ಹಕ್ಕಿ ಅಟೆಂಡೆನ್ಸ್

 494

SKU: hakki attendence Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .8 kg
Author
Page Nos
Publications

SYNOPSIS

ಬರ್ಡ್ ವಾಚಿಂಗ್ ಅನ್ನೋದು ತುಂಬಾ ತಾಳ್ಮೆ ಬೇಡುವ ಕೆಲಸ. ಅಂಥಹ ತಾಳ್ಮೆಯನ್ನು ಇಡೀ ಪುಸ್ತಕದುದ್ದಕ್ಕೂ ಸೆರೆಹಿಡಿದಿರುವ ಹಕ್ಕಿಗಳ
ಮುದ್ದಾದ ಫೋಟೋಗಳಲ್ಲಿ ಕಾಣಬಹುದು.ಜೊತೆಗೆ ಆ ಫೋಟೊಗಳೊಂದಿಗೆ ನಡೆಸಿರುವಆತ್ಮೀಯ ಸಂಭಾಷಣೆಗಳಿವೆ. ಆ ಸಂಭಾಷಣೆಗಳಲ್ಲಿ ನಮ್ಮೆಲ್ಲರ ವಿದ್ಯಾರ್ಥಿ ಜೀವನವನ್ನು ನೆನಪಿಸುವ ಶಕ್ತಿ ಇದೆ.

Opinion of Others

  1. Naveen Kalgundi

    Naveen KalgundiWriter

    ಅಕ್ಕ Leela Appaji ಅವರ ಪುಸ್ತಕ ಬಿಡುಗಡೆಯಾಯಿತು ಎಂದು ತಿಳಿದ ಮೇಲೆ ತರುವವರೆಗೂ ಸಮಾಧಾನವಿರಲಿಲ್ಲ. ಇಂದು Ankita Pustaka ಕ್ಕೆ ಹೋಗಿ ತಂದೆ. ಅದೆಂಥಹ ಅದ್ಭುತ ಚಿತ್ರಗಳು! ಅವರ ಪರಿಕಲ್ಪನೆಯೂ ಅದ್ಭುತವೇ, ಅದರೆ ಅವನ್ನು ನಾವು ಫೇಸ್‌ಬುಕ್‌ ನಲ್ಲಿ ನೋಡಿದ್ದೆವು. ಆದರೆ ಈಗ ಪುಸ್ತಕ ರೂಪದಲ್ಲಿ ಹೃದಯಕ್ಕೆ ಹತ್ತಿರವಿಟ್ಟುಕೊಂಡು ನೋಡುವುದು ಅದೆಂತಹ ಸುಖ! ಸೊಗಸಾದ ಹೊಸತಂತ್ರದ ಮುಖಪುಟ, ಅಚ್ಚುಕಟ್ಟಾದ ಗಟ್ಟಿರಟ್ಟಿನ ಬೈಂಡಿಂಗ್, ಆರ್ಟ್ ಕಾಗದದಲ್ಲಿ ಮುದ್ರಣ. ಹಕ್ಕಿಗಳ ಸೌಂದರ್ಯವನ್ನು ಅಕ್ಕಾ ಮನದಲ್ಲಿ ಶಾಶ್ವತವಾಗಿ ನಿಲ್ಲುವಂತೆ "ಅರೆದು ಹುಯ್ದಿ" ದ್ದಾರೆ, ಎಷ್ಟೇ ಆದರೂ ಮೇಷ್ಟ್ರಲ್ಲವೇ!! ಕೊನೆಯ ರಾಕ್ಷಪುಟದಲ್ಲಿನ ಅವರದ್ದೇ ಚಿತ್ರದಲ್ಲಿರುವ ಅವರ ಆತ್ಮವಿಶ್ವಾಸದಲ್ಲಿ ಕಿಂಚಿತ್ ನಮಗೆ ಬರಲಿ ಎಂದು ಆಶಿಸುತ್ತೇನೆ. ಅಕ್ಕಾ ಡಾ ಲೀಲಾ ಅಪ್ಪಾಜಿಯವರಿಗೂ ಪ್ರಕಾಶಕರಾದ ವೀರಲೋಕ ಬುಕ್ಸ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು! ಅಂದಹಾಗೆ, "ಈ ಪುಸ್ತಕಕ್ಕೆ ಈ ಬೆಲೆ ತೀರಾ ಕಡಿಮೆ" ಎಂದವರು ಅಂಕಿತ ಪುಸ್ತಕದ ಮಾಲಕರಾದ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರು. (ಬೆಲೆ ರೂ ೫೯೫. ಆದರೂ ಈ ಮಟ್ಟದ ಮುದ್ರಣ, ಆರ್ಟ್ ಕಾಗದ, ಬಣ್ಣದ ಮುದ್ರಣ ಈ ಎಲ್ಲವನ್ನೂ ಗಮನಿಸಿದಾಗ ಇದು ತೀರಾ ಕಡಿಮೆ ಬೆಲೆಯಾಗುತ್ತದೆ. ಇದಕ್ಕೂ ಸಂಬಂಧಿಸಿದ ಎಲ್ಲರಿಗೂ ಕೃತಜ್ಞ). ಇದು ಹಕ್ಕಿಗಳ ಅಟೆಂಡೆನ್ಸ್ ಎಂಬ ವಿಶಿಷ್ಟ ಕಲ್ಪನೆಯ ಪುಸ್ತಕ (ಚಿತ್ರ ನೋಡಿ). ಕನ್ನಡಿಗರು ಇಂತಹ ಪರಿಯೋಜನೆಯನ್ನು ಸೋಲಲು ಬಿಡಬಾರದು.

  2. Dr Sucheta Pai

    Dr Sucheta PaiLecturer

    Leelakka I bought the book and unable to put it down. It is photography humour bonding blooming learning growing and finally , flying. It is so much packed into one. ಹಕ್ಕಿ ಧ್ಯಾನ, ವಿದ್ಯಾದಾನ ಈ ಪುಸ್ತಕ, ಒಂದು ತಪಸ್ಸಿನ ಫಲ. ಎಲ್ಲರ ಮನೆಯಲ್ಲೂ ಅಟೆಂಡೆನ್ಸ್ ಹಾಕಲೇಬೇಕು. ಈ ರೀತಿಯೂ ಬರೆಯಬಹುದೇ? ಕಲ್ಪನಾತೀತವನ್ನು ನಿಜ ಮಾಡಿದಿರಿ. Reading this book is an experience. Thank you so much for such a treasure.

Customer Reviews

Reviews

There are no reviews yet.

Be the first to review “ಹಕ್ಕಿ ಅಟೆಂಡೆನ್ಸ್”

Your email address will not be published. Required fields are marked *