#
nil
ಸ್ಪೇನಿನ ಮಣ್ಣಿಗೆ ಮಲ್ಲಿಗೆಯ ಕಂಪುಣಿಸಿ ಸ್ಪೇನನ್ನು ಬೆಳಗಿಸಿದ ಲೋರ್ಕಾ ಜಗತ್ತಿನ ವಿಸ್ಮಯ ಪ್ರತಿಭೆ. ರೂಪ, ಜಾಣೆ, ಎದೆಗೆ ರೆಕ್ಕೆ, ಜಲಪಾತದ ಮಿಂಚು- ಈ ಎಲ್ಲವೂ ಲೋರ್ಕಾನಲ್ಲಿ ಮೇಚ್ಚಿಸಿದಂತೆ ಬೇರೆ ಯಾರಲ್ಲೂ ನಾನು ಕಂಡಿಲ್ಲ. -ಪ್ಯಾಬ್ಲೊ ನೆರೂಡ ಪಿಕಾಸೋ ಮತ್ತು ಡಾಲಿಯ ಸರ್ರಿಯಲಿಸ್ಟಿಕ್ ಗ್ರಹಿಕೆಗಳು ಮತ್ತು ಅಬ್ಸರ್ಡ್ ನಾಟಕಗಳ ಅಸಂಗತ ರೂಪಕಗಳು, ನವ್ಯ ಕವಿಗಳ ಸಂಕೀರ್ಣ ಸೃಷ್ಟಿಗಳು ಎಲ್ಲವನ್ನೂ ಒಳಗೊಂಡ ಲೋರ್ಕಾನ ಕಾವ್ಯ ಮತ್ತು ನಾಟಕ ಇಪ್ಪತ್ತನೆಯ ಶತಮಾನದ ಅಚ್ಚರಿಗಳು. - ಪಿ. ಲಂಕೇಶ್ ಗೆಳೆಯರಾದ ಗಂಗಾಧರಯ್ಯ ಲೋರ್ಕಾನ ನಾಲ್ಕು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ರಂಗಭೂಮಿಯ ಸಾಧ್ಯತೆಯನ್ನು ಜೊತೆಗೆ ಅನುವಾದ ಸಾಧ್ಯತೆಯನ್ನು ಹಿಗ್ಗಿಸಿ, ಕನ್ನಡಕ್ಕೆ ಧೈರ್ಯ ತಂದಿದ್ದಾರೆ. - ನಟರಾಜ್ ಹೊನ್ನವಳ್ಳಿ
ಪ್ರತಿಭಾನ್ವಿತ ವಿಶ್ರಾಂತ ಶಿಕ್ಷಕಿಯಾಗಿರುವ ಶ್ರೀಮತಿ ಪುಷ್ಪಾ ಜೋಗಿಯವರು, ತಮ್ಮ ನಿವೃತ್ತಿಯ ನಂತರ, ತಾವು ಹಸ್ತ ಪ್ರತಿಯಲ್ಲಿ ಜೋಡಿಸಿಟ್ಟ ಬರಹಗಳನ್ನೆಲ್ಲಾ ಕೃತಿ ರೂಪದಲ್ಲಿ ಪ್ರಕಟಿಸಲಾರಂಭಿಸಿದ್ದಾರೆ. ಈಗಾಗಲೇ ಅವರು ಭಾವ ಲಹರಿ, ನಮ್ಮೂರ ಬೈಲಗುತ್ತು, ಐಸಿರದ ಬೂಡು, ಪಂಚ ಪುರ್ಪಗಳೆಂಬ ನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿ ಸಾಹಿತ್ಯ ಪ್ರಿಯರ ನಡುವೆ ಜನಾನುರಾಗಿಯಾಗಿದ್ದಾರೆ. ಸಂತೃಪ್ತಿ ನಾಟಕ ಕೃತಿಯು ಅವರ ಐದನೇ ಕೃತಿಯಾಗಿದೆ ಸಾಹಿತ್ಯ ಪ್ರಕಾರಗಳಲ್ಲಿ ನಾಟಕಕ್ಕೆ ಅದರದ್ದೇ ಆದ ಮಹತ್ವವಿದೆ. ಅವುಗಳು ರಂಗದಲ್ಲಿ ಅಭಿನಯಿಸಲ್ಪಟ್ಟಾಗ ಜನ ಮಾನಸದಲ್ಲಿ ಭದ್ರವಾಗಿ ನೆಲೆಯೂರುತ್ತದೆ.
ಈ ಕಿರುನಾಟಕಗಳ ವಿಶೇಷತೆ ಏನು ಗೊತ್ತಾ ? ಇದು 3ಡಿ. ಕೇವಲ ಓದಿಯೂ ಖುಷಿ ಪಡಬಹುದು. ರೇಡಿಯೋ ನಾಟಕವಾಗಿಸಿಯೂ ಖುಷಿ ಪಡಬಹುದು ಮತ್ತು ರಂಗದ ಮೇಲೆ ಆಡಿಯೂ ಖುಷಿ ಪಡಬಹುದು. ಕೆಲವೇ ಕೆಲವು ಪಾತ್ರಗಳಿರುವುದರಿಂದ ಆಡುವವರಿಗೂ ಸುಲಭ. ಅದರಲ್ಲೂ ಶಾಲೆ, ಕಾಲೇಜುಗಳಲ್ಲಿ ಆಡುವುದಕ್ಕೆ, ರಾಜ್ಯೋತ್ಸವಾದಿ ಸಮಾರಂಭಗಳಲ್ಲಿ ಪ್ರದರ್ಶಿಸುವುದಕ್ಕೆ ಹೇಳಿ ಮಾಡಿಸಿದ ಹಾಗಿದೆ. ಅಲ್ಲಲ್ಲ, ಹೇಳಿ ಬರೆಸಿದ ಹಾಗಿದೆ. ಡುಂಡಿರಾಜರ ಶೈಲಿಯ ಪರಿಚಯವಿದ್ದವರು ನಾಟಕಗಳಲ್ಲಿ ಅವರ ಪಂಡ್ಗಳನ್ನು ಗುರುತಿಸಬಹುದಾದರೂ, ಇದರಲ್ಲಿ ಒಂದು ಸರ್‌ಪ್ರೈಸ್ ಎಲಿಮೆಂಟ್ ಕೂಡಾ ಇದೆ. ಏನು ಗೊತ್ತಾ? ಇವರು ದ ಕ ಆದರೂ ಕೆಲವು ಪ್ರಹಸನಗಳಲ್ಲಿ ಉಕ ಆಗಿದ್ದಾರೆ. ಅಂದರೆ ಉತ್ತರ ಕರ್ನಾಟಕದ ಭಾಷೆ ಬಳಸಿರೋದರಿಂದ ಈ ನಾಟಕಗಳು ಅಲ್ಲಿಯೂ ಜನಪ್ರಿಯವಾಗುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ಇಡೀ ಕರ್ನಾಟಕಕ್ಕೆ ಸಲ್ಲುವ ನಾಟಕಗಳಿವು. "ಡಿವೈಡ್ ৬০মে ರೂಲ್" ಅಂತಾರಲ್ಲ? ಅದರಲ್ಲಿ ಡುಂಡಿರಾಜ್ ಸಿದ್ಧಹಸ್ತರು. "ಡಿವೈಡ್ ಅಂಡ್ ರೂಲ್" ಅಂದರೆ ಒಡೆದಾಳುವ ನೀತಿ. ಇವರದ್ದು "ಪದಗಳನ್ನು" ಒಡೆದು ಆಡುವ ರೀತಿ. ಅಲ್ಲದೆ ಹೊಸ ಹೊಸ ಪದಗಳನ್ನೂ ಕನ್ನಡ ಭಾಷೆಗೆ ಕಾಣಿಕೆಯಿತ್ತಿದ್ದಾರೆ. ಉದಾಹರಣೆಗೆ ಸಿನಿಮಹಾತ್ಮ, ಶೇಗ್ ಬಹದ್ದೂರ್, ಭಯವದನ, ಬರಿಯಪ್ಪ, ಮೋಸಪತ್ರಿಕೆ ಇತ್ಯಾದಿ.
Showing 61 to 77 of 77 results