• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಇಂಗ್ಲಿಷ್ ಮೂಲಕ ಕನ್ನಡ ಕಲಿಯಿರಿ | English mulaka kannada kaliyiri

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

₹195   ₹174

ಇದು ಕತೆಯಲ್ಲ ಜೀವನ | Idu Katheyalla Jeevana

ಕನ್ನಡದ ಮಹತ್ವದ ಹಿರಿಯ ಲೇಖಕಿಯರಲ್ಲೊಬ್ಬರಾದ ವಸುಮತಿ ಉಡುಪರವರ ಕಥಾಜಗತ್ತು ವಿಶಿಷ್ಟವಾದದ್ದು. ಸಂದುಹೋಗುತ್ತಿರುವ ಒಂದು ಕಾಲಘಟ್ಟದ ತಲೆಮಾರಿನ ಚಿತ್ರಣವನ್ನು ಕಟ್ಟಿಕೊಡುವ ವಸುಮತಿ ಉಡುಪರವರು ಅಪ್ಪಟ ಕಥೆಗಾರ್ತಿ, ನೇರವಾಗಿ, ಸಹಜ ಹದದಲ್ಲಿ ಕಂಡಿರಿಸಿರುವ ಇವರ ಪಾತ್ರಗಳು ಹೆಣ್ಣುಮನದ ನಾನಾಭಾವಗಳ ರಂಗಶಾಲೆ, ಪಾತ್ರಗಳ ದಿಟ್ಟತನ, ನೇರವಂತಿಕೆ, ಬದುಕನೆದುರಿಸುವ ಛಲ, ತಾಕಲಾಟಗಳ ನಡುವೆಯೂ ಗುರಿಯನ್ನು ಕಂಡುಕೊಳ್ಳುವ ಆಶಾವಾದ ಇಲ್ಲಿ ಅಸಾಧಾರಣ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಬದುಕಿನ ಹತ್ತು ಹಲವಾರು ಹಳವಂಡಗಳಲ್ಲಿ, ಬಾಳಿನ ಕುಲುಮೆಯಲ್ಲಿ ಬೆಂದು ನೊಂದರೂ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ, ಜೀವನದ ಕಟು ಸತ್ಯವನ್ನು ಅರಿಯುತ್ತಾ ಮಾನವೀಯ ಮೂರ್ತಿಗಳಾಗಿ ನಿಲ್ಲುವ ಇಲ್ಲಿನ ಹಲವಾರು ಪಾತ್ರಗಳ ಕಥೆ ಹೃದಯಸ್ಪರ್ಶಿಯಾಗಿ ಚಿತ್ರಿತಗೊಂಡಿದೆ.

₹130   ₹116

ಇಲ್ಲಿಂದ ಮುಂದೆಲ್ಲ ಕಥೆ | Illinda Mundella Kathe

'ಇಲ್ಲಿಂದ ಮುಂದೆಲ್ಲ ಕಥೆ' ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಕಥಾಲೋಕದ ಚಾಚುಗಳ ಅತ್ಯುತ್ತಮ ಮಾದರಿಯಾಗಿದೆ. ಈ ಪ್ರಯತ್ನಕ್ಕೆ ಹುಡುಕಾಟಕ್ಕೆ ಎರಡು ಲಕ್ಷಣಗಳಿವೆ. ಒಂದು, ತಾತ್ವಿಕವಾಗಿ ಮತ್ತು ತಾಂತ್ರಿಕವಾಗಿ ಈ ತನಕದ ಕನ್ನಡ ಕಥಾಪರಂಪರೆಯ ಧಾತುಗಳನ್ನೆಲ್ಲ ಒಳಗೊಳ್ಳುವ ಹಂಬಲ ಮತ್ತೊಂದು, ಮಾನುಷಲೋಕವನ್ನು ಕರಾರುಗಳಿಲ್ಲದೆ ಒಳಗೊಳ್ಳುವ ತವಕ ಕಥೆಗಾರರಾಗಿ ಮೊದಲ ಸಂಕಲನದಿಂದಲೂ ರಘುನಾಥರು ಉಳಿಸಿಕೊಂಡು ಬಂದಿರುವ ಉತ್ಕಟತೆ ಮತ್ತು ತನ್ಮಯತೆ ಅವರನ್ನು ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರನ್ನಾಗಿಸಿವೆ. ಪ್ರತಿಭೆಯ ಜೊತೆಗೆ ಬರವಣಿಗೆಯಲ್ಲಿ ಅವಸರ ತೋರಿಸದೇ ಇವರು ಕಾಯ್ದುಕೊಂಡು ಬಂದಿರುವ ಸಂಯಮದ ಪಾತ್ರವೂ ದೊಡ್ಡದು. ರಘುನಾಥರ ಬರವಣಿಗೆಯ ಬಗ್ಗೆ ವ್ಯಕ್ತಿತ್ವದ ಬಗ್ಗೆ ನನಗೆ ಸಕಾರಣವಾದ ಮೆಚ್ಚುಗೆ. ಅವರ ಸಾಹಿತ್ಯಕ ಸಂವೇದನೆ ಮತ್ತು ಸಾಂಸ್ಕೃತಿಕ ಎಚ್ಚರ ಇದಕ್ಕೆ ಮುಖ್ಯ ಕಾರಣ, ಇತ್ತೀಚಿನ ದಿನಗಳಲ್ಲಿ ಸಮಕಾಲೀನ ಬೆಳವಣಿಗೆಗಳನ್ನು ಕುರಿತ ಅವರ ಪ್ರತಿಕ್ರಿಯೆಗಳ ಸ್ಪಷ್ಟತೆ ಮತ್ತು ನಿರ್ಭಯವಾದ ಮಾತುಗಳು ಎರಡೂ ಅವರ ಮೇಲಿನ ಭರವಸೆ ಮತ್ತು ಗೌರವವನ್ನು ಹೆಚ್ಚಿಸುತ್ತಿವೆ.

₹170   ₹151

ಇಳಿಸಲಾಗದ ಶಿಲುಬೆ | Ilisalaagada shilube

ಲಂಕೇಶರು ಒಮ್ಮೆ ಅತಿಯಾದ ವೈಚಾರಿಕತೆ ಕೂಡ ಬದುಕನ್ನು ಶುಷ್ಕವಾಗಿ ಮಾಡುತ್ತದೆ' ಎಂದು ಹೇಳಿದ್ದರು. ಆ ಮಾತನ್ನು ರಘುನಾಥ್ ಅವರ ಬರವಣಿಗೆ ನೆನಪಿಸುವಂತಿದೆ. ಭಾರತದ ಮಟ್ಟಿಗೆ ಪತ್ರಿಕೋದ್ಯಮದಲ್ಲಿ ಎರಡು ದೊಡ್ಡ ಮನಸ್ಸುಗಳು ಈ ದೇಶವನ್ನು ಕಟ್ಟುವಲ್ಲಿ ಕೆಲಸ ಮಾಡಿವೆ. ಒಂದು ಗಾಂಧಿ. ಇನ್ನೊಂದು ಬಾಬಾ ಸಾಹೇಬ್ ಅಂಬೇಡ್ಕರ್, ಈ ಎರಡೂ ಮನಸುಗಳ ಕನಸುಗಳ ನೆರಳು ರಘುನಾಥರ ಮನಸ್ಸಿನಲ್ಲಿ ಹಾಯ್ದುಹೋಗಿದೆ ಎಂಬುದನ್ನು ಇಲ್ಲಿನ ಲೇಖನಗಳು ಸಾಕ್ಷೀಕರಿಸುತ್ತವೆ. ಇಳಿಸಲಾಗದ ಶಿಲುಬೆ' ಕೃತಿಯ ಶೀರ್ಷಿಕೆಯೇ ಜಗದ ದುಃಖಗಳನ್ನು ಅರಿಯುವ ಮಾತನ್ನು ಹೇಳುತ್ತಿದೆ. ಈ ಹೊತ್ತಿನ ಮತ್ತು ಯಾವತ್ತಿನ ಈ ದೇಶದಲ್ಲಿ ಜಾತಿ, ಧರ್ಮ, ಕೋಮುವಾದ ಮತ್ತೆ ಮತ್ತೆ ಪೂತ್ಕರಿಸುತ್ತಲೇ ಇವೆ. ಇವುಗಳನ್ನು ಬೇರುಸಹಿತ ಕೀಳಲು ಸಾಧ್ಯವಿಲ್ಲ. ಆದರೆ. ಕೊನೆ ಪಕ್ಷ ಹದಮಾಡಲು ಪ್ರಯತ್ನಿಸಬಹುದು. ಹಾಗೆ ಹದ ಮಾಡುವ ಕೆಲಸವನ್ನು ರಘುನಾಥ್ ಬರೆಯುವ ಮೂಲಕ ಮಾಡುತ್ತಿದ್ದಾರೆ. ಕೆಲವು ಲೇಖನಗಳಲ್ಲಿ ಕೆಲವು ವಿಷಯಗಳ ಬಗ್ಗೆ ಕಠಿಣ ಶಬ್ದಗಳಲ್ಲಿ ಹೇಳಿದ್ದಾರಾದರೂ, ಯಾರ ವಿರುದ್ದ ಹೇಳಿದ್ದಾರೋ ಅವರು ಅದನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಅವರ ಬರವಣಿಗೆಯಿದೆ. ಅಕ್ಷರಗಳನ್ನು ವಾಕ್ಯ ಮಾಡುವಾಗ ತುಂಬ ಸೂಕ್ಷ್ಮವಾಗಿ ಬರೆಯುತ್ತಾ, ಆ ವಾಕ್ಯ ಮಲಿನವಾಗದಂತೆ ಎಚ್ಚರವಹಿಸುವುದು ರಘುನಾಥ್

₹250   ₹223

ಊರೆಂಬೋ ಊರಲಿ | Oorembo Oorali

ಊರ ಉಸಾಬರಿ ಮಾತು-ರತಿ ಊರೆಂದೋ ಊರು ನಾನು ನೆಲೆಯೂರಿದ ಊರುಗಳಲ್ಲ. ನನ್ನೊಳಗೆ ನೆಲೆಯೂರಿದ ಊರುಗಳಿವು. ನನ್ನೂರು ಯಾವುದು ಅಂತ ಕೇಳಿದರೆ ನನಗೆ ಈಗಲೂ ಸ್ಪಷ್ಟವಾಗಿ ಹೇಳಲಾಗುವುದೇ ಇಲ್ಲ. ಕೆಲವು ನನ್ನನ್ನ ತಮ್ಮವಳು ಅಂತ ಅಕ್ಕೊಂಡವು. ಇನ್ನೂ ಕೆಲವು ನನ್ನೂರಾಗಬಹುದಾಗಿದ್ದವು. ನನ್ನನ್ನು ಪರಕೀಯಳಂತೆಯೇ ಕಂಡವು. ಬೀದರಿನಲ್ಲಿ ಹುಟ್ಟಿ ಬೆಳೆದರೂ ಎಲ್ಲಿಯೂ ಬೇರೂರಿಲ್ಲ, ಬಳ್ಳಿಯಂತೆ ಹಬ್ಬುತ್ತ. ಹಬ್ಬಿದೆಡೆಯೆಲ್ಲ ಕಳ್ಳುಬಳ್ಳಿಯೊಂದಿಗೆ ಅಂಟಿಕೊಳ್ಳುತ್ತ ಬದುಕಿರುವೆ. ಕಣಕಣದಲ್ಲಿರುವ ಕಾಶಿಗೆ ಹೋದಾಗಲೇ ಅರಿವಾದುದು. ನನ್ನ ಅಣುಅಣುವಿನಲ್ಲಿಯೂ ಬೀದರ್ ತುಂಬಿಕೊಂಡಿದೆ ಅಂತ. ಅಣುವಿನಲ್ಲಿಯೂ, ಕಣದಲ್ಲಿಯೂ ಒಂದಿನಿತು ಪ್ರೀತಿಗಾಗಿ ತಹತಹ ಇದ್ದದ್ದೇ. ಸಿಗದ ಪ್ರೀತಿಯ ಬೆನ್ನಟ್ಟಿದಾಗ, ಕಳೆದುಕೊಂಡ ಸುರಕ್ಷೆಯ ಭಾವವನ್ನು ನೀಡಿದ್ದು ಈ ಬರಹಗಳು. ಹೀಗೆ ಒಟ್ಟುಗೂಡಿ, ಊರ ಉಸಾಬರಿಯ ನೆಪದಲ್ಲಿ ಪುಸ್ತಕರೂಪದಲ್ಲಿ ಬಂದಿದೆ.

₹150   ₹134

ಋತುಗಳ ಹೆಣಿಗೆ | Guthugala hanige

ಬನ್ನಂಜೆ ಗೋವಿಂದಾಚಾರ್ಯ

₹70   ₹62

ಎಂಟೆಬೆ | Entebe

nil

₹195   ₹174

ಕಜ್ಜಾಯ | Kajaya

#

₹175   ₹156

ಕಪಿಲೆ ಕಂಡ ಕತೆಗಳು | Kapile Kanda Kathegalu

ಅಕ್ಷರಸ್ಥರಲ್ಲದ ನಮ್ಮ ಹಳ್ಳಿಯ ಜನ, ಅದರಲ್ಲೂ ಹೆಣ್ಮಕ್ಕಳು ತಮ್ಮ ಬದುಕಿನ, ಕಷ್ಟಗಳ ಮಾತಾಡುವಾಗ "ಅಯ್ಯೋ ಕುಸ್ಮಾ, ನನ್ ಕತೆ ಬೆಳಗಾನ ಯೋಳುದ್ರೂ ಮುಗಿಯಲ್ಲ, ನೀ ಒಂದ್. ಬುಕ್ಕೇ ಬರ್ದ್‌ ಬುಡಬೋದು" ಅಂತಿರ್ತಾರೆ. ಅವರ ಪಾಲಿಗೆ ಕತೆಗಳೆಂದರೆ ಕಷ್ಟಗಳು. ಅಲ್ಲವೆನ್ನಲಾಗದು. ಅವರೊಳಗೆಲ್ಲಾ ಕತೆ ಇದೆ. ಕತೆ ಎಂಬುದು ಒಳಲೋಕ ಬಗೆದಾಗ ಕಾಣುವ ನೋಟ ಬದುಕು ಕೊಡುವ ಆಘಾತಗಳಿಂದ ಕಾಣುವ ಬೆಳಕನ್ನೂ, ಕಾಣೆಯನ್ನೂ ದೀಪವಾಗಿಸಿ ದಾಟಿಸಲು ಕಂಡುಕೊಂಡ ದಾರಿ. ಕತೆ, ನಮ್ಮನ್ನು ಈ ಜಗತ್ತಿನಲ್ಲಿರುತ್ತಲೇ, ಈ ಜಗತ್ತಿನಿಂದ ಕೆಲಹೊತ್ತಾದರೂ ಬೇರೆಡೆಗೆ ಒಯ್ಯುವ ಮಾಯಾಚಾಪೆ. ಒಂದು ದಿವೌಷಧ. ಕಲೆ ಮತ್ತು ಅಧ್ಯಾತ್ಮ ಎರಡೂ, ಮನುಷ್ಯರ ವೈಯಕ್ತಿಕ ಸಂಕಟಗಳನ್ನು ಲೋಕದ ಪ್ರಶ್ನೆಗಳಾಗಿಸುವ, ಉತ್ತರ ಹುಡುಕುವ, ಸಂಕಟಗಳನ್ನು ಸಾಂತ್ವನವಾಗಿಸುವ ಪ್ರಕ್ರಿಯೆಗಳು. ಅಂತಹ ಕತೆಗಳು ಎಲ್ಲರೊಳಗೂ ಇರುತ್ತವೆ. ಕೆಲವರು ಬರೆಯುತ್ತಾರಷ್ಟೇ!

₹150   ₹134