ರವಿ ಕೃಷ್ಣಾರೆಡ್ಡಿ

ಊರು ಬೆಂಗಳೂರಿನ ಬಳಿಯ ಬೊಮ್ಮಸಂದ್ರ ಗ್ರಾಮ. ಓದಿದ್ದು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಎಂ.ಇ. ಪದವಿ. ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ. ಅದೇ ಸಮಯದಲ್ಲಿ ಅಂತರ್ಜಾಲದಲ್ಲಿ ಲೇಖನ-ಕತೆ-ಕವನಗಳ ಬರವಣಿಗೆ ಆರಂಭ. ಇಲ್ಲಿಯವರೆಗೆ ಪ್ರಕಟಿಸಿದ್ದು ಲೇಖನ-ಕತೆ-ಕವನಗಳ ಸಂಗ್ರಹ `ಜಿಜ್ಞಾಸಾ ಗಂಗೆಯ ದಡದ ಕಾಲ್ದಾರಿಯಲ್ಲಿ’, ಲೇಖನ ಸಂಗ್ರಹ `ದೇಶ-ಕಾಲ-ಶ್ರಮ’, ಅನುವಾದಿತ ಕಾದಂಬರಿ `ಎದೆಯ ಕೂಗನು ಮೀರಿ’, ಅನುವಾದಿತ ಕೃತಿ `ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.’ ೨೦೦೬ ರಲ್ಲಿ `ವಿಕ್ರಾಂತ ಕರ್ನಾಟಕ’ ವಾರಪತ್ರಿಕೆ ಆರಂಭಿಸಿದ್ದು, ಅದರಲ್ಲಿ ಸುಮಾರು ಮೂರು ವರ್ಷಗಳ ಕಾಲ `ಅಮೆರಿಕದಿಂದ ರವಿ’ ಅಂಕಣ ಬರವಣಿಗೆ, `ಮೌಲ್ಯಾಗ್ರಹ’ದ ಹೆಸರಿನಲ್ಲಿ ಸಾರ್ವಜನಿಕ ಜೀವನದಲ್ಲಿರುವವರಿಂದ ಮೌಲ್ಯಗಳನ್ನು ಆಗ್ರಹಿಸಿ ೨೦೦೮ ರಲ್ಲಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮತ್ತು ಜನರ ಹಣದಿಂದ ಚುನಾವಣಾ ಆಯೋಗದ ವೆಚ್ಚದ ಮಿತಿಯೊಳಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ. ೨೦೧೧ ರಲ್ಲಿ ಭಾರತಕ್ಕೆ ವಾಪಸಾದ ನಂತರ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳಲ್ಲಿ ತೊಡಗಿಸಿಕೊಂಡು ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಈಗ ಜೀವನವನ್ನು ಸಂಪೂರ್ಣವಾಗಿ ಮೌಲ್ಯಾಧಾರಿತ ರಾಜಕೀಯಕ್ಕೆ ಅರ್ಪಿಸಿಕೊಂಡಿದ್ದು, ಪ್ರಸಕ್ತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರಾಗಿದ್ದಾರೆ.