ಗಾಯತ್ರಿ ರಾಜ್

ಅಂಕಣಕಾರರು ಮತ್ತು ಕಾದಂಬರಿಗಾರ್ತಿಯಾದ ಗಾಯತ್ರಿ ರಾಜ್, ಸಧ್ಯ
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊOದರಲ್ಲಿ ವ್ಯವಸ್ಥಾಪಕಿಯಾಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ.
ಇವರ ಕಥೆ, ಕವನ ಹಾಗೂ ಪ್ರವಾಸ ಕಥನಗಳು, ತರಂಗ, ಸುಧಾ, ಕರ್ಮವೀರ,
ಓ ಮನಸೇ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಹೊಸ ದಿಗಂತ
ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.
ಇವರು ಸಾಕಷ್ಟು ಕೃತಿಗಳು ರಚಿಸಿದ್ದು, ಅವುಗಳಲ್ಲಿ “ಬಣ್ಣದ ಜೋಳಿಗೆ”
(ಕಥಾಸಂಕಲನ), “ಆಮ್ರಪಾಲಿ” (ಐತಿಹಾಸಿಕ ಕಾದಂಬರಿ), ಬ್ಯೂಟಿಫುಲ್
ಲೈಫ್ (ಅಂಕಣ ಬರಹಗಳ ಸಂಕಲನ). ೧೫ ಸಣ್ಣಕಥೆಗಳು (ಕಥಾಸಂಕಲನ), ೩
ನೀಳ್ಗತೆಗಳು (ಕಥಾಸಂಕಲನ), ಹೊಸಕತೆಗಳು (ಕಥಾಸಂಕಲನ) ಎಂಬ ಕೃತಿಗಳು
ಈಗಾಗಲೇ ಅಪಾರ ಜನರ ಮೆಚ್ಚುಗೆಯನ್ನು ಪಡೆದಿದ್ದಾವೆ.
ಇವರು ಬರೆದ “ಆಮ್ರಪಾಲಿ” ಕಾದಂಬರಿಗೆ ಈ ವರ್ಷದ ಕನ್ನಡ ಸಾಹಿತ್ಯ
ಪರಿಷತ್ತಿನ “ಶ್ರೀಮತಿ ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ ಪ್ರಶಸ್ತಿ”,
ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಯಾದ “ಪುಸ್ತಕ ಸಾಹಿತ್ಯ” ಪ್ರಶಸ್ತಿ,
೨೦೨೨ ಸಾಲಿನ ಅವ್ವ ಸೃಜನಶೀಲ ಸಾಹಿತ್ಯ ಪ್ರಸಸ್ತಿಯ ಮೆಚ್ಚುಗೆಯನ್ನು ಪಡೆದಿದೆ.
ಶೀಘ್ರದಲ್ಲಿಯೇ ಇವರ ಇನ್ನೂ ಎರಡು ಕಾದಂಬರಿಗಳು ಬಿಡುಗಡೆಯಾಗಲಿವೆ.