
Category: | ಕನ್ನಡ |
Sub Category: | ಕಾದಂಬರಿ |
Author: | ಡಾ ಕೆ ಎನ್ ಗಣೇಶಯ್ಯ | Dr K N Ganeshayya |
Publisher: | ಅಂಕಿತ ಪುಸ್ತಕ | Ankita Pustaka |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಹದಿನಾರನೇ ಶತಮಾನದ ಪೋರ್ಚುಗೀಸ್ ಯುದ್ಧಪರಿಣಿತನ ಬಗ್ಗೆ ಇತ್ತೀಚೆಗೆ ರಚಿಸಲಾಗಿರುವ ಒಂದು ಪ್ರಸಿದ್ಧ ಪ್ರೇಮಗೀತೆಯ ಸತ್ಯಾಸತ್ಯತೆಯನ್ನು ಸಂಶೋಧಿಸಲೆಂದು, ದೇಶದ ಸ್ನಾತಕೋತ್ತರ ವಿದ್ಯಾರ್ಥಿನಿ ಮಾರಿಯಾ, ಮೈಯನ್ಮಾರ್ ಬಂದಾಗ ಅಪರಿಚಿತ ಗುಂಪೊಂದು ಆಕೆಯನ್ನು ಅಪಹರಿಸುತ್ತದೆ.
ಪಲ್ಲವರ ರಾಜನಿಗೆ ಕಾಂಬೋಡಿಯಾದ ಬೈರ್ ಸಾಮ್ರಾಜ್ಯದ ರಾಜನೊಬ್ಬ ಕೊಡುಗೆಯಾಗಿ ಕಳುಹಿಸಿದ್ದ ಬಂಗಾರದ ರಥದ ಮೇಲೆ ಅಂತಾರಾಷ್ಟ್ರೀಯ ಕಳ್ಳರ ಗಮನ ಹರಿದಿರುವ ಸುದ್ದಿಯ ಹಿನ್ನೆಲೆಯಲ್ಲಿ ಭಾರತದ ಸರಕಾರ ಪೂಜಾಳನ್ನು ಒಂದು ರಹಸ್ಯ ಕಾರ್ಯಾಚರಣೆಗೆಂದು ಆಗ್ನೆಯ ಏಷ್ಯ ದೇಶಗಳಿಗೆ ಕಳುಹಿಸಲು ಅನುವಾಗುತ್ತದೆ.
ಅಷ್ಟರಲ್ಲಿ ಕಾಂಬೋಡಿಯಾದ ಕಾಡಿನಲ್ಲಿದ್ದ ಒಂದು ಪಗೋಡದಲ್ಲಿ ಹಲವು ಬೌದ್ಧಬಿಕ್ಕುಗಳ ಮಾರಣಹೋಮ ನಡೆದಿರುವ ಸುದ್ದಿ ಭಾರತದ ವಿದೇಶಾಂಗ ಕಚೇರಿಗೆ ತಲುಪುತ್ತದೆ. ಪರಿಣಾಮವಾಗಿ ಪೂಜಾಳ ಶೋಧದ ದಿಕ್ಕೇ ಬದಲಾಗುತ್ತದೆ.
ಆ ಎಲ್ಲಾ ಘಟನೆಗಳೂ ಭಾರತದಿಂದ ಪಯಣಿಸಿದ್ದ ಬುದ್ದನ ಅಭೂತಪೂರ್ವ ಶಿಲ್ಪವೊಂದರ ಚರಿತ್ರೆಯ ಬೆಸೆದುಕೊಂಡಿರುವ ಸತ್ಯ ತೆರೆದುಕೊಂಡಂತೆ, ಪೂಜಾ ಮತ್ತು ಮಾರಿಯಾ ಒಟ್ಟಾಗಿ ಅದರ ರಹಸ್ಯವನ್ನು ಭೇದಿಸತೊಡಗುತ್ತಾರೆ. ಆ ಹುಡುಕಾಟಗಳ ಮೂಲಕ ಭಾರತೀಯತೆಯ ಜಾಗತಿಕ ಪಯಣದ ಅದ್ಭುತ ಚರಿತ್ರೆ ಅನಾವರಣಗೊಳ್ಳುತ್ತದೆ.
ಕೆ.ಎನ್. ಗಣೇಶಯ್ಯ
ಡಾ ಕೆ ಎನ್ ಗಣೇಶಯ್ಯ | Dr K N Ganeshayya |
0 average based on 0 reviews.