nil
ಪ್ರಸ್ತುತ ಜಮಾನದಲ್ಲಿ ನಿಸ್ವಾರ್ಥ ಮನಸ್ಸಿನ ಯುವ ಪೀಳಿಗೆ ಕಾಣಸಿಗುವುದು ಅಪರೂಪ. ಎಲ್ಲೋ ನೋಡಿದ ಕೇಳಿದ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ವ್ಯಕ್ತಿಯ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿತ್ತು. ಅದೇ ವ್ಯಕ್ತಿತ್ವವನ್ನು ಈ ಕಾದಂಬರಿಯಲ್ಲಿ ಒಂದು ಪಾತ್ರವನ್ನಾಗಿಸಿದೆ. ಅಂತಹ ಯುವಕನ ‘ಜೊತೆಯಾಗಿ ಬೆಳೆಯೋಣ’ ಎನ್ನುವ ಧ್ಯೇಯ ನನ್ನನ್ನು ಬಹಳವಾಗಿ ಕಾಡಿತ್ತು. ಇನ್ನೂ ಅಂತಹ ಆದರ್ಶ ಧ್ಯೇಯಗಳನ್ನು ಹೊತ್ತ ಯುವಕರು ನಮ್ಮ ನಡುವೆ ಇದ್ದಾರೆ ಎನ್ನುವ ಅಚ್ಚರಿಯಿಂದ ಈ ಕಾದಂಬರಿಯನ್ನು ಬರೆದೆ. ಈ ರೀತಿಯ ಯುವ ಪೀಳಿಗೆ ಇನ್ನಷ್ಟು ಬೆಳೆದರೆ ಗಾಂಧೀಜಿ ಯವರು ಕಂಡ ರಾಮರಾಜ್ಯದ ಕನಸು ನನಸಾದೀತು. ತನ್ನ ಗುರಿ ತಲುಪಿದ ಮೇಲೆಯೇ ಬಾಕಿ ವಿಚಾರಗಳೆಂದು ಸಂಯಮದಿAದ ವರ್ತಿಸಿ ತನ್ನ ಪ್ರೀತಿಯಲ್ಲಿಯೂ ಆದರ್ಶವನ್ನು ಮೆರೆದ ಆರ್ಯನ್‌ನ ಪಾತ್ರ, ಎಂದೂ ಎಲ್ಲೆ ಮೀರದ ಚಿಗುರುವಿನಂತಹ ಪಾತ್ರ ಓದುಗರಿಗೆ ಮುದ ನೀಡದಿರಲಾರದು.
ಮನುಷ್ಯ ತನ್ನನ್ನು ತಾನು ಕಂಡುಕೊಳ್ಳಬೇಕು. ಬೇರೆ ಗ್ರಹಗಳಿಗೆ ಹೋಗುವುದಕ್ಕಿಂತ, ತನ್ನೊಳಗೆ ತಾನು ತೂರಿ ಹೋಗುವ ಪ್ರಯತ್ನ ಮಾಡಬೇಕು. ಪರಮಾತ್ಮನನ್ನು ನೋಡುವ ಹಂಬಲಕ್ಕಿಂತ, ತನ್ನ ಅತ್ಯವನ್ನೊಮ್ಮೆ ಭೇಟಿ ಮಾಡುವ ಹುಮ್ಮಸ್ಸಿರಬೇಕು. ಅಗಾಧ ಪಾಂಡಿತ್ಯವಿದ್ದೂ, ಏನೂ ಗೊತ್ತಿರದಂತೆ ಮೂಕನಾಗಿರಬೇಕು. ಜಾತ್ರೆಯ ಜನಜಂಗುಳಿ. ದೇವಾಲಯದ ಘಂಟಾಘೋಷ, ಸಿಡಿಲು ಗುಡುಗಿನ ಆರ್ಭಟದ ಮಧ್ಯೆಯೂ ತನ್ನ ಹೃದಯದ ಢಕ್-ಡಕ್ ಎಂಬ ಸಣ್ಣ ಮಿಡಿತ ತನ್ನ ಕಿವಿಗೆ ಕೇಳಿಸುವಂತಿರಬೇಕು, ಹೌದು! ನಾವೆಲ್ಲ ಆಗಾಗ ಒಮ್ಮೆ ಈ ಸ್ಥಿತಿಗೆ ಜಾರುತ್ತಿರಬೇಕು. ಮೂಕನಾಗಿರಬೇಕು. ಏಕಾಂಗಿಯಾಗಿರಬೇಕು. ಮೌನಿಯಾಗಿರಬೇಕು. ಮೇಲಾಗಿ ತಾನಾರು? ಎಂದು ತನ್ನನ್ನು ತಾನು ಅನ್ವೇಷಿಸಿಕೊಳ್ಳಬೇಕು. ತನ್ನನ್ನು ತಾನು ಅನ್ವೇಷಿಸಿಕೊಳ್ಳಲಕ್ಕಾದರೂ ಬಲವಂತವಾಗಿಯಾದರೂ ನಮ್ಮ ಮನಸ್ಸನ್ನು ಮೌನಕ್ಕೆ ತಳ್ಳಬೇಕು. ದೇಹ ಎಚ್ಚರವಾಗಿದ್ದಲೇ. ಪ್ರಜ್ಞೆಯನ್ನು ನಿದ್ರಾವಸ್ಥೆಗೆ ದೂಡಬೇಕು. ಮೈ ಮನಗಳನ್ನು ಹಗುರವಾಗಿ, ನೀಲ ನಭದಲ್ಲಿ ಸ್ವಚ್ಛಂದದಲ್ಲಿ ಹಾರಾಡುವ ಹಕ್ಕಿಗಳಂತೆ ಹಾರಿಬಿಡಬೇಕು. ಆತ್ಮವನ್ನು ಒಂಟಿತನದಿಂದ ಏಕಾಂತದೆಡೆಗೆ, ಮನಸ್ಸನ್ನು ಕಲ್ಮಶದಿಂದ ನಿರ್ಮಾನುಷ್ಯದೆಡೆಗೆ ಜಾರಿಸಿಬಿಡಬೇಕು. ಉತ್ತಟ ಆನಂದದ ತುತ್ತತುದಿಯನ್ನು ಮುಟ್ಟಿ, ಪ್ರಶಾಂತತೆಯ ಸಾಗರದ ಕಡಲ ತಡಿಯನ್ನು ಈಜಬೇಕು. ಈ ಮೂಲಕ ಪ್ರತಿಯೊಬ್ಬ ಮನುಜನೂ ತನ್ನನ್ನು ತಾನು ಸಾಕ್ಷಾತ್ಕರಿಸಿಕೊಳ್ಳಬೇಕು. ಅದೂ ಏಕಾಂತವಾಗಿ, ನಾನು-ಶೆಫಾಲಿ ಆ ಏಕಾಂತದಲ್ಲಿ ಈಗ ವಿಹರಿಸುತ್ತಿದ್ದೇವೆ. ಶೆಫಾಲಿ ತನ್ನ ಮುಂದಿನ ಜೀವನವನ್ನು ನೆನೆಯುತ್ತಾ... ನಾನು ನನ್ನ ಹಿಂದಿನ ಜೀವನವನ್ನು ಮರೆಯುತ್ತಾ...
ಐತಿಹಾಸಿಕ ಕಥನವನ್ನು ಜನಪದೀಯ ನೆಲೆಯಲ್ಲಿ ವಿಕಸನಗೊಳಿಸುತ್ತ ಕಥನಕಾಲದ ಜೊತೆಗೆ ಆಯಾ ದೇಶಕಾಲದ ಚಿತ್ರಣವನ್ನು ತೆರೆದಿಡುವ ಕಾದಂಬರಿ ಈ ‘ನಿಯುಕ್ತಿಪುರಾಣ’, ಕತೆಯ ಮಟ್ಟಿಗೆ ಅಗಾಧ ಅಳತೆಯ ಕ್ಯಾನ್ವಾಸ್ ಹೊಂದಿರುವ ಇದು ಸುಲಭಕ್ಕೆ ಗ್ರಹಿಸಿ ಹಿಡಿದಿಡಲು ಆಗದಷ್ಟು ದೊಡ್ಡ ಕಥನ. ಲಾವಣಿ, ಜನಪದ ಶಬ್ದ ಭಂಡಾರ, ಕಥನ ಕುತೂಹಲಕ್ಕಾಗಿ ಏರಿಳಿತದ ಅನುಸರಣೆಯ ತಂತ್ರಗಾರಿಕೆ. ಪಾತ್ರಗಳು ಕಟ್ಟಿಕೊಡುವ ಗಟ್ಟಿತನ, ವಿಸ್ತಾರವಾದರೂ ಕೈ ತಪ್ಪದ ಸಂವಹನ ಮತ್ತು ಸಂಪರ್ಕಗಳು, ಸುತ್ತು ಬಳಸಿದರೂ ಮರೆಯದೆ ಜತೆಗೊಯ್ಯುವ ಸಂದರ್ಭದ ಹಲವು ಆವರ್ತಗಳಲ್ಲೂ ಹದತಪ್ಪದ ನಿರೂಪಣೆ ಪುರಾಣದ ವಿಶೇಷತೆಯಾದರೆ, ಹೊಸ ಓದುಗನಿಗೆ ಮತ್ತು ಜನಪದೀಯ ರುಚಿ ಗ್ರಹಿಸಿದವರಿಗೆ, ಗ್ರಂಥಸ್ಥ ಭಾಷೆಯನ್ನಷ್ಟೇ ಓದುವವರಿಗೆ ‘ನಿಯುಕ್ತಿಪುರಾಣ’ ಕೊಂಚ ಒಗರು ಕೂಡ. ಆದರೆ ಪಟ್ಟು ಬಿಡದೆ ಓದಿ ಬಿದ್ದರೆ ಪಳಗಿ ಬಿಡುವ ಬರಹದ ಶೈಲಿಗೆ ಗೊತ್ತಿಲ್ಲದೆ ಆಪ್ತವಾಗಿಸುವ ಹಿಡಿತ ಇಲ್ಲಿದೆ.
Showing 301 to 330 of 640 results