| Category: | ಕನ್ನಡ |
| Sub Category: | ಕವನಗಳು |
| Author: | ಸಮರ್ಥ್ | Samarth |
| Publisher: | ಸಮರ್ಥ್ ಪ್ರಕಾಶನ | Samarth Prakashana |
| Language: | Kannada |
| Number of pages : | 75 |
| Publication Year: | 2025 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಜೀವನದ ಅನುಭವಗಳನ್ನು ಲೋಕಾನುಭವಗಳ ಸಂವೇದನೆಗಳಾಗಿ ಮಾರ್ಪಡಿಸುವ ಕವಿಯ ಅಸಾಧಾರಣ ಶಕ್ತಿ ಸಮಾಜದ ಪ್ರತಿಬಿಂಬವಾಗಿ ಹೊರಹೊಮ್ಮುತ್ತದೆ. ಕವಿಗೆ ನುಡಿಯ ಮೇಲೆ ಅಭಿಮಾನದ ಜತೆಗೆ ಹಿಡಿತವೂ ಇರಬೇಕು. ಸೃಜನಶೀಲತೆಯ ಜತೆಗೆ ಸಾಮಾಜಿಕ ಕಳಕಳಿಯೂ ಇರಬೇಕು. ತನ್ನ ಕಾವ್ಯ ಬಳಪದ ಮೂಲಕ ಸಮಾಜವನ್ನು ತಿದ್ದಿತೀಡುವ ವ್ಯವಧಾನವೂ ಇರಬೇಕು. ಶ್ರದ್ಧೆಯ ಓದು ನಮ್ಮ ನಾಗರಿಕತೆ, ಸಂಸ್ಕೃತಿಯ ಅನುಭವಗಳು ಧ್ವನಿಪೂರ್ಣ ಕಾವ್ಯಗಳಾಗಿ ಪ್ರತಿಬಿಂಬಿಸಬೇಕು. ಅನುಭವ, ಪ್ರತಿಭೆ, ಸಂವಹನಗಳ ಪರಸ್ಪರ ವಿನಿಮಯಗಳ ಮೂಲಕ ರಸಭಾವ ತುಂಬಿದ ಲಕ್ಷ್ಯಾರ್ಥದ ಕಾವ್ಯ ಧ್ವನಿಸಬೇಕು. ಕಾವ್ಯ ಕವಿಯ ಆತ್ಮಕಥನವಲ್ಲ. ಕವಿತೆ ಅನುಭವಗಳನ್ನು ಹಿಡಿದಿಟ್ಟುಕೊಳ್ಳಲಾಗದೆ ಸಮಾಜಕ್ಕೆ ತೇಲಿ ಬಿಡುವ ಗಟ್ಟಿಯಾದ ಅಭಿವ್ಯಕ್ತಿಗಳು. ನಮ್ಮ ಕಣ್ಣ ಮುಂದಿನ ತಲ್ಲಣಗಳನ್ನು ಸಾಹಿತಿ ಬರವಣಿಗೆಯ ಮೂಲಕ ತೋಡಿಕೊಳ್ಳುತ್ತಾನೆ. ಇದು ನಿಲ್ಲದ ಹೊಸತನದ ಅಭಿವ್ಯಕ್ತಿ. ಹಿರಿಯರ ಕಾವ್ಯಗಳನ್ನು ಓದಿ, ಅನುಭವಿಸಿ ಭವಿಷ್ಯದ ಪೀಳಿಗೆಗಾಗಿ ನಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು.
ಆ ನಿಟ್ಟಿನಲ್ಲಿ ನವ ಕವಿ ಸಮರ್ಥ್ ತಮ್ಮ ಕವನಗಳ ಮೂಲಕ ಹೊಸದಾದ ಅಭಿವ್ಯಕ್ತಿಯೊಂದನ್ನು ಕಾವ್ಯಪ್ರಿಯರ ಮುಂದಿಡುವ ಪ್ರಯತ್ನವನ್ನು ಮಾಡಿದ್ದಾರೆ. ಮೂಲತಃ ಇತಿಹಾಸ ವಿದ್ಯಾರ್ಥಿಯಾದ ಅವರನ್ನು ಸಾಹಿತ್ಯ ತನ್ನತ್ತ ಸೆಳೆದುಕೊಂಡಿರುವುದೇ ಅಚ್ಚರಿ. ಅವರ ಬಹುತೇಕ ಕವನಗಳು ಅವರ ಚೊಚ್ಚಲ ಪ್ರಯತ್ನದ ನಿರೂಪಣೆಯ ಜೊತೆಗೆ ಅವರ ಭವಿತವ್ಯಕ್ಕೆ ಹಿಡಿದ ಕನ್ನಡಿಯಾಗಿಯೂ ಪ್ರತಿಬಿಂಬಿಸುತ್ತಿವೆ. ಅವರ ಓದು ಮತ್ತಷ್ಟು ವಿಸ್ತಾರಗೊಳ್ಳಲಿ.. ಅವರ ಸಾಹಿತ್ಯ ಪ್ರೀತಿಯೂ ಇನ್ನಷ್ಟು ಹಬ್ಬಲಿ. ಕನ್ನಡ ಸಾಹಿತ್ಯಕ್ಕೆ ಮತ್ತೊಬ್ಬ ಕವಿಯನ್ನು ಬರಮಾಡಿಕೊಳ್ಳುವಾ..
ಸಚಿನ್ ಕೃಷ್ಣ
ಸಮರ್ಥ್ | Samarth |
0 average based on 0 reviews.