| Category: | ಕನ್ನಡ |
| Sub Category: | ಕಾದಂಬರಿ |
| Author: | ಕಾರ್ತಿಕ್ ಹೆಗಡೆ | Karthik Hegade |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | 9789355 928986 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಶರಾವತಿ ಕಣಿವೆಯ ದಟ್ಟಡವಿಯೊಳಗೆ ಅಡಗಿರುವ 'ಸ್ವರ್ಣ ಬೆಟ್ಟ' ನಿಗೂಢತೆಯ ಕೋಟೆಯಾಗಿದೆ. ಸಾವಿರಾರು ವರ್ಷಗಳಿಂದ ನಾಗಸೇನ ಮಹಾರಾಜನ ಅಪಾರ ನಿಧಿಯ ನಂಬಿಕೆ ಇದರ ಸುತ್ತ ಹರಡಿದೆ. ಆದರೆ ಈ ನಿಧಿಯ ಹಾದಿ ಜೀವಂತ ನರಕ. ಬೆಟ್ಟವನ್ನು ತಲುಪಲು ಪ್ರಯತ್ನಿಸಿದವರು ಮರಳಿ ಬಂದಿಲ್ಲ ಎ೦ಬ ಊಹಾಪೋಹಗಳು ಪಾವನೂರು ಗ್ರಾಮವನ್ನು ಆವರಿಸಿವೆ. ಊರಿನ ಜನರಿಗೆ 'ಸ್ವರ್ಣ ಬೆಟ್ಟ' ಕೇವಲ ದೂರದಿಂದ ನೋಡುವ ಒಂದು ಭೀಕರ ದೃಶ್ಯವಷ್ಟೇ.
ಬಾಣಸಗೂರಿನ ಬೃಹತ್ ಬಂಡೆಯ ಹಿಂದೆ ಅಡಗಿರುವ ಆ ನಿಧಿದ್ದೀಪವನ್ನು ಅಜ್ಞಾತ ಶಕ್ತಿಗಳು ಕಾಯುತ್ತಿವೆ ಎಂಬುದು ಜನರ ಅಚಲ ನಂಬಿಕೆ. ಬೆಟ್ಟದ ಮೌನವನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ, ಇಲ್ಲಿಯವರೆಗೂ! ಆದರೆ ಆರು ದಿಟ್ಟ ವ್ಯಕ್ತಿಗಳು ಕತ್ತಲೆಯನ್ನು ಸೀಳಲು ಹೊರಟಿದ್ದಾರೆ: ತನಿಖಾ ಪತ್ರಕರ್ತ ಪ್ರದೀಪ್ ಬಾಲಯ್ಯ, ಗಂಭೀರ ಇನ್ಸ್ಪೆಕ್ಟರ್ ಸಮರ್, ಚಾಲಾಕಿ ಕಳ್ಳ ಭಾಸ್ಕರ, ರಹಸ್ಯಮಯಿ ಮೇನಕಾ, ಅರಣ್ಯ ರಕ್ಷಕ ಪ್ರಶಾಂತ ಮತ್ತು ಇತಿಹಾಸಕಾರ ಲಾರೆನ್ಸ್ ಪ್ರತಿಯೊಬ್ಬರಿಗೂ ಒಂದೇ ಗುರಿ – ಬೆಟ್ಟದ ಮೌನವನ್ನು ಭೇದಿಸುವುದು.
ಬೆಟ್ಟದ ತುದಿಯವರೆಗೂ ಹತ್ತಿದವರಿಗೆ ಸಿಕ್ಕಿದ್ದೇನು? ಸ್ವರ್ಣಬೆಟ್ಟದಲ್ಲಿ ನಿಧಿಯ ಕಾವಲಿಗೆ ಮಂತ್ರವಾದಿಗಳು ನಿಜಕ್ಕೂ ಇದ್ದಾರೆಯೇ? ರಾಜ ನಾಗಸೇನನ ಮರಣ ಕೇವಲ ದಾಖಲೆಗಳಲ್ಲಿನ ಸತ್ಯವೋ ಅಥವಾ ಕೇಳದ ಕರಾಳ ಕಥೆಯೋ?
ಈ ತಂಡ ಸತ್ಯಕ್ಕೆ ಹತ್ತಿರವಾದಷ್ಟೂ, ಅವರ ಜೀವಕ್ಕೆ ಅಪಾಯ ಹತ್ತಿರವಾಗುತ್ತದೆ. 'ಸ್ವರ್ಣ ಬೆಟ್ಟ' ನಿಜಕ್ಕೂ ನಿಧಿಯ ಸ್ಥಳವೋ, ಅಥವಾ ಯಾರೂ ಮರಳಿ ಬಾರದವರ ಗುಪ್ತ ಸಮಾಧಿಯೋ?!
ಕಾರ್ತಿಕ್ ಹೆಗಡೆ | Karthik Hegade |
0 average based on 0 reviews.