| Category: | ಕನ್ನಡ |
| Sub Category: | ಕವನಗಳು |
| Author: | ಡಾ. ಶೈಲೇಶ್ ಕುಮಾರ್ ಎಸ್|Dr. Shailesh Kumar S |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | 9789354 696534 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಡಾ. ಶೈಲೇಶ್ ಇವತ್ತಿನ ದಿನಮಾನಗಳಲ್ಲಿ ಜೀವಪ್ರೇಮಕ್ಕೆ ಪ್ರೇಮ: ಹೊಲೆಯುವ ಕಲೆಗಾರ ಅನಿಸಿದ ಮನುಷ್ಯ, ಎದೆಯಲ್ಲಿ ವಿಷಯ ವಿಷಮ ತೀವ್ರತೆಯ ಮಂಥನವಾದವರಿಗೆ ಮಾತ್ರ ಇಷ್ಟು ನೀಳ್ ಕವಿತೆಗಳಲ್ಲೂ ಅಷ್ಟೊಂದು 'ಉಪಮೆಗಳನ್ನು ಕಟ್ಟಿ ಕೊಡಲು ಸಾಧ್ಯ.
'ಧ್ಯಾನಕ್ಕೆ ಅನುವಾದಿಸೋ ಅನುವಾದಕರು ಬೇಕಿದ್ದಾರೆ' ಸರಳತೆಯನ್ನೇ ಸೆರೆಮನೆಯಲ್ಲಿ ಇಟ್ಟಂತೆ ದೇವರ ಪಾದತಾಗಿ ಬಂದು -ಮನುಷ್ಯನ ಜಾತಿ ತೂಗುವುದು.
ಹೀಗೆ ತನ್ನ ಬದುಕಿನ ಕಾಣೆಯೆನ್ನೆಲ್ಲಾ ಕವಿತೆಯಾಗಿಸಿದ್ದಾರೆ. ಕಾವ್ಯ ಎಂದರೆ 'ಕಾಲದಂತೆ ಇದ್ದೇ ಇರುವುದು' ಎನ್ನುವಷ್ಟು ಸತ್ಯ ಶೋಧಕ ಗುಣವಿರುವ ಕವಿ. ಇವರು ವಿಭಿನ್ನತೆಯಲ್ಲಿ ಏಕತೆಯನ್ನು, ಈ ಸ್ಟೋಲಿಂಗ್ ಕಾಲ ಘಟ್ಟದಲ್ಲೂ ಶೂನ್ಯದ ನಿಲ್ದಾಣವನ್ನು ತನ್ನ ಕವಿತೆಗಳಲ್ಲಿ ಸಾಧಿಸಬಲ್ಲ ಜೀವಿ. ನಾವೆಲ್ಲರೂ 'ಡಿಜಿಟಲ್' ಆಗಿದ್ದೇವೆ. ಏನೇ ಹೇಳುವುದಿದ್ದರು 30 ಸೆಕೆಂಡುಗಳಲ್ಲಿ ಹೇಳಿ ಬಿಡಬೇಕು ಇಲ್ಲವಾದರೆ ಹೆಬ್ಬೆರಳು ಮೇಲಕ್ಕೆ ಒತ್ತುತ್ತದೆ ಎಂಬಂತಹ ತಕ್ಷಣದ ರಸವತ್ ರಸಾಯನಕ್ಕೆ ಬಲಿಯಾಗಿರುವ ಈ ಸಮೂಹಕ್ಕೆ ನಿಧಾನ ಮತ್ತು ಅನುಭವವೇ ಅಪರಿಚಿತವಾಗಿ ಹೋಗಿದೆ.
ಇನ್ನು ಅನುಭಾವವಂತೂ ಗುಂಪಿಗೆ ಸೇರದ ಪದ. 2025ರ ಕಾಲಘಟ್ಟದಲ್ಲಿ ಪ್ರಕಟವಾಗುತ್ತಿರುವ ಕವಿತ್ವದ ಹೊಲಿಗೆಯಲ್ಲಿ ಅನುಭಾವವಿದೆ. ಮತ್ತದು ನಿಮ್ಮ ಹೃದಯದ ಆಳವನ್ನು ಮೀರಿ ಹರಿಯುತ್ತದೆ.
ಶೈಲೇಶ್ ಈಗಾಗಲೇ ಪಠ್ಯವಾಗಿದ್ದಾರೆ ಪಥ್ಯವು ಆಗಿದ್ದಾರೆ. ನನಗಂತೂ ಈ ಕವಿ ಎಲ್ಲ ಹೃದಯಗಳನ್ನು ತಲುಪಲಿ ಎಂಬಾಸೆ.
ಬರೆಯುತ್ತಿರಿ, ಬೆರೆಯುತ್ತಿರಿ, ಬೆರೆಗಾಗುತ್ತಿರಿ. ಬಯಲಾಗುತ್ತಿರಿ..
ಚಕ್ರವರ್ತಿ ಚಂದ್ರಚೂಡ್
ಡಾ. ಶೈಲೇಶ್ ಕುಮಾರ್ ಎಸ್|Dr. Shailesh Kumar S |
0 average based on 0 reviews.