• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ
  • Call Us: +91 7022122121 / +91 8861212172
  • Free shipping above ₹499
back

Publishers

Categories

Sub Categories

Authors

Languages

Book Type

Clear All
Filter
ಪುಟ್ಕತೆ ಎಂಬ ದೊಡ್ಕತೆಗಳ ಸಂಕಲನ | Putkate emba Dodkategala sankalana

ಇದು ಪುಟ್ಕತೆಯ ಲೋಕ. ಪುಟಪುಟದಲ್ಲೂ ಪುಟ್ಟಪುಟ್ಟ ಕತೆಗಳು, ಬೃಹತ್ತಾದುದನ್ನೇ ಹೇಳುವ ಕತೆಗಳು. ಅವರ ಕತೆ, ಇವರ ಕತೆ, ನಿಜದ ಕತೆ, ಕಟ್ಟುಕತೆ... ಎಷ್ಟೆಲ್ಲಾ ಕತೆಗಳು. ನಿಮಗೆ ಗೊತ್ತೇ, ಇಲ್ಲಿ ನಿಮ್ಮ ಕತೆಯೂ ಇದೆ! ಓದ್ಯೋಡಿ.

₹120   ₹102

Buy Now
ಪ್ಯಾಲೆಟ್ | Pallette

ಇಲ್ಲೊಂದು ಹೊಸ ಲೋಕವಿದೆ.. ಓಹ್! ಒಂದು ಭಾವಸಮುದ್ರದಲ್ಲಿ ಮುಳುಗೇಳುವುದು ಅಂದರೆ ಏನು ಎನ್ನುವುದು ಗೊತ್ತಾಗಬೇಕಾದರೆ ಪಿ ಚಂದ್ರಿಕಾ ಅವರ ಈ 'ಪ್ಯಾಲೆಟ್' ಓದಬೇಕು. 'ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ' ಎಂದಾದಾಗ ಅವರು ಕಟ್ಟಿಕೊಡಲು ಹೊರಟಿದ್ದು ತನ್ನದೇ ಲೋಕವನ್ನು ಕಟ್ಟಿಕೊಟ್ಟ ಬರಹಗಳೆಲ್ಲವೂ ಅವರೇ ಬಣ್ಣಿಸಿಕೊಳ್ಳುವ ಹಾಗೆ ಅದು ತಾನು 'ಒಬ್ಬಳೆ ಆಡುವ ಆಟ'. ಚಂದ್ರಿಕಾ ಏನನ್ನೇ ಆದರೂ ತೀವ್ರವಾಗಿ ಅನುಭವಿಸುತ್ತಾರೆ. ಹಾಗಾಗಿಯೇ ಅವರ ಒಂದೊಂದು ಅನುಭವವೂ ಜೋಡಿ ರೆಕ್ಕೆ ಪಡೆದ ಬರಹಗಳಾಗಿಬಿಡುತ್ತದೆ. ಅವರ ಇನ್ನೊಂದು ಶಕ್ತಿ ಎಂದರೆ ಅವರು ತನ್ನ ಅನುಭವಕ್ಕೆ, ತನ್ನದೇ ಎನ್ನುವ ಅನುಭವಕ್ಕೆ ಅಕ್ಷರ ಮೂಡಿಸಲು ಇನ್ನೊಬ್ಬರ ಶಬ್ದಗಳ ಹಂಗಿಗೆ ಬೀಳುವುದೇ ಇಲ್ಲ, ತನ್ನದೇ ರೂಪಕಗಳನ್ನು ಕಟ್ಟಿಕೊಳ್ಳುತ್ತಾರೆ. ಅವರ ರೂಪಕಗಳು ಒಂದು ಸುಳಿಯಲ್ಲಿ ನಮ್ಮನ್ನು ಸಾಕಷ್ಟು ಕಾಲ ಸಿಕ್ಕಿಸಿ ತಿರುಗಿಸುತ್ತದೆ. ಈ 'ಪ್ಯಾಲೆಟ್' ನನ್ನನ್ನು ಹಲವು ಕಾಲ ತನ್ನ ತಿರುಗಣಿಯಲ್ಲಿ ಸಿಕ್ಕಿಸಿಕೊಂಡಿದೆ. ಶಾಶ್ವತ ಭಾವವೊಂದು ಎದೆಯಲ್ಲಿ ಮೊಳೆಯುವುದು ಅದೃಷ್ಟ ಎನ್ನುತ್ತಾರೆ ಚಂದ್ರಿಕಾ. 'ಪ್ಯಾಲೆಟ್' ಓದಿದಮೇಲೆ ಅಂತಹ 'ಅದೃಷ್ಟ' ನನ್ನದಾಗಿದೆ. ಇದನ್ನು ಓದಿದ ನಂತರ ನಿಮಗೂ ಆ ಅದೃಷ್ಟ ಒಲಿಯಲಿದೆ.

₹230   ₹184

Buy Now
ಪ್ರಿಯ ಮೀರಾ | PRIYA MEERA

"ನಮ್ಮ ಪ್ರೀತಿಪಾತ್ರರು ಸಾಧ್ಯವಾದಷ್ಟು ಕಾಲ ರಕ್ತಮಾಂಸದ ನಡುವೆ ಇರಲಿ ಎಂದು ಬಯಸುವುದೇ ನಿಜಕ್ಕೂ ಸ್ವಾರ್ಥ ಬಯಕೆ. ಇದು ನಮ್ಮ ದೌರ್ಬಲ್ಯದಿಂದ ಹುಟ್ಟಿಕೊಂಡಿದ್ದು ಅಥವಾ ಕಾಯವನ್ನು ತೊರೆದ ಬಳಿಕ ಅತ್ಯದ ಉಳಿವಿನ ಬಗ್ಗೆ ಇರುವ ನಂಬಿಕೆಯ ಫಲ. ಅಕಾರವು ಬದಲಾಗುತ್ತ ಬದಲಾಗುತ್ತ ಅಳಿದು ಹೋಗುತ್ತದೆ. ಆದರೆ ಮಾರ್ಗದರ್ಶಿಯಾದ ಚೈತನ್ಯವು ಬದಲಾಗುವುದೂ ಇಲ್ಲ, ಅಳಿದು ಹೋಗುವುದೂ ಇಲ್ಲ. ಪರಿಶುದ್ಧವಾದ ಪ್ರೀತಿಯು ಭೌತಿಕವಾದ ಕಾಯವನ್ನು ಮೀರಿ ಅಂತರಾತ್ಮವನ್ನು ಸೇರಿಕೊಂಡಾಗ ಅಗಣಿತ ಕಾಯಗಳಲ್ಲಿ ಇರುವ ಎಲ್ಲ ಜೀವಗಳಲ್ಲಿ ಏಕೀಭವಿಸುತ್ತದೆ..."

₹425   ₹362

Buy Now
ಪ್ರೀತಿಯೆನುವ ಮಾಯೆ | Preetiyenuva Maaye

ಕಾವ್ಯದಂತೆ, ಸಣ್ಣಕಥೆಯಲ್ಲೂ ಲಕ್ಷಣರಾವ್ ಸದ್ಯ ಬಂಡಾಯಗಳ ಹಣೆಪಟ್ಟಿಗೆ ದಕ್ಕುವವರಲ್ಲ, ನವ್ಯದ ಅಂತರ್ಮುಖಿಕೆ, ಅಂತಃಪ್ರಶ್ನೆ, ಪ್ರಜ್ಞಾಪ್ರವಾಹತಂತ್ರ ಇದೇ ಮೊದಲಾದವು ಇವರ ಕಥೆಗಳಲ್ಲಿ ಕಾಣುವುದಿಲ್ಲ ಸಾಮಾಜಿಕ ಕಳಕಳಿಗಿಂತ ಭಿನ್ನ, ಅಂದರೆ ಸಾಮಾಜಿಕ ಸಮಸ್ಯೆಗಳಿಂದ ವಿಮುಖರು ಎಂದಲ್ಲ, ಸಾಮಾಜಿಕ ಸಮಸ್ಯೆಗಳು, ಕ್ರೂರ ವ್ಯವಸ್ಥೆ ಇವುಗಳ ಒತ್ತಡದಲ್ಲಿ, ದಮನಕಾರಿ ನಿಲುವುಗಳಲ್ಲಿ ಮನುಷ್ಯ ಸಂಬಂಧಗಳು, ಪ್ರೀತಿ ವಿಶ್ವಾಸಗಳು ಹೇಗೆ ನಲುಗಿಹೋಗುತ್ತಿವೆ ಎಂಬುದು ಲಕ್ಷಣರಾವ್ ಅವರ ಸೃಜನಶೀಲ ಮನಸ್ಸಿನ ಮುಖ್ಯ ಕಾಳಜಿಯಾಗಿದೆ. ಪ್ರೀತಿ, ಗಂಡು-ಹೆಣ್ಣಿನ ಪ್ರೀತಿ, ಜೀವನಪ್ರೀತಿ - ಇವು ವ್ಯವಸ್ಥೆಯ ಕ್ರೂರ ಹಿಡಿತದಲ್ಲಿ ನಲುಗಬಾರದು. ನಿಷೇಧ ಮೊದಲಾದ ನಕಾರಾತ್ಮಕ ಪ್ರವೃತ್ತಿಗಳಲ್ಲಿ ಪ್ರೀತಿ ಮುರುಟಿಹೋಗಬಾರದು ಎಂಬ ಆರೋಗ್ಯಕರ ಜೀವನದೃಷ್ಟಿ ಲಕ್ಷಣರಾವ್ ಅವರ ಕಥೆಗಳ ಹಿಂದಿನ ಮುಖ್ಯ ಮಾನವೀಯ ದನಿಯಾಗಿದೆ. ಲಕ್ಷಣರೊಳಗಿನ ಕವಿಯ ಆರೋಗ್ಯಕರ ಜೀವನದೃಷ್ಟಿ, ಸ್ಪಷ್ಟ ವಿಚಾರಗಳ ಜೊತೆಗೆ ಅವರ ಗದ್ಯವು ವಾಚ್ಯವಾಗದೆ ಧ್ವನಿಪೂರ್ಣವಾಗಿ ಕಾವ್ಯಕ್ಕೆ ಹತ್ತಿರವಾಗುತ್ತದೆ. ಜಿ.ಎಸ್.ಆಮೂರರು ಹೇಳಿರುವಂತೆ ಪ್ರಾಮಾಣಿಕತೆ, ತೀವ್ರತೆ ಮತ್ತು ಹೊಸದೃಷ್ಟಿ ಲಕ್ಷಣರಾವ್ ಅವರ ಕಾವ್ಯದ ಮುಖ್ಯ ಗುಣಗಳಾಗಿರುವಂತೆ ಕಥೆಗಳ ಮುಖ್ಯ ಗುಣವೂ ಆಗಿದೆ: ಶಕ್ತಿಯೂ ಆಗಿದೆ.

₹320   ₹272

Buy Now
ಪ್ರೀತ್ಸು | Preethsu

ಇದು ಕಡಲ ತೀರದ ಹುಡುಗ ಮತ್ತು ಬಯಲು ಸೀಮೆಯ ಹುಡುಗಿಯರ ನಡುವಿನ ಒಂದು ನವಿರಾದ ಪ್ರೇಮ ಕಥೆ. ಹದಿಹರೆಯವನ್ನು ಆಗಷ್ಟೇ ದಾಟಿರುವ ಆದರೆ ಬದುಕಿನ ಬಗ್ಗೆ ಇನ್ನೂ ಪ್ರೌಢರಾಗಬೇಕಾದ ಯುವ ಮನಸುಗಳ ಪ್ರೇಮಕಥೆ.

₹170   ₹145

Buy Now
ಫಾರೆಸ್ಟರ್ ಪೊನ್ನಪ್ಪ | Forester Ponnappa

ಕೊಡಗಿನ ಆಂತರ್ಯದಲ್ಲಿ ಹುದುಗಿದ್ದ ಅರಣ್ಯಾಧಿಕಾರಿಯೊಬ್ಬರ ಜೀವನಗಾಥೆ. ಮಲೆನಾಡಿನ ಬದಲಾದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

₹300   ₹255

Buy Now
ಫೀನಿಕ್ಸ್ | Phoenix

ಫೀನಿಕ್ಸ್ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವ ಕಾಲ್ಡನಿಕವೂ ಪೌರಾಣಿಕವೂ ಆದ ಪಕ್ಷಿಯಿದೆಯಲ್ಲಾ ಅದರ ನಿಜ ಸ್ವರೂಪದ ಭಾವವನ್ನು ಜಂಚಿಸುವ ಸಾಮರ್ಥ್ಯವಿರುವ ಪುಸ್ತಕವಿದು. ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದರೂ ತನ್ನ ಬೂದಿಯಿಂದಲೇ ಮರಳಿ ಚೈತನ್ಯವನ್ನು ಪಡೆದು ಉಲ್ಲಾಸದಿಂದ ಬದುಕುವ ಪಕ್ಷಿಯು ಇಲ್ಲಿನ ಅನೇಕ ಪಾತ್ರಗಳನ್ನು, ಅವರ ಬದುಕನ್ನೂ ಪ್ರತಿಜಂಚಿಸುತ್ತದೆ.

₹120   ₹96

Buy Now
ಬದುಕು ಬದಲಾಯಿತು | Baduku Badalaayitu

ಬಡತನವನ್ನು ಎದುರಿಸಿ ಗೆದ್ದ ಸಾಧಕರಿಗೆ ನನ್ನ ನಲ್ಮೆಯ ಮಾತು. ಸಾಧಕರ ಜೀವನ ಚರಿತ್ರೆಯನ್ನು ಓದಿದ ಹಲವರಿಗೆ, ಈ ಸಾಧಕರು ಸ್ಫೂರ್ತಿಯಾಗುತ್ತಾರೆ. ಆದರ್ಶದ ಜ್ಯೋತಿ ಆಗುತ್ತಾರೆ, ಜ್ಯೋತಿಯ ಬೆಳಕಿನಲ್ಲಿ ಕಾಣುವ ಮಾರ್ಗದಲ್ಲಿ ತಾವೂ ನಡೆಯಲು ಪ್ರಯತ್ನಿಸುತ್ತಾರೆ. ಬಡತನ ಸಂಕಷ್ಟಗಳು ಭಗವಂತನ ಶಾಲೆಯಲ್ಲಿ ಅವನಿಟ್ಟ ಒಂದು ಪರೀಕ್ಷೆ ಅದರಲ್ಲಿ ಪೂರ್ತಿ ಅಂಕಗಳೊಂದಿಗೆ ತೇರ್ಗಡೆಯಾದ ಸಾಧಕರ ಹೆಸರು ಅಜರಾಮರವಾಗಿ ನಿಲ್ಲುತ್ತದೆ. 84 ಲಕ್ಷ ಜನ್ಮಗಳನ್ನು ದಾಟಿ ಶ್ರೇಷ್ಠವಾದ ಮಾನವ ಜನ್ಮಕ್ಕೆ ಕಾಲಿರಿಸಿದ ನಮಗೆ ಬಡತನ, ಕಷ್ಟಗಳನ್ನು ಒಂದು ವರವಾಗಿ ಕೊಟ್ಟಿದ್ದಾನೆ ಭಗವಂತ. ಬಡತನ, ಸಂಕಷ್ಟಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡ ನಮಗೆ ಪ್ರಪಂಚದ ನಾನಾ ವಿಚಾರಗಳು ಅರ್ಥವಾಗುತ್ತವೆ ನಾನಾ ಮನುಷ್ಯರ ಪರಿಚಯ ಆಗುತ್ತದೆ. ತಾಯಿ-ತಂದೆ ಬಂಧು ಬಳಗ, ಯಾರನ್ನು ನಂಬಬೇಕು ಬಿಡಬೇಕು, ಸ್ನೇಹಿತರು, ಮಕ್ಕಳು, ಗಂಡ ಹೆಂಡತಿ, ಎನ್ನುವ ಪಾತ್ರಗಳ ಪರಿಚಯವಾಗುತ್ತದೆ. ಇವೆಲ್ಲದರ ಮಧ್ಯೆ ನಮ್ಮ ಸಾಧನೆಯ ಬದುಕು ಸ್ವಾಭಿಮಾನದಿಂದ ನಿಸ್ವಾರ್ಥತೆಯಿಂದ ಪುಟಕ್ಕಿಟ್ಟ ಚಿನ್ನವಾಗುತ್ತದೆ. ನಾವು ಬಡವರು, ಕಷ್ಟಜೀವಿಗಳು ಎಂಬ ಭಾವನೆ ಸಲ್ಲದು. ಭಗವಂತನ ಪರೀಕ್ಷೆಗೆ ಒಳಪಟ್ಟಿರುವ ನಾವು ನಿಜಕ್ಕೂ ಧನ್ಯರು, ಮಾನ್ಯರು. ಈ ದಿಸೆಯಲ್ಲಿ ಇಂತಹ ಹಲವು ಸಾಧಕರನ್ನು ಪರಿಚಯಿಸುವ ಸ್ತುತ್ಯ ಕಾರ್ಯ ಮಾಡಿರುವ ಲೇಖಕರಾದ ಡಾ.ಶ್ರೀನಿವಾಸ ಪ್ರಸಾದ್ ಅವರಿಗೂ, ಈ ಕೃತಿಯನ್ನು ಪ್ರಕಟಿಸುತ್ತಿರುವ ವೀರಲೋಕ ಪ್ರಕಾಶನ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರಿಗೂ ಶುಭಾಶಯ.

₹300   ₹255

Buy Now
ಬದುಕೇ ಭಗವಂತ | Baduke Bhagavanta

ಬದುಕೇ ಭಗವಂತಡಾ. ಶ್ರೀನಿವಾಸ ಪ್ರಸಾದ್ ಅವರು ಈ ವಿಶಿಷ್ಟ ಪುಸ್ತಕದಲ್ಲಿ ಜೀವನದ ಒಳ್ಳೆಯತನಗಳನ್ನು ಪರಿಚಯಿಸುವಾಗ ಅನೇಕ ಲೇಖಕರ ಮತ್ತು ಕವಿಗಳ ಕೃತಿಗಳನ್ನು ಕೂಡ ಪರಿಚಯಿಸುತ್ತಾರೆ.

₹170   ₹145

Buy Now
ಬಹುತ್ವ ಭಾರತ ಕಟ್ಟಿದವರು | Bahutva Bharata Kattidavaru

ಕೊರತೆ ನೀಗಿಸಿದ ಕೃತಿ.. ಭಾರತವು ವಿಶ್ವಗುರುವಾಗಿ ಬಿಂಬಿತಗೊಳ್ಳುತ್ತಿರುವ ಇಂದಿನ ಜಾಗತಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ, ನನ್ನನ್ನು ಒಂದು ಸಂಶಯ ಕಾಡತೊಡಗಿತ್ತು. ಇಪ್ಪತ್ತೊಂದನೇ ಶತಮಾನ ಪ್ರಾರಂಭವಾದ ಮೇಲೆ ಜನಿಸಿದ ಮಕ್ಕಳನ್ನು ಮತ್ತು ಎಳೆವಯಸ್ಕರನ್ನು ಈ ಬೆಳವಣಿಗೆಯ ಔಚಿತ್ಯ ಹಾಗೂ ಸೂಚ್ಯಾರ್ಥ ಮತ್ತು, ಆ ಅರ್ಹತೆ ಗಳಿಸಲು ಅಳತೆಗೋಲು ಏನಿರಬಹುದು ಎಂಬ ಬಗ್ಗೆ ಪ್ರಶ್ನಿಸಿದರೆ ಅವರಲ್ಲಿ ಸೂಕ್ತ ಉತ್ತರ ಇದ್ದೀತೆ ಎಂಬ ಸಂಶಯ. ಆ ಸಂಶಯದ ಬೆನ್ನಲ್ಲಿಯೇ ಕಂಡ ಒಂದು ಕೊರತೆ ಎಂದರೆ ನಮ್ಮ ಮಕ್ಕಳಲ್ಲಿ ಈ ವಿಚಾರಗಳ ಬಗ್ಗೆ ತಿಳಿಹೇಳುವ, ನಮ್ಮ ದೇಶದ ಹಲವು ಬೋಧಕರ, ಧಾರ್ಮಿಕ ಮತ್ತು ಆಧ್ಯಾತ್ಮ ಪ್ರವರ್ತಕರ ಮುಖ್ಯ ಬೋಧನೆಗಳನ್ನು, ಅವರ ವೈಚಾರಿಕತೆಯ ವ್ಯಾಪ್ತಿಯನ್ನು, ಸರಳಭಾಷೆಯಲ್ಲಿ ಒಂದೆಡೆ ಕಟ್ಟಿಕೊಡುವ ಪ್ರಕಟಣೆಗಳ ಅಭಾವ. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಪ್ರಭು ಅವರು 'ಬಹುತ್ವ ಭಾರತ ಕಟ್ಟಿದವರು' ಪುಸ್ತಕದ ಕರಡು ಪ್ರತಿಯನ್ನು ಕಳುಹಿಸಿಕೊಟ್ಟಾಗ, ಅಲ್ಲಿನ ಹನ್ನೊಂದೂ ಜೀವನ್ಮುಕ್ತರ ಬಗ್ಗೆ ಓದುತ್ತಿದ್ದಂತೆ, ಒಂದು ತೃಪ್ತಬಾವ ಮೂಡತೊಡಗಿತ್ತು. ನನ್ನಲ್ಲಿ ಮೂಡಿದ್ದ ಕೊರತೆಯ ಭಾವವನ್ನು ನೀಗಿಸಿದ್ದಾರೆ ಎನಿಸಿತ್ತು. ವಾಲ್ಮೀಕಿ, ಬುದ್ದ ಮೊದಲಾಗಿ, ಬಸವಣ್ಣ, ಅಲ್ಲಮ, ಅಕ್ಕಮ್ಮನವರ ಮೂಲಕ ಹಾದು, ಸರ್ವಜ್ಞ, ಶಾರಾದಾದೇವಿ, ವಿವೇಕಾನಂದ.. ಕೊನೆಗೆ ಜಿಡ್ಡು, ನಾರಾಯಣ ಗುರು ಮತ್ತು ದಲೈ ಲಾಮವರೆಗೆ, ಭಾರತದ ಹನ್ನೊಂದು ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಜೀವನವನ್ನು ಸಂಕ್ಷಿಪ್ತವಾಗಿಯೂ, ಸರಳವಾಗಿಯೂ, ಕಥಾನಕದಂತೆ ರಚಿಸಿರುವುದು ವಿಶೇಷವಾದ ನೆಮ್ಮದಿ ತಂದಿದೆ. ಎಲ್ಲರ ಮನೆಯ ಗ್ರಂಥಭಂಡಾರದಲ್ಲೂ ಎಲ್ಲರ ಕೈಗೂ ಸದಾ ಎಟುಕುವಂತೆ ಇರಬೇಕಾದ ಕೃತಿ ಇದು. - ಕೆ ಎನ್ ಗಣೇಶಯ್ಯ

₹350   ₹298

Buy Now
ಬಿಂಬ ಬಿಂಬನ | Bimba Bimbana

ಸಿನಿಮಾ ಮತ್ತು ಸಾಹಿತ್ಯ ಎರಡರಲ್ಲೂ ಪ್ರತಿಮಾ ವಿಧಾನ ಭಿನ್ನ, ಸಂಜ್ಞಾ ಕ್ರಮವೂ ಭಿನ್ನ. ಸಾಹಿತ್ಯದ ಮೂಲಧಾತುವಾದ ಶಬ್ದವು ಅಮೂರ್ತವಾಗಿರುತ್ತದೆ. ಈ ಅಮೂರ್ತ ಧಾತುವನ್ನು ಇಟ್ಟುಕೊಂಡು ಸಾಹಿತಿ ಮೂರ್ತ ಬಿಂಬವನ್ನು ಕಟ್ಟುತ್ತಿರುತ್ತಾನೆ. ಸಿನಿಮಾದಲ್ಲಿ ಮೂಲಧಾತುವಾದ ಬಿಂಬವೇ ಮೂರ್ತ. ನಿರ್ದೇಶಕ ಅದರ ನೆರವಿನಿಂದ ಕೃತಿ ಕಟ್ಟುತ್ತಿರುವಾಗ ಮೂರ್ತವನ್ನು ಮೀರಿ ಅಮೂರ್ತವನ್ನು ತರಬಲ್ಲ ಬಿಂಬದ ಹುಡುಕಾಟದಲ್ಲಿರುತ್ತಾನೆ. ಅಂದರೆ ಅಮೂರ್ತದಿಂದ ಮೂರ್ತ ಬಿಂಬ ಕಟ್ಟುವ ಸಾಹಿತಿಯ ನುಡಿಗಟ್ಟು ಮೂರ್ತದಿಂದ ಅಮೂರ್ತಕ್ಕೆ ಜಿಗಿಯಬಲ್ಲ ಬಿಂಬಕ್ಕೆ ಹುಡುಕುವ ಸಿನಿಮಾ ನಿರ್ದೇಶಕನಿಗೆ ಊರುಗೋಲಾಗಲಾರದು. 2000ದ ಸುಮಾರಿಗೆ ಸಿನಿಮಾ ವ್ಯಾಖ್ಯಾನದಲ್ಲಿ ಬಹಳ ಬದಲಾವಣೆ ಆಗಿತ್ತು. ಸಿನಿಮಾ ವಿಶ್ಲೇಷಣೆಯಲ್ಲಿ 'ಬಿಂಬ'ದ ಜೊತೆಗೆ 'ಬಿಂಬನ'ವನ್ನೂ ಒಂದು ಮೌಲ್ಯವಾಗಿ ಪರಿಗಣಿಸತೊಡಗಿದರು. ತೆರೆಯ ಮೇಲೆ ಕಾಣುವುದು ಬಿಂಬಗಳಾದರೆ ಅವನ್ನು ಸೃಷ್ಟಿ ಮಾಡಲು ಆಯ್ದುಕೊಳ್ಳುವ ತಾಂತ್ರಿಕ ಅಂಶಗಳು ಬಿಂಬನವನ್ನು ಸೂಚಿಸುತ್ತವೆ. ಸಿನಿಮಾದ ಬಿಂಬಗಳು ಅಲಿಪ್ತವಲ್ಲ, ಅವು ಯಂತ್ರಜನ್ಯವಾದರೂ ಅವನ್ನು ಸೃಷ್ಟಿ ಮಾಡುತ್ತಿರುವವರ ಇಷ್ಟಾನಿಷ್ಟಗಳು ಬಿಂಬಗಳಲ್ಲಿ ಹಾಗೂ ಬಿಂಬನ ಕ್ರಮದಲ್ಲಿ ವ್ಯಕ್ತವಾಗುತ್ತಾ ಇರುತ್ತವೆ. ಟೆಕ್ನಾಲಜಿಯ ಬಗ್ಗೆ ಮನುಷ್ಯನಿಗೆ ಯಾವಾಗಲೂ ಸೆಳೆತ, ಕುತೂಹಲ ಮತ್ತು ಭಯ ಇದ್ದೇ ಇರುತ್ತದೆ. ಸೆಳೆತಕ್ಕೆ ಕಾರಣ ಅದು ತನ್ನ ಬದುಕನ್ನು ಇನ್ನಷ್ಟು ಸುಂದರಮಾಡುತ್ತದೆ ಎನ್ನುವ ಭ್ರಮೆ, ತನಗೆ ಅಸಾಧ್ಯ, ನಿಗೂಢ ಎನಿಸಿದ್ದನ್ನು ಅದು ಸಾಧ್ಯ ಮಾಡಿಕೊಡುತ್ತಾದ್ದರಿಂದ ಕುತೂಹಲ, ಅದರ ಸ್ವರೂಪ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲವಾದ್ದರಿಂದ ಭಯ-ಈ ಮೂರು ಭಾವನೆಗಳು ಬೇರೆ ಬೇರೆಯಾಗಿ ಅಥವಾ ಒಟ್ಟಾಗಿಯೇ ಕೂಡಿ ಅನಿರ್ವಚನೀಯ ಅನುಭವವೊಂದನ್ನು ನೀಡುತ್ತಿರುತ್ತದೆ.

₹385   ₹327

Buy Now
ಬೆಳವಡಿ ಮಲ್ಲಮ್ಮ | Belavadi Mallamma

ಭಾರತ ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಅದು ರಕ್ತಸಿಕ್ತ ಅಧ್ಯಾಯವೂ ಆಗಿತ್ತು. ತ್ಯಾಗ ಬಲಿದಾನಗಳ ಚಳವಳಿಯೂ ಆಗಿತ್ತು. ಅದು ಪುರುಷ, ಮಹಿಳೆ ಎಂಬ ತಾರತಮ್ಯಗಳಿಲ್ಲದ ಒಂದು ಸಮಗ್ರ ಹೋರಾಟವಾಗಿತ್ತು. ಆದರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರಿಗೆ ಹೋಲಿಸದರೆ, ಮಹಿಳೆಯರು ವಹಿಸಿದ ಪಾತ್ರವು ಇತಿಹಾಸದ ಪುಟಗಳಲ್ಲಿ ಮಬ್ಬು ಮಬ್ಬಾಗಿ ದಾಖಲಾಗಿದೆ. ಆ ಹಿನ್ನಲೆಯಲ್ಲಿ ನೋಡಿದಾಗ ಬೆಳವಡಿ ಮಲ್ಲಮ್ಮ ಕೃತಿಯ ಮಹತ್ವ ನಮಗೆ ಅರಿವಾಗುತ್ತದೆ. ಬೆಳವಡಿ ಮಲ್ಲಮ್ಮ ಯುದ್ಧವ್ಯೂಹಗಳಿಗೆ, ಗಾಳಿವೇಗದ ಪ್ರಹಾರಗಳಿಗೆ, ಸ್ವಾಭಿಮಾನ, ಧೈರ್ಯ ಸಾಹಸಗಳಿಗೆ ಹೆಸರಾದವರು.

₹200   ₹170

Buy Now
ಬೆಳ್ಳಿತೆರೆಯ ಬಂಗಾರದ ಗೆರೆ | Bellitereya Bangarada Gere

ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರತಿವಾರ ಕಲಾವಿದರ ಕುರಿತು ಬರೆದ ‘ಬೆಳ್ಳಿತೆರೆಯ ಬಂಗಾರದ ಗೆರೆ’ ಅಂಕಣ ಬರಹ ಈಗ ಪುಸ್ತಕವಾಗಿದೆ.

₹150   ₹128

Buy Now
ಬೇವಾಚ್ | Bevach

“ಬೇವಾಚ್” ಕತ್ತಲಾಗುತ್ತಿದ್ದಂತೆ ಎಚ್ಚರವಾಗುವ ಲೈವ್ ಬ್ಯಾಂಡಿನ ಝಗಮಗಿಸುವ ಬೆಳಕಿನಡಿಯಲ್ಲಿ, ಕಿವಿಗಡಚಿಕ್ಕುವ ಅಬ್ಬರದ ಹಾಡಿಗೆ ಅರೆಬರೆ ಬಟ್ಟೆತೊಟ್ಟು ಮೈ ಬಳಕಿಸುತ್ತಾ, ಗ್ರಾಹಕರನ್ನು ಕಣ್ಣಲ್ಲೇ ಸೆಳೆಯುವ ಯುವತಿಯೊಬ್ಬಳ ಸುತ್ತ ಹೆಣೆದ ಕಾದಂಬರಿ ಪರಿಸ್ಥಿತಿ ಮತ್ತು ಜವಾಬ್ದಾರಿ ಒಬ್ಬ ಮುಗ್ಧ ಹೆಣ್ಣನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ; ಮುಂದೆ, ಬದಲಾಗುವ ಅವಕಾಶ ಇದ್ದರೂ ಹಣದಾಸೆಗೆ ಬಿದ್ದ ಅವಳು ಯಾವ್ಯಾವ ಕುಕೃತ್ಯದಲ್ಲಿ ತೊಡಗಿಕೊಳ್ಳುತ್ತಾಳೆ ಎಂಬುದರ ಜೊತೆಗೆ ಬಡತನ, ಮೋಸ, ವ್ಯಭಿಚಾರ, ಗಂಡು ಮಗುವಿನ ವ್ಯಾಮೋಹ, ಪೊಲೀಸರ ಕ್ರೌರ್ಯ, ಕ್ರೈಂ ಮಿಗಿಲಾಗಿ ಬೆಲೆವೆಣ್ಣುಗಳ ಸಹವಾಸ ಮಾಡುವುದರಿಂದಾಗುವ ಪರಿಣಾಮವನ್ನು ಕಾದಂಬರಿಯಲ್ಲಿ ಕಾಣಬಹುದಾಗಿದೆ.

₹225   ₹191

Buy Now
ಭಾನುಮತಿಯ ಪರಿವಾರ | Bhanumatiya Parivara

” ಭಾನುಮತಿಯ ಪರಿವಾರ” ಎಂಬುದು ಹಿಂದಿ ನಾಣ್ಣುಡಿ “ಭಾನುಮತೀ ಕಾ ಕುನ್ ಬಾ”ದ ಕನ್ನಡ ಅನುವಾದ.

₹140   ₹119

Buy Now
ಮಂಡ್ಯ ರಮೇಶ್ ನಟನ ಕಥೆ | Mandya Ramesh Natana Kathe

ನಟನ ಕಥೆ. ಮಂಡ್ಯ ರಮೇಶ್ ಕಟ್ಟಿದ ನಾಟಕ ಕೂಟದ ಸಾಹಸಗಾಥೆ. ಭೂಮಿ ಪಡೆಯುವುದರಿಂದ ಕಟ್ಟಡ ಕಟ್ಟುವವರೆಗಿನ ಬವಣೆಗಳು ಮನಸ್ಸನ್ನು ತಟ್ಟುತ್ತವೆ.

₹250   ₹213

Buy Now
ಮನಿ ಮನಿ ಎಕಾನಮಿ | Money Money Economy

ವಿತ್ತ ಜಗತ್ತಿನ ಬರಹಗಾರರಾಗಿ ಖ್ಯಾತರಾಗಿರುವ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದಿರುವ ಪುಸ್ತಕವೇ ‘ಮನಿ ಮನಿ ಎಕಾನಮಿ. ’ ಇದು ಬ್ಯಾಂಕಿಂಗ್, ಹಣಕಾಸು ಕ್ಷೇತ್ರ ಕುರಿತ ಮಾಹಿತಿಪೂರ್ಣ ಪುಸ್ತಕವಾಗಿದೆ. ವಿತ್ತ ಜತ್ತಿನ ಆಗುಹೋಗುಗಳನ್ನು ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ತಿಳಿದುಕೊಳ್ಳುವ ಅಗತ್ಯವಿದೆ. ಸಾಮಾನ್ಯ ಪ್ರಜೆಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಲೇಖಕರು ಹಲವು ಉಪಯುಕ್ತ ಮಾಹಿತಿಯ ಲೇಖನಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಸಾಮಾನ್ಯ ಪ್ರಜೆಗಳಿಗೂ ಉಪಯುಕ್ತ ಪುಸ್ತಕ ಇದಾಗಿದೆ.

₹175   ₹149

Buy Now
ಮನೆ ಇ೦ಜಿನಿಯರ್ | mane Engineer

ಮನೆ ಇಂಜಿನಿಯರ್" ಶೀರ್ಷಿಕೆ ಹೊತ್ತ ಈ ಪುಸ್ತಕದಲ್ಲಿ ನಿವೇಶನದಿಂದ ಮೊದಲಾಗಿ ಮನೆಯನ್ನು ಕಟ್ಟಲು ಅಗತ್ಯವಿರುವ ಎಲ್ಲ ತರಹದ ಉಪಯುಕ್ತ ಮಾಹಿತಿಗಳನ್ನು ಅಚ್ಚುಕಟ್ಟಾಗಿ, ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಕನ್ನಡ ಭಾಷೆಯಲ್ಲಿ ರಾಮ್‌ಕದಮ್‌ರವರು ಬರೆದಿದ್ದಾರೆ. ನನ್ನ ಬಹುಕಾಲದ ಪರಿಚಿತರಾದ ಇವರು ಕನ್ನಡ ಸಾರಸ್ವತ ಲೋಕಕ್ಕೆ ಒಂದು ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಕೆಲವು ವಿಷಯಗಳು ಸಂಕ್ಷಿಪ್ತವಾಗಿವೆಯಾದರೂ ಅಗತ್ಯವಿರುವಷ್ಟು ವಿವರಣೆಯನ್ನು ಒಳಗೊಳ್ಳುವ ಮೂಲಕ 'ಮನೆ ಇಂಜಿನಿಯರ್' ಪರಿಪೂರ್ಣತೆಯನ್ನು ಪಡೆದು ಕೊಳ್ಳುವುದರಲ್ಲಿ ಸಫಲವಾಗಿದೆ. ವಿಶ್ವದ ಕೆಲವು ದೇಶಗಳಲ್ಲಿ ಬಳಕೆಯಲ್ಲಿರುವ ಆಯ್ದ ಮನೆಗಳ ಮಾದರಿ ನಕಾಶೆಗಳೂ ಇದರಲ್ಲಿವೆ. ವಾಸ್ತುಶಾಸ್ತ್ರದ ಗೊಂದಲಗಳಿಗೆ ಆಧಾರಸಹಿತವಾದ ಸ್ಪಷ್ಟ ವಿವರಣೆಯಿದೆ. ವಿದ್ಯುತ್, ಪ್ಲಂಬಿಂಗ್, ಒಳಾಂಗಣ ವಿನ್ಯಾಸ, ತಾಂತ್ರಿಕ ಸಲಹೆ ಹೀಗೆ ಅನೇಕ ಅಂಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಒಟ್ಟಿನಲ್ಲಿ ಮನೆಯನ್ನು ಕಟ್ಟುವವರಿಗೆ ಅಗತ್ಯವಾಗಬಹುದಾದ ಎಲ್ಲ ಮಾಹಿತಿಗಳು ಇಲ್ಲಿ ಸಮಗ್ರವಾಗಿ ಒಂದೇ ಪುಸ್ತಕದಲ್ಲಿ ಲಭ್ಯವಿದೆ. 'ಮನೆ ಕಟ್ಟಿನೋಡು, ಮದುವೆ ಮಾಡಿನೋಡು' ಎಂಬ ಕನ್ನಡದ ಗಾದೆ ಮಾತೊಂದಿದೆ. ಮದುವೆಯೇನೋ ಹಾಗೂ ಹೀಗೂ ಕೆಲವು ಚಿಕ್ಕಪುಟ್ಟ ಕೊರತೆಗಳ ನಡುವೆಯೂ ಮಾಡಿ ಮುಗಿಸಿಬಿಡಬಹುದು. ಆದರೆ ಮನೆಯನ್ನು ಕಟ್ಟುವುದು ಹಾಗಾಗುವುದಿಲ್ಲ. ಅದು ಕಷ್ಟದ ಕೆಲಸ. ಎಲ್ಲವನ್ನೂ ತರ್ಕಬದ್ಧವಾಗಿ ಹೊಂದಿಸಬೇಕಾದ ಅನಿವಾರ್ಯತೆಯಿರುತ್ತದೆ. ಈ ನಿಟ್ಟಿನಲ್ಲ. ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ವೃತ್ತಿಪರರಾದ ವಾಸ್ತುಶಿಲ್ಪಿಗಳು, ಇಂಜಿನಿಯರ್ಗಳು, ಗುತ್ತಿಗೆದಾರರು ಹಾಗೂ ಮನೆಯನ್ನು ಕಟ್ಟುವ ಮಾಲೀಕರು ಹೀಗೆ ಪ್ರತಿಯೊಬ್ಬರಿಗೂ ಈ ಪುಸ್ತಕವು ಅತ್ಯಂತ ಉಪಯುಕ್ತವಾಗಿದೆ. ಇವರಿಗೆ ಶುಭವಾಗಲಿ. -ಎಸ್. ಶ್ಯಾಮಸುಂದರ್ ಆರ್ಕಿಟೆಕ್ಟ್, ಶಿವಮೊಗ್ಗ

₹495   ₹421

Buy Now
ಮಲೆನಾಡ ಅಜ್ಜಿ | Malenada Ajji

ಏನನ್ನೂ ಅಪೇಕ್ಷಿಸಿದ, ಯಾರನ್ನೂ ಉಪೇಕ್ಷಿಸದ ಈಕೆ ಅಪ್ಸರೆ. ಅಮರರಿಗೆ ಕಾಲದ ಹಂಗಿಲ್ಲ. ಹಾಗಾಗಿ ಭೂತ ಭವಿಷ್ಯತ್ತಿನ ಎಲ್ಲೆಗಳಿಲ್ಲ, ನಿರಂತರ ವರ್ತಮಾನ. ಕಾದದ್ದು ಊರ ಚೌಡಿಯಂತೆ, ಮುಟ್ಟಿದ್ದೆಲ್ಲಾ ಅಮೃತ, ಬೇಯಿಸಿದ ಅನ್ನ, ಕಾಯಿಸಿದ ಹಾಲು ಎಲ್ಲಾ ಹದ. ಕುದಿಯುತ್ತೆ; ಉಕ್ಕಲ್ಲ, ಕತ್ತಲ ಅಟ್ಟದ ಜಾಡಿಯ ಮಿಡಿ ಉಪ್ಪಿನಕಾಯಿಯೂ ವರ್ಷಗಳಾದರೂ ಕೆಡೊಲ್ಲ. ಉರಿಗಾರದ ಬಾಣಂತಿ ಲೇಹ್ಯ ಕೇವಲ ಅವಶ್ಯಕ ಕಾವನ್ನಷ್ಟೇ ಕೊಡುತ್ತೆ. ಆಷ್ಟ್ಯಾಕೆ ಸುತ್ತಲಿನ ನಿರ್ಲಿಪ್ತ ಗಾಳಿ ಕೂಡಾ ಅ೦ಟಿಕೊ೦ಡವರಿಗೆ ಉಸಿರಾಗುತ್ತೆ. ಓದಿ ಮುಗಿಸಿದೆ, ಮೈ ಮನ ತು೦ಬಿದೆ. ಭಾವೋದ್ವೇಗದಲ್ಲಿ ಅಲ್ಲಲ್ಲಿ ಉಕ್ಕಿದರೂ ಎಲ್ಲೆ ಮೀರಿ ಎಲ್ಲೂ ಚೆಲ್ಲಿಲ್ಲ. ಹಾಲು ಕುದ್ದು ನೀರು ಆವಿಯಾಗಿ ಅನುಭವದ ಸಾರ ಹೆಪ್ಪುಗಟ್ಟಿದಾಗ ಖಾಲಿತನ ಕಾಡಿದ್ದುಂಟು ಹೌದು ಆದರೆ ಅದನ್ನು ಮೀರಿದ ಪರಿಮಳ ಆವರಿಸಿದ್ದು ಸುಳ್ಳಲ್ಲ. -ಸೇತುರಾಂ

₹175   ₹140

Buy Now
ಮಹಾವಿನಾಶ | Mahavinasha

ಬುದ್ಧನ ಕಾಲಾನಂತರದ ಕಥೆಯುಳ್ಳ, ಹೆಚ್ಚು ಬಳಸಲ್ಪಡದ ಕಥಾವಸ್ತುವನ್ನು ಹೆಣೆದುಕೊಂಡು ಅಧ್ಯಯನದ ಮುಖಾಂತರವೇ ರಚಿಸಲ್ಪಟ್ಟ ಐತಿಹಾಸಿಕ ಕಾದಂಬರಿ ‘ಮಹಾವಿನಾಶ’. ಗೌತಮಬುದ್ಧನ ಪರಿನಿರ್ವಾಣದ ನಂತರದ ಕಾಲದಿಂದ ಮುಂದಿನ ಐದಾರು ನೂರು ವರ್ಷದ ಕಥಾ ಹಂದರವನ್ನು ಹೊಂದಿದೆ.

₹450   ₹383

Buy Now
ಮಹಿಳೆಯರಿಗೆ ಮಾತ್ರವಲ್ಲ! | Mahileyarige Matravalla!

ಮಹಿಳೆಯ ಮನಸ್ಸು ಮತ್ತು ಆ ಮನಸ್ಸನ್ನು ರೂಪಿಸುವ ಸಾಮಾಜಿಕ ಬೆಲೆ ಎರಡನ್ನೂ ಒಂದರೊಡನೊಂದು ಬೆಸೆದು ಬರೆದ ಹೊತ್ತಗೆ ಇದಾಗಿದೆ. ತಮ್ಮ ವೃತ್ತಿಯಲ್ಲಿ ಇದಿರಾದ ಹಲವಾರು ಸವಾಲುಳ್ಳ ಸಮಸ್ಯೆಗಳ ಸಿಕ್ಕುಗಳನ್ನು ಸಾವಧಾನದಿಂದ ಜಡಿಸುತ್ತಲೇ, ಇದೇಕೆ ಹೀಗೆ? ಎಂದು ಚಿಂತಿಸಿದ ಸೂಕ್ಷ್ಮ ಮನಸ್ಸಿನ ಫಲವೂ ಇದಾಗಿದೆ. ಈ ಕೃತಿಯುದ್ದಕ್ಕೂ ಮಹಿಳೆಯನ್ನು ನಿರ್ಬಂಧಿಸಿದ ಸಾಮಾಜಿಕ ರಚನೆಯಿಂದಾಗಿ ಅವಳ ಮನಷ್ಟೂ ಕೂಡಾ ಹೇಗೆ ನಿರ್ಬಂಧಕ್ಕೆ ಒಳಗಾಗಿದೆ ಮತ್ತು ಆಕೆಯೇ ಹೇಗೆ ಅದರಿಂದ ಹೊರಬರುವ ದಾರಿಯಿದ್ದರೂ ಸಂಕೋಲೆಯೊಳಗೇ ಅಡಗಿ ಕುಳಿತುಕೊಳ್ಳುತ್ತಾಳೆ ಎಂಬುದನ್ನು ಅನಾವರಣ ಮಾಡಲಾಗಿದೆ. -ಡಾ. ಸಬಿತಾ ಬನ್ನಾಡಿ

₹180   ₹153

Buy Now
ಮಾದಕ ದೊರೆ | Maadaka Dore

ಕೇವಲ ಮಾದಕ ವಸ್ತುಗಳ ಮಾರಾಟ ಮಾಡಿ ಕೋಟಿಗಟ್ಟಲೆ ಹಣ ಮಾಡಿರುವವರು ಇದ್ದಾರೆ. ಆದರೆ ಪಾಬ್ಲೊ ಕೇವಲ ಮಾದಕ ದೊರೆ ಮಾತ್ರ ಅಲ್ಲ. ಅವನ ಜನರ ಆರಾಧ್ಯ ದೈವ. ಅಮೆರಿಕ ಸರ್ಕಾರಕ್ಕೆ ತಲೆನೋವಾಗಿ… ಕೊನೆಗೆ ತನ್ನ ದೇಶದ ಮಕುಟವಿಲ್ಲದ ಮಹಾರಾಜನಾದ. ಪಾಬ್ಲೊನ ಗೆಳತಿಯರು… ಮಕ್ಕಳು… ಅವನ ದೊಡ್ಡ ವಿಲ್ಲಾ.. ಅವನನ್ನು ಹಿಡಿಯಲು ಪ್ರಯತ್ನಿಸಿದ ಅಧಿಕಾರಿಗಳು. ರೋಚಕ ನಿರೂಪಣೆ.

₹375   ₹319

Buy Now
ಮಾಯಾಗುಹೆ ಮತ್ತು ಇತರ ಮಕ್ಕಳ ಕತೆಗಳು | Maya Guhe Mattu Itara Makkala Kathegalu

ಮಕ್ಕಳ ಸಾಹಿತ್ಯ ರಚನೆಗೆ ಬೇಕಾದ ಮುಗ್ಧ ಮನಸ್ಥಿತಿ, ಆದರ್ಶಪ್ರಿಯತೆ ಮತ್ತು ಬೆರಗು ನಮ್ಗಳಲ್ಲಿ ಇನ್ನೂ ಕಲುಷಿತಗೊಳ್ಳದೇ ಹಾಗೆಯೇ ಉಳಿದುಕೊಂಡು ໙໐໖໖. ಜನಪದ ಕತೆಗಳ ಹಾಗೂ ಪ್ರಾಣಿ ಪ್ರಪಂಚದ ಕಥನಗಳ ಜಾಡಿನಲ್ಲಿ ನವ್ಯ ಇಲ್ಲಿನ ಕತೆಗಳನ್ನು ಬರೆದಂತೆ ತೋರಿದರೂ ಮನುಷ್ಯನಲ್ಲಿ ನೆಲೆಗೊಂಡಿರುವ ಕ್ರೌರ್ಯ, ದುರಾಸೆ, ಅಪ್ರಮಾಣಿಕತೆ ಮುಂತಾದೆ ಅಪಸವ್ಯಗಳ ಎದುರಿಗೆ ಬಾಲಕರು ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವ ಮಾದರಿಯನ್ನು ಇಲ್ಲಿನ ಕತೆಗಳು ನೀಡುತ್ತವೆ.

₹140   ₹112

Buy Now