ನರೇಂದ್ರ ರೈ ದೇರ್ಲ

‘ದೇರ್ಲ’ ಯಾನೆ ನರೇಂದ್ರ ರೈ ದೇರ್ಲ ಹುಟ್ಟಿದ್ದು ಕರಾವಳಿಯ ಪುತ್ತೂರು ತಾಲೂಕಿನ ಪುಟ್ಟ ಹಳ್ಳಿ ದೇರ್ಲದಲ್ಲಿ, ವ್ಯವಸಾಯ ಕುಟುಂಬ, ಹೆಚ್ಚು ಶಾಲೆ ಓದದ ಕುಟುಂಬದಲ್ಲಿ ಜನಿಸಿ ಸ್ವಪ್ರಯತ್ನದಿಂದಲೇ ಓದಿ ಓದಿ ಬರೆದು ಬರೆದು ಪತ್ರಕರ್ತನಾಗಿ, ಪ್ರಾಧ್ಯಾಪಕನಾಗಿ ಎಲ್ಲದಕ್ಕಿಂತಲೂ ಹೆಚ್ಚು ತಾನು ಕೃಷಿಕ, ಎಂದು ಗುರುತಿಸಿಕೊಳ್ಳಲು ಖುಷಿ
ನೆಲದವನು
ಪಡುವವರು. ಕುವೆಂಪು ಕುಟುಂಬ, ಪೂರ್ಣಚಂದ್ರ ತೇಜಸ್ವಿಯವರಂಥ ನೆಲ-ಕಾಡುವಾಸಿಯ ಒಡನಾಟ ದೊರೆತ ಮೇಲೆ ಈ ಲೇಖಕ ಮಣ್ಣಿಂದ ಎದ್ದು ಬಂದದ್ದೇ ಇಲ್ಲ. ಪಂಪನೇ ಇರಲಿ ಚಂಪನೇ ಇರಲಿ, ಪದ್ಯವೇ ಇರಲಿ ಗದ್ಯವೇ ಇರಲಿ ತರಗತಿಯೊಳಗಡೆ ಮಕ್ಕಳನ್ನು ಕಾಡಿಗೆ ಒಯ್ಯುವ ಬೇರಿಗಿಳಿಸುವ ತವಕ-ಉಮೇದು ಇವರದು. ಬರೆದದ್ದೆಲ್ಲಾ ಕೃಷಿ, ಪರಿಸರದ ಬಗ್ಗೆಯೇ. ತಾನು ಬರೆದ ಪಾಠಗಳನ್ನೇ ತರಗತಿಯೊಳಗಡೆ ಕಲಿಸುವ ಅದೃಷ್ಟ ಬೇರೆ. ಸುಮಾರು ಹತ್ತಾರು ಲೇಖನಗಳು ಕರ್ನಾಟಕ-ಕೇರಳದ ಪಠ್ಯಗಳೊಳಗಡೆ ಸೇರಿವೆ. ಅಕಾಡೆಮಿ, ಭಾಷಾ ಭಾರತಿ, ಕೃಷಿ ವಿಶ್ವವಿದ್ಯಾನಿಲಯ, ರಾಜ್ಯ ಸರಕಾರ ಇವರ ಕೃತಿಗಳನ್ನು ಗುರುತಿಸಿ ಪ್ರಶಸ್ತಿ-ಬಹುಮಾನ ನೀಡಿ ಸತ್ಕರಿಸಿವೆ. ‘ತೇಜಸ್ವಿ ಪತ್ರಗಳು ಇವರ ಬಹುಮುಖ್ಯ ಸಂಪಾದನಾ ಕೃತಿ. ತೇಜಸ್ವಿಯವರು ಬರೆದ ಮತ್ತು ತೇಜಸ್ವಿಯವರಿಗೆ ಕುವೆಂಪು, ಶಿವರಾಮ ಕಾರಂತ, ಲಂಕೇಶ್, ಅನಂತಮೂರ್ತಿ, ಶಿವರುದ್ರಪ್ಪ ಮೊದಲಾದ ಸಾಹಿತ್ಯ ದಿಗ್ಗಜರು ಬರೆದ ಸುಮಾರು ಏಳುನೂರು ಪತ್ರಗಳಿರುವ ಬೃಹತ್‌ ಸಂಪುಟವಿದು.
ಶಿಕ್ಷಕನಾಗಿಯೂ ವಿದ್ಯಾರ್ಥಿಗಳಿಗಿರುವ ಶ್ರದ್ಧೆ; ಬರೆಯುವ ಶೈಲಿಯಂತೇ ಇವರ ಒಡನಾಟವೂ ಸ್ನೇಹಾಂತಿಕ. ಎಷ್ಟೇ ಪುಸ್ತಕ ಬರೆದರೂ, ಕಾಲೇಜಿನ ಮಕ್ಕಳಿಗೆ ಪಾಠ ಮಾಡುತ್ತಿದ್ದರೂ, ಸಾಹಿತ್ಯದ ಪರಿಸರದಲ್ಲಿ ಬದುಕಲು ಅಪಾರ ಆಸಕ್ತಿ ಇದ್ದರೂ ನೇರಾನೇರ ಸಮ್ಮುಖದಲ್ಲಿ ಪಕ್ಕಾ ಕೃಷಿಕನಂತೆ ಕಾಣಿಸುವ ದೇರ್ಲ ಇತ್ತೀಚಿಗೆ ‘ತೇಜಸ್ವಿ ಪ್ರತಿಷ್ಠಾನ’ದ ಅಧ್ಯಕ್ಷಗಿರಿಯನ್ನು ನಿರಾಕರಿಸಿ ಸರಳವಾಗಿ, ಅಧಿಕಾರರಹಿತವಾಗಿ ಬದುಕುವುದರಲ್ಲೂ ಒಂದು ಸುಖವಿದೆ ಎಂದು ಆದರ್ಶ ಮೆರೆದವರು. ‘ಬೊಗಸೆ ತುಂಬಾ ಬೀಜ’, ‘ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ’, ‘ನೆಲದವರು’, ‘ಸಾವಯವ ಕೃಷಿ’, ‘ಹಸಿರು ಕೃಷಿಯ ನಿಟ್ಟುಸಿರು’, ‘ಹಸಿರು ಉಸಿರು’, ‘ನೆಲಮುಖಿ’, ‘ಬೀಜಧ್ಯಾನ’, ‘ಹಳ್ಳಿಯ ಆತ್ಮಕತೆ’, ‘ಕೊರೋನಾ ನಂತರದ ಗ್ರಾಮಭಾರತ’, ‘ಬೇರು ಬದುಕು’, ‘ನಂದನವನ’, ‘ಚೌಟರ ತೋಟ’-ಇವೆಲ್ಲ ದೇರ್ಲರ ಪರಿಸರ-ಕೃಷಿ ಸಂಬಂಧೀ ಕೃತಿಗಳು. ತನ್ನ ಪುಸ್ತಕಗಳನ್ನೆಲ್ಲಾ ತಾನೇ ‘ಕನಸು’ ಪ್ರಕಾಶನದ ಮೂಲಕ ಪ್ರಕಟಿಸುತ್ತಾ, ನಾಗರಿಕ ಜಗತ್ತಿನಿಂದ ದೂರ ಬದುಕುವ ದೇರ್ಲರು ಇತ್ತೀಚೆಗೆ ಈ ದೇಶದ ರೈತರ ಯಶೋಗಾಥೆಗಳೂ ಪುಸ್ತಕವಾಗಬೇಕು, ದಾಖಲಾಗಬೇಕು ಎಂಬ ಉದ್ದೇಶದಿಂದ ಒಂದಷ್ಟು ಪ್ರಯೋಗಶೀಲ, ನೆಲಪರ, ಸುಸ್ಥಿರ ರೈತರನ್ನು ಅಗೆದು ಬಗೆದು ಬರೆಯಲು ಮುಂದಾಗಿದ್ದಾರೆ. ಆ ಯೋಜನೆಯಡಿಯಲ್ಲಿ ಈಗಾಗಲೇ
ಎರಡು ಕೃತಿಗಳು ಪ್ರಕಟಗೊಂಡಿವೆ.