗೇ ಬಿಟ್ಟುಬಿಡದೆ ಕರೆದು ಕರೆದು ಕಟ್ಟಿಹಾಕಿದ್ದಿದೆ, ಚಿಕ್ಕಂದಿನಿಂದಲೂ, ಸಾಕಿನ್ನು ಕತೆಗಳನ್ನು ಕರೆದದ್ದು, ಅವುಗಳನ್ನು ಕಟ್ಟಿಹಾಕಿದ್ದು ಎಂದುಕೊಂಡಷ್ಟೂ ಇನ್ನಷ್ಟು ಅವುಗಳ ಬೆನ್ನು ಬೀಳುತ್ತೇನೆ. - 'ಕತೆ ಜಾರಿಯಲ್ಲಿರಲಿ' ಕತೆಯಿಂದ
nil
ಕಥಾಸಂಕ್ರಾಂತಿ2024 ಕಥಾಸಂಕಲನದಲ್ಲಿ ಮೂರು ಬಹುಮಾನಿತ ಕಥೆಗಳು ಹಾಗೂ ಏಳು ಮೆಚ್ಚುಗೆ ಪಡೆದ ಕಥೆಗಳು ಇವೆ. ಇಲ್ಲಿನ ಪ್ರತಿ ಕಥೆಯೂ ವಿಶಿಷ್ಟ, ವಿಭಿನ್ನ, ಪ್ರಯೋಗಶೀಲತೆ, ಭಾಷಾ ಬಳಕೆ, ಕಥಾವಸ್ತುವಿನ ಆಯ್ಕೆಯಲ್ಲಿ ತೋರಿರುವ ವೈವಿಧ್ಯತೆ, ಕಥಾವಿನ್ಯಾಸ, ನಿರೂಪಣಾ ಕುಶಲತೆ ಹೀಗೆ ಎಲ್ಲದರಲ್ಲಿಯೂ ಈ ಕಥೆಗಳು ತಟ್ಟನೆ ಗಮನ ಸೆಳೆಯುತ್ತವೆ. ಸಮಕಾಲೀನ ವಿಷಯ, ಗ್ರಾಮೀಣ ಸಮಾಜದ ಬದುಕಿನಲ್ಲಿ ಇಣುಕುವ ಚಲನಶೀಲತೆ, ಮನುಷ್ಯರ ಸಂಕಟಗಳು, ಸಂದಿಗ್ಧತೆಗೆ ಸಿಲುಕಿಸುವ ಪ್ರೇಮ, ಬದುಕಿನ ಹೋರಾಟದಲ್ಲಿ ಗೆಲುವು ಸಾಧಿಸಲು ಕಂಡುಕೊಳ್ಳುವ ಹೊಸ ದಾರಿಗಳು, ಮುಗ್ಧ ಬಾಲಕಿಯರು ಎದುರಿಸಬೇಕಾದ ತಲ್ಲಣಗಳು, ಭಾಷೆಯೊಂದಿಗೆ ಬದುಕುವ ವ್ಯಕ್ತಿ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಬಗೆ... ಈ ಕಥೆಗಳಲ್ಲಿ ಅಡಕವಾಗಿವೆ. ಕಥಾಸ್ಪರ್ಧೆಗೆ ಬಂದ ನೂರಾರು ಕಥೆಗಳನ್ನು ಹಲವು ವಿಧದಲ್ಲಿ ಜರಡಿ ಹಿಡಿದು ಅಂತಿಮ ಸುತ್ತಿನಲ್ಲಿ ಆಯ್ದ ಐವತ್ತು ಕಥೆಗಳಲ್ಲಿ ಕೊನೆಗುಳಿದ ಹತ್ತು ಕಥೆಗಳು ಕನ್ನಡದ ಲೇಖಕರು ಕಥಾಪ್ರಕಾರದಲ್ಲಿ ತುಳಿಯುತ್ತಿರುವ ಹೊಸ ದಾರಿಗಳನ್ನು, ಹೊಸ ಲೇಖಕರ ಮನೋಧರ್ಮವನ್ನು ಸಮರ್ಥವಾಗಿ ಪ್ರತಿನಿಧಿಸುತ್ತವೆ.
ಇದು ಮಕ್ಕಳ ಪ್ರತಿಯಾಗಿದ್ದರೂ ಹಿರಿಯರು ಕೂಡ ಓದಿ ಆನಂದಿಸುವಂಥದ್ದು. ಪಾಲಕರು ಓದಿ ಮಕ್ಕಳಿಗೂ ಓದಿಸಿ ಟಿವಿ ಕಂಪ್ಯೂಟರ್ ಮೊಬೈಲ್ ಗಳಿಗಿಂತ ಪುಸ್ತಕಗಳನ್ನು ಓದುವುದು ಮಕ್ಕಳ ವಿಕಾಸ ಹಾಗೂ ಆರೋಗ್ಯದ ಹಿತೈದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು ಉತ್ತಮ ಪುಸ್ತಕಗಳನ್ನು ಮಕ್ಕಳಿಂದ ಓದಿಸಿ ಅವರ ವ್ಯಕ್ತಿತ್ವ ವಿಕಸನವಾದರೆ ಈ ಪುಸ್ತಕ ಬರೆದದ್ದು ಸಾರ್ಥಕವಾದಂತೆ
ಇದು ಮಕ್ಕಳ ಪ್ರತಿಯಾಗಿದ್ದರೂ ಹಿರಿಯರು ಕೂಡ ಓದಿ ಆನಂದಿಸುವಂಥದ್ದು. ಪಾಲಕರು ಓದಿ ಮಕ್ಕಳಿಗೂ ಓದಿಸಿ ಟಿವಿ ಕಂಪ್ಯೂಟರ್ ಮೊಬೈಲ್ ಗಳಿಗಿಂತ ಪುಸ್ತಕಗಳನ್ನು ಓದುವುದು ಮಕ್ಕಳ ವಿಕಾಸ ಹಾಗೂ ಆರೋಗ್ಯದ ಹಿತೈದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು ಉತ್ತಮ ಪುಸ್ತಕಗಳನ್ನು ಮಕ್ಕಳಿಂದ ಓದಿಸಿ ಅವರ ವ್ಯಕ್ತಿತ್ವ ವಿಕಸನವಾದರೆ ಈ ಪುಸ್ತಕ ಬರೆದದ್ದು ಸಾರ್ಥಕವಾದಂತೆ.
ಬಹುತೇಕ ಹಳ್ಳಿಗಳಲ್ಲಿ ಸುಗ್ಗಿಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಧಾನ್ಯವನ್ನು ಊರ ದೇವರಿಗೆ ಎಲ್ಲರೂ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು ಇತ್ಯಾದಿಗಳ ಸೋಂಕಿಲ್ಲದೆ ಎಲ್ಲರೂ ಈ ದಾನ ಮಾಡುತ್ತಾರೆ. ಅವನ್ನೆಲ್ಲಾ ಸ್ವೀಕರಿಸಿದ ದೇವಸ್ಥಾನವು ಸುಗ್ಗಿಹಬ್ಬ ಹಮ್ಮಿಕೊಳ್ಳುತ್ತದೆ. ಊರವರೇ ನೀಡಿದ ಧಾನ್ಯಗಳನ್ನು ಬಳಸಿ ಊರವರೇ ಅಡಿಗೆ ತಯಾರಿಸಿ, ಎಲ್ಲರೂ ಊಟ ಮಾಡುತ್ತಾರೆ. ಈ ಊಟವು ಊರವರಿಗೆಲ್ಲಾ ಅತ್ಯಂತ ರುಚಿಯೆನ್ನಿಸುತ್ತದೆ.ಇಂತಹ ಸುಗ್ಗಿಹಬ್ಬದ ರುಚಿ ಈ ಕಥಾಸಂಕಲನಕ್ಕೆ ದಕ್ಕಿದೆ. ಕನ್ನಡ ಸಾಹಿತ್ಯಲೋಕದ ಸಾಕಷ್ಟು ಹೊಸ ಕತೆಗಾರರು ಮತ್ತು ಒಂದಿಷ್ಟು ಹಳಬರು ಈ ಸಂಕಲನಕ್ಕೆ ತಮ್ಮ ಕತೆಯನ್ನು ನೀಡಿದ್ದಾರೆ. ಸದ್ಯದ ಕನ್ನಡ ಲೋಕದ ಹೊಸ ಬರವಣಿಗೆಯ ಪಕ್ಷಿನೋಟವನ್ನು ಈ ಸಂಕಲನ ನೀಡುತ್ತದೆ. ಊರವರೆಲ್ಲರೂ ಒಂದಾದಾಗ ಮೂಡುವ ಸಹೃದಯತೆ, ಆತ್ಮೀಯತೆ ಮತ್ತು ಲವಲವಿಕೆಯೂ ಇಲ್ಲಿ ಕಾಣುತ್ತದೆ. ಇಂತಹ ಒಗ್ಗಟ್ಟಿನ ಕಾರ್ಯಗಳು ಸದ್ಯದ ಸಾಹಿತ್ಯದ ಲೋಕವನ್ನು ಜೀವಂತ ಉಳಿಸುವುದಕ್ಕೆ ಅವಶ್ಯ ಬೇಕಾದ ಲಸಿಕೆಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯ ಹಿರಿಯ ಮಹನೀಯರೆಲ್ಲರ ಪ್ರತಿಫಲನವೂ ಈ ಕತೆಗಳಲ್ಲಿ ಕಾಣುತ್ತದೆ. ಆ ನಿಟ್ಟಿನಿಂದ ಇದು ಪರಂಪರೆಯ ನೆಲದಲ್ಲಿ ಬೆಳೆದ ಹೊಸ ಬೆಳೆಯಾಗಿದೆ. ಊರ ದೇವಸ್ಥಾನವೂ ಒಂದಿಷ್ಟು ಹೊಲವನ್ನು ಹೊಂದಿದ್ದು, ಅದೂ ಕೊಯ್ದು ಮಾಡಿದ ಧಾನ್ಯದಲ್ಲಿ ಒಂದಿಷ್ಟು ಭಾಗವನ್ನು ಸುಗ್ಗಿಹಬ್ಬಕ್ಕೆ ದಾನ ಮಾಡುತ್ತದೆ. ಅದೇ ರೀತಿ ಈ ಸಂಕಲನವನ್ನು ಶ್ರದ್ಧೆಯಿಂದ ಸಂಪಾದಿಸಿದ ಅಜಿತ್ ಹರೀಶಿ ಮತ್ತು ವಿಠಲ್ ಶೆಣೈ ತಮ್ಮ ಕತೆಯನ್ನೂ ಇಲ್ಲಿ ಓದುಗರಿಗೆ ಕೊಟ್ಟಿದ್ದಾರೆ. ರುಚಿಯ ನಿರ್ಧಾರದಲ್ಲಿ ನಾಲಿಗೆಗಿಂತಲೂ ಮನಸ್ಸು ದೊಡ್ಡ ಪಾತ್ರವಹಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ತಯಾರಿಸಿದ ಸುಗ್ಗಿಯೂಟ ರುಚಿಯಾಗಿರಲು ಮನಸ್ಸೇ ಮುಖ್ಯ ಕಾರಣ. ಆದರೆ ಪಕ್ಕದೂರಿನವರೂ ನಮ್ಮೂರಿನ ಸುಗ್ಗಿ ಊಟ ರುಚಿ ಎಂದರೆ ಆಗ ಆ ಪಾಕ ಮಹತ್ವ ಪಡೆದುಕೊಳ್ಳುತ್ತದೆ. ಅಂತಹ ದಾರಿಯಲ್ಲಿ ಇಲ್ಲಿನ ಹಲವು ಕತೆಗಳಿವೆ ಎನ್ನುವುದು ನನಗೆ ಭರವಸೆಯನ್ನು ಕೊಟ್ಟಿದೆ.
#
'ಕಂದಕ' ಈ ಕೃತಿಯ ಲೇಖಕರಾದ ಭಾರದ್ವಾಜ ಕೆ. ಆನಂದತೀರ್ಥ, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ನಿವಾಸಿ, ಕೆ. ಆನಂದತೀರ್ಥ ಮತ್ತು ಸುಮಿತ್ರಮ್ಮ ದಂಪತಿಯ ಮಗ. ಎಂ.ಎ. ಪದವೀಧರ ಭಾರದ್ವಾಜರಿಗೆ ಕೃಷಿ, ಪತ್ರಿಕೋದ್ಯಮ, ಬರವಣಿಗೆ, ಪ್ರವಾಸ ಎಲ್ಲವೂ ಹವ್ಯಾಸ. ಇವರ ಅವನಿ'ಗೆ (ಕವನ ಸಂಕಲನ), ನೆನಪುಗಳು ಮಾಸುವ ಮುನ್ನ (ಎಂ.ಸಿ. ನಾಣಯ್ಯ ಅವರ ಜೀವನ ಚರಿತ್ರೆಯ ನಿರೂಪಣೆ) ಕಾನನದ ಅಂಚಿನಲ್ಲಿ (ಕಾದಂಬರಿ), ಕಳೆದುಕೊಂಡವರು (ಕಾದಂಬರಿ), ಕಣಿವೆಯ ಆಳದಿಂದ (ಅಂಕಣ ಬರಹಗಳ ಸಂಗ್ರಹ), ಕನವರಿಕೆಗಳು (ಲಲಿತ ಪ್ರಬಂಧಗಳ ಸಂಗ್ರಹ), ಕಂದಿಲು (ಕೆಲವು ನಿವೃತ್ತ ಶಿಕ್ಷಕರ ಸಂಕ್ಷಿಪ್ತ ಜೀವನ ಚರಿತ್ರೆ), ಕೌತುಕವಲ್ಲದ ಕ್ಷಣಗಳು (ಲಲಿತ ಪ್ರಬಂಧಗಳ ಸಂಗ್ರಹ), ನೀರು ನುಗ್ಗಿದ ಮೇಲೆ (ಪ್ರಬಂಧಗಳ ಸಂಗ್ರಹ) ಹಾಗೂ ಕರೋನಯ್ಯ ಬಂದವ್ನಿಗೆ (ಕಾದಂಬರಿ), ಸಂದಾಯಿ(ಕಾದಂಬರಿ), ಕ್ರಮಣ (ಕಾದಂಬರಿ) ಈಗಾಗಲೇ ಪ್ರಕಟವಾಗಿದೆ. -ಎನ್. ನಾಗರಾಜ್ ರಾವ್ ರಂಗಕರ್ಮಿ ಬಸವನಗುಡಿ, ಬೆಂಗಳೂರು.
ಕನಸುಗಳನ್ನು ಶೃಂಗರಿಸುವ ಜರೂರನ್ನು ಕಾಪಾಡಿಕೊಳ್ಳುವುದು. ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆಯನ್ನು ಮುಟ್ಟಲು ಕಾದಂಬರಿ ಮೇರೆ ಮೀರಿ ಪ್ರಯತ್ನಿಸಿದೆ ಮತ್ತು ಆ ಮೂಲಕ ಸರ್ವಾಂಗೀಣ ಬೆಳವಣಿಗೆ ಸಾಧ್ಯತೆಯನ್ನು ಸಾರಲು ಪರಿಕ್ರಮಿಸಿದೆ. ಎಲ್ಲಾ ತಾರತಮ್ಯವನ್ನು ತಿರಸ್ಕರಿಸಿ ಸಾಮಾಜಿಕ ಕಳಕಳಿಯ ಅಂಶವನ್ನು ಎತ್ತಿಹಿಡಿಯುವ ಮಾರ್ಗದಲ್ಲಿ ಸಾಗಿದೆ. ಲೇಖಕರೊಬ್ಬರ ಲೇಖನಿಯಲ್ಲಿ ಎಲ್ಲವೂ ಶುಭಂ ಆಗುವ ಸಂಭವವಿರುವುದರಿಂದ, ಕಾದಂಬರಿಯೂ ಸಹ ಆತಂಕ, ತಲ್ಲಣಗಳನ್ನು ಹೊತ್ತು ಕೊಂಡೇ, ಆದಷ್ಟೂ ಬದುಕಿನ ಸಹಜತೆಯನ್ನು ಕಾಯ್ದುಕೊಳ್ಳಲು ಯತ್ನಿಸಿದೆ. ಕಥೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಪಾತ್ರಗಳಿಗೂ ಅವಕಾಶವಿದೆ. ಅಧ್ಯಾಯದ ಉಪಕತೆಗಳಲ್ಲಿ ಕನೆಕ್ಟಿವಿಟಿ ಇದೆ. ಒಟ್ಟು ಮುನ್ನೂರಕ್ಕೂ ಹೆಚ್ಚು ಪುಟಗಳ ಕಾದಂಬರಿ ಮೂವತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಸಾದಾಸೀದವಾಗಿ ಯಾವುದೇ ಭಾರವಿಲ್ಲದೇ ಸರಳವಾಗಿ ಓದಿಸಿಕೊಳ್ಳುತ್ತದೆ. ಉದ್ವಿಗ್ನತೆ, ಒತ್ತಡದ ಸನ್ನಿವೇಶಗಳನ್ನು ಬರೆಯುವಾಗ ತೀರಾ ಒದ್ದಾಡದೆ, ನಿರುದ್ವಿಗ್ನವಾಗಿ ನಿರೂಪಿಸುತ್ತಾ ನೇರ ಮಾರ್ಗಕ್ಕೆ ತಂದು ಬಿಡುತ್ತಾರೆ. ಶೃಂಗಾರದ ಸಮಯ ತೀರಾ ಕಡಿಮೆಯಿವೆ. ಧಾರಾವಾಹಿಗಳಂತೆ ಅಸಹಜತೆಗಳಿಲ್ಲದೆ, ಕೃತಕ ಅಲಂಕಾರಗಳಿಲ್ಲದೆ, ನಿರಾಡಂಬರವಾಗಿ ವಿನ್ಯಾಸಿಸಿದ್ದಾರೆ. ಒಂದು ಸಿನೆಮಾವನ್ನು ಕುಟುಂಬ ಸಮೇತವಾಗಿ ನೋಡಬಹುದು ಅನ್ನುತ್ತಾರಲ್ಲ ಹಾಗೆ ಕನಸು ಸೊಗಸು ಎಲ್ಲಾ ವರ್ಗದ, ವಯೋಮಾನದ ಮಂದಿಯೂ ಓದಬಹುದಾದ ವಸ್ತು ವಿಷಯ ಹೊಂದಿದೆ. ಶ್ರೀನಾಥರಿಗೆ ಒಳಿತಾಗಲಿ, ಅವರು ಹಲವಾರು ಪ್ರಕಾರಗಳಲ್ಲಿ ಬರೆಯುವಂತಾಗಲಿ. ಈ ಕಾದಂಬರಿಯ ಸೊಗಡು ಸಾಹಿತ್ಯಕವಾಗಿ ಸಾಕಷ್ಟು ಹರಡಲಿ ಎಂಬ ಸದಾಶಯದೊಡನೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ?
ಇತ್ತೀಚೆಗೆ ಬರೆಯುತ್ತಿರುವ ಕತೆಗಾರರಲ್ಲಿ ನೀವು ಹೆಚ್ಚು ಇಷ್ಟವಾಗುತ್ತೀರಿ. ಮನುಷ್ಯರ ಮನಸ್ಸಿನೊಳಗೆ ನೀವು ಪ್ರವೇಶಿಸುತ್ತಿರುವ ರೀತಿ ನನಗೆ ಆಶ್ಚರ್ಯವನ್ನು ತಂದಿದೆ... ಮನುಷ್ಯನಿಗೆ ಅಂಥಾ ಹೇಳಿಕೊಳ್ಳುವಂತಹಾ ಗುರಿ-ಉದ್ದೇಶಗಳಿರುವುದಿಲ್ಲ. ಆತ ಭಾವ ಜೀವಿಯಾಗಿರುತ್ತಾನೆ. ಭ್ರಮಾಜೀವಿಯಾಗಿರುತ್ತಾನೆ. ಮನುಷ್ಯ ಜಗತ್ತು ಇವುಗಳಿಂದಲೇ ನಿರ್ಮಾಣವಾಗಿದೆ. ಆಗುತ್ತಲೂ ಇರುತ್ತದೆ. ನಿಮ್ಮ 'ನಿರ್ಗಮನ', 'ಒಂದುಹನಿ ಪ್ರೀತಿಗಾಗಿ', 'ಆ ಇನ್ನರ್ಧ', 'ನಾನು ನಾನಲ್ಲ', 'ಕಾಲ', 'ಚಿಟ್ಟೆ' ಹೀಗೆ ಹೆಚ್ಚು ಕಡಿಮೆ ಎಲ್ಲಾ ಕತೆಗಳೂ ನನಗೆ ಬಹಳ ಇಷ್ಟವಾದವು. ಮೇಲಿನ ಕತೆಗಳನ್ನು ಎರಡೆರಡು ಬಾರಿ ಓದಿದೆ. "ಹಾರಲು ಮರೆತ ಚಿಟ್ಟೆಗಳಂತೆ ಹೂವುಗಳು ಬಿದ್ದಿದ್ದವು' ಎಂಬ ವಾಕ್ಯ ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ.
Showing 631 to 660 of 3346 results