nil
ಕಾಡುವ ಕಥೆ ಥಟ್ಟನೆ ಬರೆಯಿಸಿಕೊಳ್ಳುವುದಿಲ್ಲ. ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ, ಪ್ರೇಮ್ ಚಂದ್, ಅಲೆಕಾಂಡರ್ ಪುಕ್ರೀನ್, ಕಾಮುಗಳ ಕಾದಂಬರಿಗಳು ಘಟಿಸಿದ್ದೇ ಹೀಗೆ ಘನ ಗಂಭೀರ ಕಾರ್ಮೋಡಗಳು ಆಕಾಶ ತುಂಬಿದಂತೆ ತಟ್ಟನೆ ಮಳೆ ಸುರಿಯುವುದಿಲ್ಲ. ಓಡಾಡುತ್ತವೆ, ಕಾಡುತ್ತವೆ ಕೊನೆಗೊಮ್ಮೆ ಸುರಿದುಬಿಟ್ಟರೆ ನಿಂತ ನೆಲದ ಗತಿ ಏನಾದೀತು ಎನ್ನುವ ಭಯ ಹುಟ್ಟಿಸುತ್ತವೆ. ಎಲ್ಲ ತಿಳಿದೂ ಈ ತಿಳುವಳಿಕೆಯನ್ನು ತೆಗೆದುಕೊಂಡು ಏನು ಮಾಡುವುದು ಎನ್ನುವ ಹತಾಶದ ಮುಂದೆ ನಮ್ಮನ್ನು ನಿಲ್ಲಿಸುತ್ತವೆ. ಬಹುತೇಕ ಈ ಕಾದಂಬರಿಯ ಕಥಾವಸ್ತು ಹಾಗೆಯೇ. ಇಲ್ಲಿ ಪಾತ್ರಗಳು ನೆಪ ಮಾತ್ರ ಸಂಬಂಧಗಳ ತಾತ್ವಿಕತೆಯೇ ಕಾದಂಬರಿ ನಮಗೆ ಒಡ್ಡುವ ಪ್ರಶ್ನೆ. ಕಾದಂಬರಿಕಾರ್ತಿ ಸುಶೀಲಾ ಡೋಣೂರ ಕಣ್ಣಿಗೆ ಕಂಡರೂ ಎಂಬ ಮಾತ್ರಕ್ಕೆ ಮನುಷ್ಯರನ್ನು ನೋಡಲಿಲ್ಲ. ಬದಲಾಗಿ ಓದುವ ಗಂಭೀರ ಯತ್ನವನ್ನು ಮಾಡಿದ್ದಾರೆ. ನಮ್ಮ ಸಂದರ್ಭದ ಅತಿ ದೊಡ್ಡ ದುರಂತದ ಮುನ್ನುಡಿಯ ಸಾಲುಗಳನ್ನ ಪ್ಲೇ ಅವರು ಇಲ್ಲಿ ಇಟ್ಟಿರುವುದು. ಕಾದಂಬರಿ ಇನ್ನೂ ಬರಬೇಕಾಗಿದೆ. ಆಗ ಅದು ಮತ್ತೊಂದು ರಿಸರಕ್ಷನ್ ಆಗಲು ಸಾಧ್ಯವಿದೆ. 'ಬದುಕೆನ್ನುವ ವಿಕಾರದ ಅರ್ಥವನ್ನು ಹುಡುಕುತ್ತಾ ಹೋದಷ್ಟು ಅದು ಬದಲಾಗುತ್ತಾ ಹೋಗುತ್ತದೆ. ಅದು ಒಂದು ರೀತಿ ಕೈಯೊಳಗೆ ಸಿಕ್ಕೂ ಹಾರಿ ಹೋಗುವ ಚಿಟ್ಟೆಯಂತೆ' ಇವು ಬೇರುಗಡಿತವಾಗಿ ಬದುಕುವ ನಗರದ ಮನಸ್ಸಿನಲ್ಲಿ ನಿತ್ಯ ಸಾವಿರ ಬಾರಿ ಹುಟ್ಟಿ ಸಾಯುವ ಸಹಾಯವಿಲ್ಲದ ವಾಸ್ತವದ ಸಾಲುಗಳು, ಕಾದಂಬರಿಯ ವಸ್ತು ಹೊಸದು, ಅಷ್ಟೇ ಸಂಕಟದ ಭಾಷೆ, ಲೇಖಕಿಯನ್ನು ಕುತೂಹಲ ಕೆರಳಿಸುವ ಅಭಿವ್ಯಕ್ತಿ, ಈ ಕಾರಣ ಅಭಿನಂದಿಸದೆ ಇರಲಾಗದು - ರಾಗಂ
ನಮಗೆ ಜನ್ಮ ಕೊಟ್ಟ ತಾಯಿ ತಂದೆಯ ಋಣ ತೀರಿಸಲು ಸಾಧ್ಯವಿಲ್ಲ; ಭಾಮಳಿಗೆ ತನ್ನ ಅಪ್ಪನ ಸಂಧ್ಯಾಕಾಲದಲ್ಲಿನ ಜೀವನ ಚೇತೋಹಾರಿಯಾಗಿಡಲು ಹಾಗೂ ನೆಮ್ಮದಿಗೆ ಎಡೆ ಮಾಡಿಕೊಡಲು ಋಣ 'ಪ್ರಾಪ್ತಿ' ಆಗಿದ್ದು ಸಂತೋಷವೆನಿಸಿತು. ಈ ಧಾರಾವಾಹಿಯಲ್ಲಿನ ಪ್ರತಿಯೊಂದು ಪಾತ್ರವೂ ವಾಸ್ತವಿಕತೆಗೆ ಹತ್ತಿರವಾಗಿದೆ. ಟಿ.ಎಸ್. ಪ್ರತಿಭಾ, ಚಿತ್ರದುರ್ಗ ಮನೋಜ್ಞವಾಗಿ ಓದಿಸಿಕೊಂಡು ಹೋದ ಧಾರಾವಾಹಿ ಇಷ್ಟು ಬೇಗ ಮುಗಿಯಿತೇ ಅಂತ ಅನ್ನಿಸಿತು. ಕಾದಂಬರಿಯಲ್ಲಿ ಬರುವ ಚಿದಾನಂದ, ಸತ್ಯಭಾಮ, ಭಾರ್ಗವ. ಶೀಲಾ ಈ ಪಾತ್ರಗಳ ವ್ಯಕ್ತಿತ್ವ ನಿರೂಪಣೆ ಸಹಜವಾಗಿದೆ. ಜೀವನದಿಂದ ಆರಿಸಿ ತೆಗೆದಂತೆ ಇದೆ. ಸತ್ಯಭಾಮ ಅಪ್ಪನನ್ನು ಅನುಮಾನಿಸುವ ವಯಸ್ಸಿನಿಂದ ಮೊದಲ್ಗೊಂಡು, ಜೀವನದ ಅನುಭವಗಳಿಂದ ಮಾಗಿ, ಕೊನೆಗೆ ಅಪ್ಪನನ್ನು ಒಪ್ಪಿಕೊಳ್ಳುವ, ತನ್ನ ಬಳಿಯೇ ಇರಿಸಿಕೊಳ್ಳುವ ಪರಿ ಅನನ್ಯವಾಗಿದೆ. - ಬಿ.ವಿ. ರಾಜಲಕ್ಷ್ಮಿ, ಬೆಂಗಳೂರು ಧಾರಾವಾಹಿ ಮನಮುಟ್ಟುವಂತಿತ್ತು. ತನ್ನ ಅಪ್ಪನನ್ನು ಧಿಕ್ಕರಿಸಿ ಅಂತರ್ಜಾತಿ ವಿವಾಹವಾಗಿ ಮಾನಸಿಕ ಯಾತನೆ ಅನುಭವಿಸಿ, ಸುಗಮ ಬದುಕು ಕಂಡುಕೊಂಡ ಭಾಮ, ತನ್ನ ಅಪ್ಪನನ್ನು ಕರೆತರಲು ವೆಂಕಟೇಶನೊಂದಿಗೆ ಚರ್ಚಿಸಿದಾಗ, ನಾಳೆ ನಮಗೂ ಇಂತಹ ಸ್ಥಿತಿ ಬರಬಹುದು. ನಾಳೆ ನಮ್ಮ ಮಗಳು ನಮ್ಮನ್ನು ನೋಡಿಕೊಳ್ಳಬೇಕು. ನಾವು ಅವರಿಗೆ ಮೇಲ್ಪಂಕ್ತಿ ಆಗಬೇಕೆ ಹೊರತು ತಪ್ಪು ಮಾದರಿ ಆಗಬಾರದು ಎಂಬ ವೆಂಕಟೇಶನ ಉದಾತ್ತ ಮಾತುಗಳಿಂದ ಭಾಮಾಳ ಹೃದಯ ತುಂಬಿ ಬಂದು ತನ್ನ ತಂದೆಯನ್ನು ಕರೆತರುವ ನಿರ್ಧಾರ ಮಾಡಿದ್ದು ಶ್ಲಾಘನೀಯ. ಎಂ. ಟಿ. ರಮಾನಂದ ರೆಡ್ಡಿ, ಚಿತ್ರದುರ್ಗ ಧಾರಾವಾಹಿ ಕೊನೆಯ ಕಂತಿನಲ್ಲಿ ಗಳಗಳನೆ ಅಳುವಂತೆ ಮಾಡಿಬಿಟ್ಟಿತು. ಮನುಷ್ಯ ಸಂಬಂಧಗಳ ಅನಾವರಣ ಎಷ್ಟು ಚೆನ್ನಾಗಿತ್ತೆಂದರೆ ವಸುಮತಿ ಉಡುಪರಿಗೆ ಮಾತ್ರ ಸಾಧ್ಯವೇನೋ ಇಂತಹ ಬರವಣಿಗೆ ಎನಿಸಿತು.
Showing 361 to 390 of 640 results