nil
ಸಬಿತಾ ಬನ್ನಾಡಿ ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರ ಪ್ರಜಾವಾಣಿಯಲ್ಲಿ ಅನಿಯಮಿತ ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಸಬಿತಾ ಅವರ ಪ್ರಕಟಿತ ಕೃತಿಗಳು- ಸಾಹಿತ್ಯ ನಿರೂಪಣೆಗಳ (ವಿಮರ್ಶಾ ಲೇಖನ), ಆಲಯವು ಬಯಲಾಗಿ (ಸಂಶೋಧನೆ), ನಿರಿಗೆ - (ಕವಿತಾ ಸಂಕಲನ), ಗೂಡು ಮತ್ತು ಆಕಾಶ - (ಅಂಕಣ ಬರಹ) ಅವಳ ಕಾವ್ಯ Read More...
ಕನ್ನಡದ ಮಹತ್ವದ ಹಿರಿಯ ಲೇಖಕಿಯರಲ್ಲೊಬ್ಬರಾದ ವಸುಮತಿ ಉಡುಪರವರ ಕಥಾಜಗತ್ತು ವಿಶಿಷ್ಟವಾದದ್ದು. ಸಂದುಹೋಗುತ್ತಿರುವ ಒಂದು ಕಾಲಘಟ್ಟದ ತಲೆಮಾರಿನ ಚಿತ್ರಣವನ್ನು ಕಟ್ಟಿಕೊಡುವ ವಸುಮತಿ ಉಡುಪರವರು ಅಪ್ಪಟ ಕಥೆಗಾರ್ತಿ, ನೇರವಾಗಿ, ಸಹಜ ಹದದಲ್ಲಿ ಕಂಡಿರಿಸಿರುವ ಇವರ ಪಾತ್ರಗಳು ಹೆಣ್ಣುಮನದ ನಾನಾಭಾವಗಳ ರಂಗಶಾಲೆ, ಪಾತ್ರಗಳ ದಿಟ್ಟತನ, ನೇರವಂತಿಕೆ, ಬದುಕನೆದುರಿಸುವ ಛಲ, ತಾಕಲಾಟಗಳ ನಡುವೆಯೂ ಗುರಿಯನ್ನು ಕಂಡುಕೊಳ್ಳುವ ಆಶಾವಾದ ಇಲ್ಲಿ ಅಸಾಧಾರಣ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಬದುಕಿನ ಹತ್ತು ಹಲವಾರು ಹಳವಂಡಗಳಲ್ಲಿ, ಬಾಳಿನ ಕುಲುಮೆಯಲ್ಲಿ ಬೆಂದು ನೊಂದರೂ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ, ಜೀವನದ ಕಟು ಸತ್ಯವನ್ನು ಅರಿಯುತ್ತಾ ಮಾನವೀಯ ಮೂರ್ತಿಗಳಾಗಿ ನಿಲ್ಲುವ ಇಲ್ಲಿನ ಹಲವಾರು ಪಾತ್ರಗಳ ಕಥೆ ಹೃದಯಸ್ಪರ್ಶಿಯಾಗಿ ಚಿತ್ರಿತಗೊಂಡಿದೆ.
ಸಮುದ್ಯತಾ ಅವರ ಮೊದಲ ಕಾದಂಬರಿ ‘ಇದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ’ ಹಳ್ಳಿಯ ಮಧ್ಯಮ ವರ್ಗದ ಕುಟುಂಬವೊಂದರ ಸ್ತ್ರೀಯರ ಬಹುಸ್ತರೀಯ ಸಂಕಟವನ್ನು ಮುಖ್ಯವಾಗಿ ಕೇಂದ್ರೀಕರಿಸಿ ನಿರೂಪಿಸುತ್ತದೆ. ಮನೆತನದ ಬದುಕಿನ ಏಳು ಬೀಳಿನ ಗತಿಬಿಂಬ ನಾಲ್ಕು ತಲೆಮಾರುಗಳನ್ನು ಹಾದು ಸುಮಾರು ಒಂದು ಶತಮಾನವನ್ನು ವ್ಯಾಪಿಸುತ್ತದೆ… ಕುಟುಂಬದ ದೈನಿಕ ಅನುಭವದ ವಾಸ್ತವಿಕ ವಿವರಗಳನ್ನು ನೇಯುವ ಈ ಕೃತಿಯನ್ನು ಹವ್ಯಕ ಸಮುದಾಯದ ಸಾಂಸ್ಕೃತಿಕ ದಾಖಲೆಯಾಗಿ ಓದಬಹುದಾಗಿದೆ… ಕಷ್ಟಗಳು ಯಾವ ರೂಪ ಮತ್ತು ಮೂಲದಿಂದ ಬಂದರೂ ಅವುಗಳನ್ನು ಅನುಭವಿಸುವವಳು ಹೆಣ್ಣು ಎಂಬ ಆಶಯ ಕಾದಂಬರಿಯುದ್ದಕ್ಕೂ ಪುನರಾವರ್ತನೆಯಾಗುತ್ತದೆ… ಸಂಸಾರ ಸುಸೂತ್ರ ಸಾಗದಿರುವುದಕ್ಕೆ ಕಾದಂಬರಿ ಸೂಚಿಸುವ ಮೂಲ ಕಾರಣವಾದರೂ ಯಾವುದು? ಮುಳುಗಡೆಯಂಥ ಪ್ರಾಕೃತಿಕ ವಿಪತ್ತೆ? ಮನುಷ್ಯ ಮಾಡುವ ಆಯ್ಕೆಗಳೆ? ಕಂದಾಚಾರಗಳೆ? ಗುಟ್ಟು ಬಿಟ್ಟು ಕೊಡದ ಕಾಲವೆ? ಕೈಮೀರಿದ ಅಸಹಾಯಕತೆಗೆ ಇನ್ನೊಂದು ಹೆಸರಾದ ಕೈಕೊಟ್ಟ ದೈವವೆ? ದುರ್ಬಲ ಪುರುಷರೆ? ಇಂಥ ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸುವ ಆಸಕ್ತಿಯನ್ನು ಕಾದಂಬರಿ ಓದುಗರಿಗೆ ಬಿಡುತ್ತದೆ. ಶ್ರೀಧರ ಬಳಗಾರ
#
ಎಚ್.ಎಸ್. ರಾಘವೇಂದ್ರ
Showing 751 to 780 of 5068 results