ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ. ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ. ఇంగ్లీష్ ಸಾಹಿತ್ಯದಲ್ಲಿ ಇರಬಹುದಾದ ಇಂಥ ಕಥಾನಕಗಳು ಕನ್ನಡದಲ್ಲಿ ಅಪರೂಪ. ಎಸ್ಟೇಟ್ ಮಧ್ಯದ ಸಿರಿವಂತರ ಬದುಕಿನ ನಿಗೂಢ ಘಟನೆಯೊಂದನ್ನು ನಾದಾ ಅವರು ರೋಚಕವಾಗಿ ಹೆಣೆದಿದ್ದಾರೆ. ಎಸ್ಟೇಟು ಬಂಗಲೆಯಲ್ಲಿ ನಡೆಯುವ ಈ ಕಥೆಯು ಪ್ರೀತಿ, ದ್ವೇಷ, ಅಸೂಯೆ, ವಂಚನೆ ಮುಂತಾದ ಹಲವು ಭಾವಗಳ ಸಮ್ಮಿಲನವಾಗಿದೆ. ವಿನಾಕಾರಣ ಕೊಲೆಯಾಗುವ ಓರ್ವ ಅಮಾಯಕ ಹೆಣ್ಣಿನ ಮನಸ್ಸನ್ನು ಆರ್ಥೈಸಲಾಗದೆ ಆಕೆಯ ಭಾವನೆಗಳ ಮೌಲ್ಯವನ್ನು ತಿಪ್ಪೆಗೆಸೆಯುವ ಕ್ರೌರ್ಯ ತಮ್ಮ ಜನ್ಮಸಿದ್ದ ಹಕ್ಕು ಎಂಬಂತೆ ವರ್ತಿಸುವ ಪುರುಷ ಸಮಾಜವನ್ನು ಈ ಕಾದಂಬರಿ ನಿಕಷಕ್ಕೊಡ್ಡುತ್ತದೆ. ಕೊಡಗಿನ ಪ್ರಾಕೃತಿಕ ರಮಣೀಯತೆ ಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವುದು ಈ ಕಾದಂಬರಿಯ ಮತ್ತೊಂದು ವಿಶೇಷ. ಕರಾವಳಿ ತೀರದ ನಾದಾ ಅವರ ಈ ಕಾದಂಬರಿ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅನುಪಮ ಕೊಡುಗೆ. ಟಿ.ಎಸ್. ದಕ್ಷಿಣಾಮೂರ್ತಿ
NA
ಎಚ್ ಡುಂಡಿರಾಜ್
#
ಅಗ್ನಿ ಶ್ರೀಧರ್
nil
ಕಾಲ
##
ಬಿ ಎಸ್ ಕೇಶವರಾವ್
ಡಾ ಗಜಾನನ ಶರ್ಮ
ವಿಶ್ವೇಶ್ವರ್ ಭಟ್ ಪತ್ರಿಕೋದ್ಯಮದಲ್ಲಿ ಸದಾ ಕೇಳಿ ಬರುವ ಹೆಸರು ವಿಶ್ವೇಶ್ವರ ಭಟ್. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರಾದ ವಿಶ್ವೇಶ್ವರ ಭಟ್ ವೃತ್ತಿ ಜೀವನ ಆರಂಭಿಸಿದ್ದು ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಅಸಿಸ್ಟೆಂಟ್ ಪ್ರೊಫಸರ್ ಆಗಿ. ಜೊತೆಗೆ ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ವಿಶ್ವೇಶ್ವರ ಭಟ್ ಕೆಲಸ ನಿರ್ವಹಿಸಿದ್ದಾರೆ. ಪತ್ರಕರ್ತರಾಗಿ ಭಟ್ಟರ ಜೀವನ ಆರಂಭವಾಗಿದ್ದು ಸಂಯುಕ್ತ ಕರ್ನಾಟಕ ದಿನ Read More...
ಬೇಲೂರು ರಾಮಮೂರ್ತಿ ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.
Showing 61 to 90 of 299 results