ಪಾಪುಗುರು

ಜನನ ೧೯೮೧. ದಾವಣಗೆರೆಯಲ್ಲಿ ವಾಸ. ದಿನಪತ್ರಿಕೆ ವಿತರಕ, ಮರದ ಕೆಲಸ, ವಿಜಯ ಕರ್ನಾಟಕ ಪತ್ರಿಕೆ ವರದಿಗಾರ.
`ಸೂಜಿ’ ಕಾದಂಬರಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿಗೆ ಪ್ರೋತ್ಸಾಹ ಧನ ದೊರೆತಿದೆ. ಈ ಕಾದಂಬರಿಗೆ ರಾಜ್ಯ ಮಟ್ಟದ `ಲೇಖಿಕ’ ಪ್ರಶಸ್ತಿ ಹಾಗೂ `ಗುರುಕುಲ’ ಪ್ರಶಸ್ತಿಗಳು ಸಂದಿವೆ. `ಮುಳ್ಳೆಲೆಯ ಮದ್ದು’ ಕವನ ಸಂಕಲನಕ್ಕೆ ರಾಜ್ಯಮಟ್ಟದ `ಹಿಂದುಸ್ತಾನ್ ರಿಪಬ್ಲಿಕನ್’ ಪ್ರಶಸ್ತಿ ಲಭಿಸಿದೆ. ದಾವಣಗೆರೆಯ ಕಾರ್ಮಿಕ ನೇತಾರ ಕಾಂ|| ಹೆಚ್ಕೆ. ರಾಮಚಂದ್ರಪ್ಪನವರ ಸಂಸ್ಮರಣ ಗ್ರಂಥ `ಕೆಂಪು ಕಾಂಡದ ಹೂವು’ ಕೃತಿಯ ಸಂಪಾದನೆ. ಅಖಿಲ ಭಾರತ ಕವಿಗೋಷ್ಠಿಯಲ್ಲಿ ಭಾಗಿ. `ಬಣ್ಣದ ಉಗುರು’ ಸಣ್ಣಕಥೆ ಕಿರುಚಿತ್ರವಾಗಿ ಪ್ರದರ್ಶನ ಕಂಡು ಎರಡನೆಯ ಬಹುಮಾನ ಗಳಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆಯಿಂದ `ಯುವ ಪುರಸ್ಕಾರ’ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ.