ಅಸಾಮಾನ್ಯರು ಎನ್ನಿಸಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೆ! ಹೌದಲ್ವಾ? ನೀವೇ ಯೋಚಿಸಿ ನೋಡಿ, ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೆ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಕೆಲವೊಂದು ಹುಟ್ಟಿನಿಂದ ಬಂದಿರುತ್ತದೆ ಎನ್ನುವುದು ನಿಜವಾದರೂ, ಬಹುತೇಕ ಗುಣಗಳನ್ನು ಕಲಿಕೆಯಿಂದ, ಸ್ವ-ಪ್ರಯತ್ನದಿಂದ ಅಳವಡಿಸಿಕೊಳ್ಳಬಹುದು. ಜಗತ್ತಿನ ಮುಕ್ಕಾಲು ಪಾಲು ಶೀಮಂತರು ಸೆಲ್ಫ್ ಮೇಡ್. ಅವರಿಗೂ ಯಾವ ಗಾಡ್‌ಫಾದರ್ ಇರಲಿಲ್ಲ ಎನ್ನುವುದು ಗೊತ್ತಿರಲಿ. ನಿಮಗೆಲ್ಲಾ ಒಂದು ಅಚ್ಚರಿಯ ವಿಷಯವನ್ನು ಹೇಳುವೆ. ಅಚಾನಕ್ಕಾಗಿ ಅಂದರೆ ಲಾಟರಿ ಮೂಲಕ ಹಣ ಗಳಿಸಿದವರಲ್ಲಿ 70ಕ್ಕೂ ಹೆಚ್ಚು ಪ್ರತಿಶತ ಜನ ಒಂದೆರಡು ವರ್ಷಗಳಲ್ಲಿ ದಿವಾಳಿ ಎದ್ದು ಹೋಗುತ್ತಾರೆ ಎನ್ನುತ್ತದೆ ಸಂಶೋಧನೆ. ಅಮೆರಿಕನ್ ಬಾಂಕ್ರಾಫ್ಟ್ಸಿ ಇನ್ಸ್ಟಿಟ್ಯೂಟ್ ನಡೆಸಿದ ಸಂಶೋಧನೆಯಲ್ಲಿ ಲಾಟರಿ ಗೆದ್ದವರಲ್ಲಿ ಮೆಜಾರಿಟಿ 2ರಿಂದ 5 ವರ್ಷಗಳಲ್ಲಿ ದಿವಾಳಿ ಘೋಷಿಸಿಕೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿದೆ. ಇದರರ್ಥ ಸುಲಭವಾಗಿ ಬಂದದ್ದು ಸುಲಭವಾಗಿ ಹೋಗುತ್ತದೆ. ನಮಗ್ಯಾವುದೂ ಪುಕ್ಕಟೆ ಬೇಡ. ಸುಲಭವಾಗುವುದೂ ಬೇಡ. ಕ್ಷಮತೆ ಹೆಚ್ಚಿಸಿಕೊಳ್ಳೋಣ, ಇಲ್ಲಿನ ಗುಣಗಳನ್ನು ಅಳವಡಿಸಿಕೊಳ್ಳೋಣ. ಅವು ನಿಜಕ್ಕೂ ನಮ್ಮೊಂದಿಗೆ ಕೊನೆಯವರೆಗೂ ಬರುತ್ತವೆ.
nil
#
ವಿಜಯ್ ವೀರ್
ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ.
ಇತಿಹಾಸವನ್ನು ಯಥಾವತ್ತಾಗಿ ದಾಖಲಿಸುವುದು ಪ್ರಜ್ಞಾವಂತ ನಾಗರಿಕನ ಲಕ್ಷಣ. ಸಮಾಜೋಧಾರ್ಮಿಕ ಚಳುವಳಿಯೊಂದರ ರಾಜಕೀಯ ಮಾನ್ಯತೆಗಾಗಿ ಶತಶತಮಾನಗಳಿಂದ ನಡೆದ ಚಳುವಳಿಯ ಮುಂದುವರಿದ ಭಾಗವಾಗಿ ೨೦೧೭-೧೮ರ ಲಿಂಗಾಯತ ಚಳುವಳಿ ವಿಪ್ಲವವಾಗಿ ಮಾರ್ಪಟ್ಟು, ಮನುಕುಲದಲ್ಲಿ ವೈಚಾರಿಕತೆಯನ್ನು ಬಡಿದೆಬ್ಬಿಸಿ, ಯಶಸ್ಸು ಕಾಣುತ್ತಿರುವ ಹೋರಾಟದ ಏಳುಬೀಳುಗಳ ವಿವಿಧ ಮಜಲುಗಳನ್ನು ಓದುಗನ ಕಣ್ಣಿಗೆ ಕಟ್ಟಿದಂತೆ ಅಕ್ಷರಗಳ ಚಿತ್ರ ಚಿತ್ರಿಸುವ ಮಾಂತ್ರಿಕತೆಯ ಕಲೆ ಜಿ. ಬಿ. ಪಾಟೀಲರಿಗೆ ಸಿದ್ದಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತ ಧರ್ಮ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿರುವ ಈ ಜನಾಂದೋಲನದ ಇತಿಹಾಸ ದಾಖಲಿಸುವ ಈ ಕೃತಿಗೆ ಅಭಿನಂದನೆ ಸಲ್ಲಿಸುವುದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಕರ್ನಾಟಕ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಿ, ಅದನ್ನು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕೇಂದ್ರಕ್ಕೆ ರವಾನಿಸಿದೆ. ಸುಮಾರು ಆರು ವರ್ಷಗಳ ನಂತರ 'ಹಿಸ್ಟಾರಿಕಲ್ ಡಾಕ್ಯುಮೆಂಟರಿ' ರೂಪದಲ್ಲಿ ಈ ಗ್ರಂಥವನ್ನು ಪ್ರಕಟಿಸುತ್ತಿರುವುದು ಜಿ. ಬಿ. ಪಾಟೀಲರ ಸಾಧನೆಯ ಸಿಂಹಾವಲೋಕನದ ಬಗೆ ಹಾಗೂ ಮುಂದಿನ ಸಾಧನೆಯ ದಿಕ್ಕೂಚಿ. ಲೇಖನದ ಈ ಕೈಂಕರ್ಯ ಲಿಂಗಾಯತರಿಗೆ ಮಾತ್ರವಲ್ಲದೆ ಸರ್ವರಿಗೂ ಮಾರ್ಗದರ್ಶಿ ದೀವಿಗೆ. ಅವರನ್ನು ಬಲ್ಲ ನನಗೆ ಈ ಕಾರ್ಯ ಸಾಧನೆ ಸಂತೋಷವನ್ನುಂಟು ಮಾಡಿದೆ ಎನ್ನುತ್ತ ಶುಭಹಾರೈಸುವೆ. - ಬಸವರಾಜ ಹೊರಟ್ಟಿ ( ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು )
ಲೇಖಕಿ ಅಕ್ಷಥಾ ಪಾಂಡವಪುರ ಅವರ ಕತಾಸಂಕಲನ ಲೀಕ್ಔಟ್. ಈ ಸಂಕಲನದಲ್ಲಿ 11 ಕತೆಗಳಿವೆ. 2010 ರಿಂದ ಬರೆದಂತದ ಕಥೆಗಳು ಈ ಪುಸ್ತಕದಲ್ಲಿದ್ದು ಹೆಣ್ಣಿನ ಆಸೆ ಅಕಂಶೆ, ತಳಮಳ, ಬದುಕಿನ ಸಂಘರ್ಷ. ಸಂಬಂಧಗಳ ಏಣಿಗೆ ಎಷ್ಟು ಕಾಲಿಗಳು ಎಂಬ ಲೆಕ್ಕಾಚಾರದಲ್ಲಿರುವ ಈ ಕಥೆಗಳು ಕೆಲವು ವಾಸ್ತವಕ್ಕೆ ಹತ್ತಿರವಿದೆ ಎನ್ನಿಸಿದರೆ ಕೆಲವ ರಂಜನಿಯವಾಗಿವೆ. ಮುಖವಾಡಗಳ್ಳನ್ನು ಧರಿಸಿ ತುಂಬಾ ಸೀರಿಯಸ್ ಆಗಿ ಬದುಕು ನಡೆಸುವ, ಸದಾ ನಗುಮುಖವನ್ನು ಸಮಾಜಕ್ಕೆ ತೋರಬಯಸುವ ಎಲ್ಲರೂ ಕಾಣುವ ಕನಸುಗಳ ಸಂಖ್ಯೆಯಲ್ಲಿ fantasy ಯೇ ಹೆಚ್ಚು.... ಹಾಗೆ ಇಲ್ಲಿಯೂ ಸಹಾ ಜೀವನ & ಕನಸುಗಳ ಸಂಘರ್ಷದಲ್ಲಿ ಪಾತ್ರಗಳು ಹೇಗೆ ಕಾಣುತ್ತವೆ ಎಂಬುದನ್ನು ಹೆಚ್ಚು ಕಥೆಗಳಲ್ಲಿ ಕಾಣಬಹುದು..
ಬೇರೆಯವರಿಗೆ ಕತೆ ಹೇಳುವ, ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ. ಕತೆಗಳಿರುವವರೆಗೂ ಮನುಷ್ಯನಿರುತ್ತಾನೆ. ಈಗ ಸ್ಮಾರ್ಟ್ ಯುಗ. ಎಲ್ಲರ ಕೈಯಲ್ಲೊಂದು ಸ್ಮಾರ್ಟ್ ಫೋನು. ಎಲ್ಲರ ಎದೆಯೊಳಗೆ ಕತೆಗಳಿರುವ ಕಾಲ. ಇಂತಹ ಕತೆಗಳನ್ನು ಸಶಕ್ತವಾಗಿ ದಾಟಿಸುವ ಮಾಧ್ಯಮ ದೃಶ್ಯಮಾಧ್ಯಮ. ಬನ್ನಿ ನಿಮ್ಮೊಳಗಿನ ಕತೆಗಳನ್ನು ದೃಶ್ಯಮಾಧ್ಯಮಕ್ಕೆ ತರೋಣ, ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ!
Showing 8191 to 8220 of 9318 results