ಡಾ ಪ್ರೇಮಲತಾ ಬಿ

 ಡಾ. ಪ್ರೇಮಲತ ಬಿ. ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ, ಕಳೆದ 20 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ಚಿಕ್ಕಂದಿನಿಂದಲೂ ಬರವಣಿಗೆ ಇವರ ಕಾ ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮತ್ತು ಅಂತಹಾಲ ತಾಣಗಳಲ್ಲಿ ಲೇಖನಗಳು, ಅಂಕಣ ಬರಹ, ಕಥೆ, ಕವನಗಳು, ಪ್ರವಾಸ, ವೈದ್ಯರು ಲೇಖನಗಳು ಮತ್ತು ಪ್ರಬಂಧಗಳನ್ನು ಬರೆಯುತ್ತ ಬಂದಿದ್ದಾರೆ. ನೈಯಕಾ ಸಂಘದ ತ್ರಿವೇಣಿ ಕೃತಿ ಮನೋ ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2021), 3K ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2021), ಯು.ಎ.ಇ.ಯ ಧ್ವನಿ ಪ್ರತಿಷ್ಠಾನದವರು ಆಯೋಜಿಸಿದ್ದ ಜಾಗತಿಕ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2021), ಕಹಳೆ ಕಥಾ ಸ್ಪರ್ಧೆಯ 25 ಅತ್ಯುತ್ತಮ ಕಥೆ (2021 ಮತ್ತು 2020), ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯಲ್ಲಿ ನಿರ್ಮಲ ಎಲಿಗಾರ್‌ ದತ್ತಿ ಪ್ರಥಮ ಬಹುಮಾನ (2019), ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ (2019), ಪ್ರಜಾವಾಣಿ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2017), ಸಿಂಗಾಪೂರ್ ನಡೆಸಿದ ಸಿಂಚನ ಕಥಾ ಸ್ಪರ್ಧೆಯಲ್ಲಿ ಪ್ರಥಮ (2016) ಮತ್ತು ಸಿಂಚನ ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (2017), ತುಷಾರ ಚಿತ್ರ-ಕವನ ಸ್ಪರ್ಧೆಯ ಸಮಾಧಾನಕರ ಬಹುಮಾನಗಳು (1997) ಇವರಿಗೆ ದೊರೆತಿವೆ. ‘ಐದು ಬೆರಳುಗಳು’ (2022) ಮತ್ತು ‘ತಿರುವುಗಳು’ (2022) ಇವರ ಪ್ರಕಟಿತ ಕಥಾ ಸಂಕಲನಗಳು. ‘ಐದು ಬೆರಳುಗಳು’ ಎನ್ನುವ ಈ ಸಂಕಲನದ ಹಲವು ಕಥೆಗಳು 2020ರ ಛಂದ ಹಸ್ತಪ್ರತಿ ಸ್ಪರ್ಧೆಯಲ್ಲಿ ಅಂತಿಮ ಹಂತವನ್ನು ತಲುಪಿದ್ದವು. ಇವರ ಹಸ್ತಪ್ರತಿ ‘ತಿರುವುಗಳಿಗೆ’ 2022ರ ವಿದ್ಯಾಧರ ಕನ್ನಡ ಪ್ರತಿಷ್ಠಾನ, ಧಾರವಾಡದ ಮಾತೋಶ್ರೀ ಜಾನಕೀಬಾಯಿ ರಂಗರಾವ್ ಮುತಾಲಿಕ ದೇಸಾಯಿ ಹಸ್ತಪ್ರತಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. ಕೋವಿಡ್ ವಿಶ್ವವ್ಯಾಪಿ ಪಿಡುಗು ಶುರುವಾದಾಗಿನಿಂದ ಅದಕ್ಕೆ ಲಸಿಕೆ ಕಂಡು ಹಿಡಿಯುವವರೆಗೆ ‘ಕನ್ನಡ ಪ್ರೆಸ್’ ಜಾಲತಾಣದಲ್ಲಿ ಇವರು ಬರೆದ ಅಂಕಣ ಬರಹಗಳು ‘ಕೋವಿಡ್ ಡೈರಿ’ (2020) ಎನ್ನುವ ಹೆಸರಿನಲ್ಲಿ ಸಾವಣ್ಣ ಪ್ರಕಾಶನದ ಮೂಲಕ ಪುಸ್ತಕವಾಗಿ ಪ್ರಕಟವಾಗಿದೆ. ಕನ್ನಡ ಸಂಸ್ಕೃತಿ ಇಲಾಖೆ ಬಾಯೆಂಬ ಬ್ರಂಹಾಂಡ’ (2018) ಎನ್ನುವ ಹೆಸರಿನ, ದಂತವೈದ್ಯಕೀಯ ಲೇಖನ ಮಾಲೆಯನ್ನು ಹೊತ್ತ ಪುಸ್ತಕವನ್ನು ಪ್ರಕಟಿಸಿದೆ. ಹಲವಾರು ಪತ್ರಿಕೆಗಳಲ್ಲಿ ಬಹಳಷ್ಟು ವೈದ್ಯಕೀಯ ಲೇಖನಗಳನ್ನು ಬರೆದಿರುವ ಪ್ರೇಮಲತರ ಹಲವು ಅಧ್ಯಾಯಗಳು, ನವಕರ್ನಾಟಕ ಪಬ್ಲಿಕೇಶನ್ನಿನ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು ಪ್ರಶಸ್ತಿ’ (2022) ಪಡೆದ ‘ನಮ್ಮ ದೇಹದ ವಿಜ್ಞಾನ’ ಎನ್ನುವ ಪುಸ್ತಕದಲ್ಲಿ ಸೇರ್ಪಡೆಯಾಗಿವೆ. ಮುಖಪುಟ ಲೇಖನಗಳೂ ಸೇರಿದಂತೆ ಹಲವು ಸಾಮಾಜಿಕ ಕಳಕಳಿಯ ಲೇಖನಗಳನ್ನು ಬರೆದಿರುವ ಇವರ ಮತ್ತೊಂದು ಲೇಖನ ‘ಮಹಿಳೆ ಮತ್ತು ವಿರಾಮ’ (2022) ಎನ್ನುವ ಸಂಪಾದಿತ ಕೃತಿಯಲ್ಲಿ ಸೇರ್ಪಡೆಯಾಗಿದೆ. ಬೆಂಗಳೂರಿನ ಸರ್ಕಾರಿ ದಂತವೈದ್ಯಕೀಯ ಕಾಲೇಜಿನ ಪದವಿ ಮತ್ತು ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಡೆಂಟಲ್ ಇಂಪ್ಲಾಂಟಜಿಸ್ಟ್ ಆಗಿ ಹಲವು ದಂತ ಚಿಕಿತ್ಸಾಲಯಗಳಲ್ಲಿ ಕೆಲಸಮಾಡುತ್ತಿದ್ದಾರೆ. ಓದು, ಬರಹ, ನಿರೂಪಣೆ, ಪ್ರವಾಸ, ನಾಟಕದ ಹವ್ಯಾಸಗಳೊಂದಿಗೆ ನಾಡಿನ ಮತ್ತು ಇಂಗ್ಲೆಂಡಿನ ಹಲವು ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.