ಡಾ. ಎಂ ಎ ಜಯರಾಮ್ ರಾವ್

ಹೆಸರಾಂತ ಸಾಹಿತಿ ಗಮಕಿ ಕೀರ್ತಿಶೇಷ ಮೈ.ಶೇ.ಅನಂತಪದ್ಮನಾಭರಾವ್‌ ಅವರ ಸುಪುತ್ರರಾದ ಜಯರಾಮ್ ರಾವ್ ಅವರು ಪರಂಪರೆಯಿಂದ ಗಳಿಸಿರುವ ಗಮಕ ಕಲೆಯ ವಾಚನ ವ್ಯಾಖ್ಯಾನ ಪ್ರಧಾನವಾಗಿ ತೊಡಗಿಸಿಕೊಂಡಿದ್ದರೂ, ಸಂಗೀತ ಸಾಹಿತ್ಯ ಕ್ಷೇತ್ರಗಳಲ್ಲೂ ಅಪಾರವಾದ ವಿದ್ವತ್ತನ್ನು ಹೊಂದಿದ್ದಾರೆ. ಅವರ ವಿದ್ಯಾಭ್ಯಾಸಕ್ಕೂ ಅವರಿಗಿರುವ ಪ್ರತಿಭೆಗೂ ಅಜಗಜಾಂತರ, ವೃತ್ತಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರೂ, ಪ್ರವೃತ್ತಿಯಾಗಿ ಗಮಕಿಯಾಗಿ ೬೭ ವರಗಳ ದೀರ್ಘ ಅನುಭವ. ಕನ್ನಡ ಸಾರಸ್ವತ ಲೋಕದ ಖ್ಯಾತ ಕವಿಗಳ, ಮಠಾದೀಶರ ಪ್ರಶಂಸೆಗೆ ಹಾಗೂ ಆಶೀರ್ವಾದ ಪಡೆದಿರುತ್ತಾರೆ. ಸುಗಮ ಸಂಗೀತ, ನಾಟಕ ಕ್ಷೇತ್ರಗಳಲ್ಲೂ ಸಾಕಷ್ಟು ಪರಿಶ್ರಮವಿರುವ ರಾಯರು ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಮುಂಬೈ, ಅಹಮದಾಬಾದ್, ಲಾಯ್, ನಾಗಪುರ, ಭೂಪಾಲ್ ನಲ್ಲೇ ಅಲ್ಲದೆ ಹಾಂಗ್ ಕಾಂಗ್ ನಲ್ಲೂ ತೃಪ್ತಿಕರವಾದ ವಾಚನ ವ್ಯಾಖ್ಯಾನಗಳನ್ನು ನೀಡಿರುತ್ತಾರೆ. ವಾಚನ ವ್ಯಾಖ್ಯಾನಗಳೆರಡರಲ್ಲೂ ಅವರೊಬ್ಬರೇ ನಿರ್ವಹಿಸುವಂತಹವರಲ್ಲಿ ಏರಳವಾದ ವ್ಯಕ್ತಿ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಟಿ.ಟಿ.ಡಿ ದಾಸ ಸಾಹಿತ್ಯ ಯೋಜನೆಯ ಸಲಹಾ ಮಂಡಆಯ ಸದಸ್ಯರಾಗಿ, ಆಕಾಶವಾಣಿ ಆಡಿಶನ್ ಬೋರ್ಡ್ ಸದಸ್ಯರಾಗಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಗಾನಕಲಾ ಸಂಪಾದಕರಾಗಿ, ಆರಾಧನಾ
ಸಿರಿಯ ಸಹ ಪುರಂದರದಾಸರ ಮುಳಬಾಗಿಲು ಶ್ರೀ ಇನ್ನೂ ಅನೇಕ ಸಂಘಸಂಸ್ಥೆಗಳಲ್ಲಿ ತಮ್ಮ ಅಪಾರವಾದ ಸೇವೆಯನ್ನು ಸಲ್ಲಿಸಿ ಎಲ್ಲರ ಅಭಿಮಾನಕ್ಕೆ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕರ್ನಾಟಕ ಕಲಾಶ್ರೀ, ಗಮಕ ಕಲಾರತ್ನ, ಗಮಕಕಲಾ ಕೇಸರಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕುವೆಂಪು ಕಲಾನಿಕೇತನ ಸಂಸ್ಥೆಯ ವಿಶ್ವಮಾನವ ಕುವೆಂಪು ಪ್ರಶಸ್ತಿ ಮುಂತಾದ ಮೂವತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ್ದಾರೆ.