ಸದಾಶಿವ ಸೊರಟೂರು

ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ಈಗ ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿ (ಪ್ರೌಢಶಾಲೆ) ನಲ್ಲಿ ಕನ್ನಡ ಪಾಠ ಹೇಳ್ತಿದೀನಿ… ಅದು ವೃತ್ತಿ. ಪಾಠ ಮಾಡುತ್ತಾ ಕಳೆದು ಹೋಗುವುದು ನನಗೆ ಅತೀ ಖುಷಿಕೊಡುವಂತದ್ದು. ಅದರಾಚೆಯ ಓದು ಬರಹ ಪ್ರವೃತ್ತಿ. ಹತ್ತಾರು ಕತೆಗಳನ್ನು ಬರೆದಿದ್ದೀನಿ. ಬರೆದ ಲೇಖನ, ಕವನ, ಪ್ರಬಂಧಗಳ ಲೆಕ್ಕ ಇಟ್ಟಿಲ್ಲ. ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಇವೆಲ್ಲಾ ಪ್ರಕಟವಾಗಿವೆ. ನಾನೂ ಕೂಡ ನಿಮ್ಮ ಹಾಗೆ ಅಂದಿನ ಪತ್ರಿಕೆಯಲ್ಲಿ ಅವುಗಳನ್ನು ನೋಡಿ ಮರೆತು ಹೋಗಿದ್ದೇನೆ. ಐದಾರು ಪುಸ್ತಕಗಳೂ ಆಗಿವೆ. ಈಗ ಅವಧಿ ಆನ್‌ಲೈನ್‌ ಪತ್ರಿಕೆಯಲ್ಲಿ ವಾರಕ್ಕೊಂದು ಕತೆ ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ಓದು ಅಂದ್ರೆ ಬರೀತೀನಿ. ಹಲವು ಇಷ್ಟ ಪುಸ್ತಕ ಪ್ರಾಣ. ಒಂಟಿತನವೇ ಗೆಳೆಯ, ಸಂಗೀತ ಆತ್ಮಬಂಧು, ಕ್ರೀಡೆ ನೋಡುತ್ತೇನೆ ಆಡುವುದಿಲ್ಲ. ನೀನು ಬರಹಗಾರನಾ ಅಂತ ಯಾರಾದರೂ ಕೇಳಿದರೆ ನೋ ನಾನು ಮೇಷ್ಟ್ರು ಅಂತ ಹೇಳೋದು ನನಗೆ ಹೆಚ್ಚು ಇಷ್ಟ. ಇದರಾಚೆ ಮತ್ತೇನಿಲ್ಲ. ಪರಿಚಯಕ್ಕೆ ಇಷ್ಟು ಸಾಕು.