nil
#
ಅಸಾಮಾನ್ಯರು ಎನ್ನಿಸಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೆ! ಹೌದಲ್ವಾ? ನೀವೇ ಯೋಚಿಸಿ ನೋಡಿ, ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೆ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಕೆಲವೊಂದು ಹುಟ್ಟಿನಿಂದ ಬಂದಿರುತ್ತದೆ ಎನ್ನುವುದು ನಿಜವಾದರೂ, ಬಹುತೇಕ ಗುಣಗಳನ್ನು ಕಲಿಕೆಯಿಂದ, ಸ್ವ-ಪ್ರಯತ್ನದಿಂದ ಅಳವಡಿಸಿಕೊಳ್ಳಬಹುದು. ಜಗತ್ತಿನ ಮುಕ್ಕಾಲು ಪಾಲು ಶೀಮಂತರು ಸೆಲ್ಫ್ ಮೇಡ್. ಅವರಿಗೂ ಯಾವ ಗಾಡ್‌ಫಾದರ್ ಇರಲಿಲ್ಲ ಎನ್ನುವುದು ಗೊತ್ತಿರಲಿ. ನಿಮಗೆಲ್ಲಾ ಒಂದು ಅಚ್ಚರಿಯ ವಿಷಯವನ್ನು ಹೇಳುವೆ. ಅಚಾನಕ್ಕಾಗಿ ಅಂದರೆ ಲಾಟರಿ ಮೂಲಕ ಹಣ ಗಳಿಸಿದವರಲ್ಲಿ 70ಕ್ಕೂ ಹೆಚ್ಚು ಪ್ರತಿಶತ ಜನ ಒಂದೆರಡು ವರ್ಷಗಳಲ್ಲಿ ದಿವಾಳಿ ಎದ್ದು ಹೋಗುತ್ತಾರೆ ಎನ್ನುತ್ತದೆ ಸಂಶೋಧನೆ. ಅಮೆರಿಕನ್ ಬಾಂಕ್ರಾಫ್ಟ್ಸಿ ಇನ್ಸ್ಟಿಟ್ಯೂಟ್ ನಡೆಸಿದ ಸಂಶೋಧನೆಯಲ್ಲಿ ಲಾಟರಿ ಗೆದ್ದವರಲ್ಲಿ ಮೆಜಾರಿಟಿ 2ರಿಂದ 5 ವರ್ಷಗಳಲ್ಲಿ ದಿವಾಳಿ ಘೋಷಿಸಿಕೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿದೆ. ಇದರರ್ಥ ಸುಲಭವಾಗಿ ಬಂದದ್ದು ಸುಲಭವಾಗಿ ಹೋಗುತ್ತದೆ. ನಮಗ್ಯಾವುದೂ ಪುಕ್ಕಟೆ ಬೇಡ. ಸುಲಭವಾಗುವುದೂ ಬೇಡ. ಕ್ಷಮತೆ ಹೆಚ್ಚಿಸಿಕೊಳ್ಳೋಣ, ಇಲ್ಲಿನ ಗುಣಗಳನ್ನು ಅಳವಡಿಸಿಕೊಳ್ಳೋಣ. ಅವು ನಿಜಕ್ಕೂ ನಮ್ಮೊಂದಿಗೆ ಕೊನೆಯವರೆಗೂ ಬರುತ್ತವೆ.
ವಿಜಯ್ ವೀರ್
ಇತಿಹಾಸವನ್ನು ಯಥಾವತ್ತಾಗಿ ದಾಖಲಿಸುವುದು ಪ್ರಜ್ಞಾವಂತ ನಾಗರಿಕನ ಲಕ್ಷಣ. ಸಮಾಜೋಧಾರ್ಮಿಕ ಚಳುವಳಿಯೊಂದರ ರಾಜಕೀಯ ಮಾನ್ಯತೆಗಾಗಿ ಶತಶತಮಾನಗಳಿಂದ ನಡೆದ ಚಳುವಳಿಯ ಮುಂದುವರಿದ ಭಾಗವಾಗಿ ೨೦೧೭-೧೮ರ ಲಿಂಗಾಯತ ಚಳುವಳಿ ವಿಪ್ಲವವಾಗಿ ಮಾರ್ಪಟ್ಟು, ಮನುಕುಲದಲ್ಲಿ ವೈಚಾರಿಕತೆಯನ್ನು ಬಡಿದೆಬ್ಬಿಸಿ, ಯಶಸ್ಸು ಕಾಣುತ್ತಿರುವ ಹೋರಾಟದ ಏಳುಬೀಳುಗಳ ವಿವಿಧ ಮಜಲುಗಳನ್ನು ಓದುಗನ ಕಣ್ಣಿಗೆ ಕಟ್ಟಿದಂತೆ ಅಕ್ಷರಗಳ ಚಿತ್ರ ಚಿತ್ರಿಸುವ ಮಾಂತ್ರಿಕತೆಯ ಕಲೆ ಜಿ. ಬಿ. ಪಾಟೀಲರಿಗೆ ಸಿದ್ದಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತ ಧರ್ಮ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿರುವ ಈ ಜನಾಂದೋಲನದ ಇತಿಹಾಸ ದಾಖಲಿಸುವ ಈ ಕೃತಿಗೆ ಅಭಿನಂದನೆ ಸಲ್ಲಿಸುವುದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಕರ್ನಾಟಕ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಿ, ಅದನ್ನು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕೇಂದ್ರಕ್ಕೆ ರವಾನಿಸಿದೆ. ಸುಮಾರು ಆರು ವರ್ಷಗಳ ನಂತರ 'ಹಿಸ್ಟಾರಿಕಲ್ ಡಾಕ್ಯುಮೆಂಟರಿ' ರೂಪದಲ್ಲಿ ಈ ಗ್ರಂಥವನ್ನು ಪ್ರಕಟಿಸುತ್ತಿರುವುದು ಜಿ. ಬಿ. ಪಾಟೀಲರ ಸಾಧನೆಯ ಸಿಂಹಾವಲೋಕನದ ಬಗೆ ಹಾಗೂ ಮುಂದಿನ ಸಾಧನೆಯ ದಿಕ್ಕೂಚಿ. ಲೇಖನದ ಈ ಕೈಂಕರ್ಯ ಲಿಂಗಾಯತರಿಗೆ ಮಾತ್ರವಲ್ಲದೆ ಸರ್ವರಿಗೂ ಮಾರ್ಗದರ್ಶಿ ದೀವಿಗೆ. ಅವರನ್ನು ಬಲ್ಲ ನನಗೆ ಈ ಕಾರ್ಯ ಸಾಧನೆ ಸಂತೋಷವನ್ನುಂಟು ಮಾಡಿದೆ ಎನ್ನುತ್ತ ಶುಭಹಾರೈಸುವೆ. - ಬಸವರಾಜ ಹೊರಟ್ಟಿ ( ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು )
Showing 3961 to 3990 of 5068 results