ಜರಗನಹಳ್ಳಿ ಶಿವಶಂಕರ್
nil
ಪ್ರಸನ್ನ ಅವರ ಪ್ರಮುಖ ಕಾಳಜಿ ಮನುಷ್ಯ ಭಿನ್ನ-ಭಿನ್ನ ಕಾಲಗಳಲ್ಲಿ ಹಿಮ ಸನ್ನಿವೇಶಗಳಲ್ಲಿ ಹೇಗೆ ಮತ್ತು ಎಷ್ಟು ಭಿನ್ನವಾಗಿ ನಡೆದುಕೊಳ್ಳುತ್ತಾನೆ ಎನ್ನುವುದನ್ನು ಅನ್ವೇಷಿಸುವುದು ಆಗಿದೆ. ಈ ಅನ್ವೇಷಣೆ ಸಾಧಾರಣವಾಗಿ ಮಧ್ಯಮ ವರ್ಗದ ಬದುಕಿನ ವ್ಯವಸ್ಥೆಯಲ್ಲಿ ಸಿಲುಕಿರುವ ಜನಗಳ ಮನೋಭಾವದ ಅನ್ವೇಷಣೆಯೇ ಆಗಿದೆ. ಈ ಗುಂಪಿನಲ್ಲಿ ಸರ್ಕಾರಿ ಮತ್ತು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡವರು. ನಿವೃತ್ತರು, ರಾಜಿನಾಮೆ ಕೊಟ್ಟವರು ಮುಂತಾದವರೆಲ್ಲ ಇದ್ದಾರೆ. ಅವರು ಇರುವುದು ತಮ್ಮ ತಮ್ಮ ದೌರ್ಬಲ್ಯಗಳ ಪ್ರತೀಕಗಳಾಗಿಯೇ ಹೌದು. ದೌರ್ಬಲ್ಯಗಳನ್ನು ಎದುರುಗೊಳ್ಳುವ, ಅದನ್ನು ನಿರ್ವಿಣ್ಣರಾಗಿ ಒಪ್ಪಿಕೊಳ್ಳುವ, ಎದುರಿಸುವ ಎಲ್ಲ ಬಗೆಯ ಜನಗಳನ್ನು ನಾವು ಈ ಕಥೆಗಳಲ್ಲಿ ಮುಖಾಮುಖಿಯಾಗುತ್ತೇವೆ.
#
ವಿಶಿಷ್ಟ ಸಂವೇದನೆಗಳಿಂದ ರೂಪುಗೊಂಡ ಈ ಕಥೆಗಳನ್ನು ಒಂದು ಸೀಮಿತ ಸಾಹಿತ್ಯದ ವಾದದ ಚೌಕಟ್ಟಿಗೆ ತಂದು ಕೂಡಿಸುವದು ಸಾಧ್ಯವಾಗುವದಿಲ್ಲ. ಬಹುತೇಕ ಎಲ್ಲಾ ಕಥೆಗಳು ಭಾರತದ ಸಾಮುದಾಯಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿವೆ
ಬನ್ನಂಜೆ ಗೋವಿಂದಾಚಾರ್ಯ
Nil
...ಒಂದು ಶಾಸ್ತ್ರನಿರ್ಮಾಣಕ್ಕೆ ನೆರವಾಗಬಲ್ಲ ಪದಗಳ ಪ್ರಪಂಚವನ್ನೇ ಪರಿಚಯ ಮಾಡಿಕೊಡುವ 'ಪರಿಸರ ನಿಘಂಟು' ಇದೀಗ ಇಬ್ಬರು ತರುಣ ಮಿತ್ರರ ಸಾಹಸದ ಪರಿಣಾಮವಾಗಿ ಕನ್ನಡದಲ್ಲಿ ಮೊಟ್ಟಮೊದಲಿಗೆ ಸಿದ್ಧವಾಗಿದೆ. ...ಇದು ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಕೇವಲ ಪಾರಿಭಾಷಿಕ ಪದಗಳ ನಿಘಂಟಲ್ಲ; ಒಟ್ಟಾರೆಯಾಗಿ ಪರಿಸರ ವಿಜ್ಞಾನದ 'ಭಾಷಿಕ ನಿಘಂಟು', ಕನ್ನಡದಲ್ಲಿ ಪರಿಸರ ವಿಜ್ಞಾನವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ, ಬರೆಯಬೇಕೆನ್ನುವವರಿಗೆ ಈ ಕುರಿತ ಜಾಗತಿಕ ತಿಳುವಳಿಕೆಯನ್ನು ಹಿಡಿದಿರಿಸಿದ ಭಾಷೆಯನ್ನು ಪರಿಚಯ ಮಾಡಿಕೊಡುವ ನಿಘಂಟು. ಆದ ಕಾರಣವೇ ಈ ನಿಘಂಟುಕಾರರ ಉದ್ದೇಶ, ಪರಿಸರ ವಿಜ್ಞಾನಕ್ಕೆ ಸಂಬಂಧಪಟ್ಟ ಯಾವುದೇ ಪದಕ್ಕೆ ಇರಬಹುದಾದ ಅರ್ಥವನ್ನು ಸೂಚಿಸಿ ವಿರಮಿಸುವಷ್ಟಕ್ಕೆ ಸೀಮಿತವಾಗಿಲ್ಲ.. -ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಡಾ. ಟಿ.ಎಸ್. ವಿವೇಕಾನಂದ.. ಪರಿಸರವಾದವನ್ನು ಸೃಜನಾತ್ಮಕವಾಗಿ ಪುನರಾವಲೋಕನಕ್ಕೊಳಪಡಿಸಿದ ಮಹತ್ವದ ಕೃತಿ 'ಭೂಮಿಗೀತೆ', ತೇಜಸ್ವಿಯವರೊಂದಿಗೆ ಕೂಡಿ ಮಾಡಿದ 'ಕಿರಿಯರಿಗಾಗಿ ಪರಿಸರ', ಭಾರತದ ವೃಕ್ಷಗಳನ್ನು ಕುರಿತು ನಿರ್ಮಿಸಿದ 'ಹಸಿರ ಕೊಳಲು', ಹಂಪಿ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿಯನ್ನು ದೊರಕಿಸಿಕೊಟ್ಟ ಅಧ್ಯಯನದ ಪುಸ್ತಕರೂಪ 'ಪರಿಸರ ಕಥನ' ಇವರ ಮಹತ್ವದ ಕೃತಿಗಳಲ್ಲಿ ಕೆಲವು. ಹಲವಾರು ಬಹುಮಾನಿತ ಕಥೆ, ಪದ್ಯಗಳೊಂದಿಗೆ ಜಿಮ್ ಕಾರ್ಬೆಟ್‌ರ ಇಡೀ ಶಿಕಾರಿ ಕಥೆಗಳ ಕನ್ನಡ ರೂಪಾಂತರ ಇವರ ಹೆಸರಿನಲ್ಲಿದೆ. ಭೂಮಿಗೀತೆ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರ ಮಹತ್ವಾಕಾಂಕ್ಷೆಯ ಪ್ರಯತ್ನ 'ಪರಿಸರ ನಿಘಂಟು' ಭಾರತೀಯ ಭಾಷೆಗಳಲ್ಲಿಯೇ ಮೊದಲ ಪ್ರಯತ್ನ. ಇದು ಕನ್ನಡದ ಪರಿಸರ ಸಾಹಿತ್ಯದಲ್ಲಿಯೇ ಒಂದು ನಿರ್ಣಾಯಕ ಮೈಲುಗಲ್ಲು ಸಹ ಸಂಪಾದಕರಾದ ಶೇಷಗಿರಿ ಜೋಡಿದಾರ್ ಈ ಪ್ರಯತ್ನದ ಜೊತೆಗಾರ. -ಪ್ರೊ. ಕಿ.ರಂ. ನಾಗರಾಜ,
Showing 2821 to 2850 of 5424 results