| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಹಳ್ಳಿ ವೆಂಕಟೇಶ್ | Halli Venkatesh |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | 9789356 351295 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕತೆ ಹುಟ್ಟುವುದಕ್ಕೆ ಪ್ರದೇಶ ಮತ್ತು ಭಾಷೆಯ ಗಡಿಗಳಿಲ್ಲ. ಅರಭಿಯನ್ ನೈಟ್ಸ್ ಕತೆಗಳಿಂದ ಸಾಗಿ ಅತ್ಯಾಧುನಿಕ ಕತಾತಂತ್ರಗಳನ್ನು ರೂಢಿಸಿಕೊಂಡು ಇಪ್ಪತ್ತೊಂದನೇ ಶತಮಾನದಲ್ಲೂ ಮುಂದೆ ಸಾಗುತ್ತಿದ್ದೇವೆ.
ಕತೆಗಾರನಿಗೆ ದಕ್ಕುವ ನೈಜ ಘಟನೆಗಳನ್ನು ಅನುಭವ ಜನ್ಯವಾಗಿಸಿಕೊಂಡು ತನ್ನ ಮನದ ಕುಲುಮೆಯಲ್ಲಿ ಕಾಯಿಸಿ, ಕಾಡಿಸಿ ಬರೆಸಿಕೊಂಡ ವಸ್ತುಗಳು ಯಶಸ್ವಿ ಕತೆಗಳಾಗಿ ರೂಪುಗೊಳ್ಳುತ್ತವೆ. ಅಂತಹ ಕತೆಗಳು ಸಹೃದಯನ ಹೃದಯಕ್ಕೂ ವೇದ್ಯವಾಗುತ್ತವೆ.
ಹೊಸ ಆಲೋಚನೆ, ಸರಳ ಮತ್ತು ವಿಶೇಷವೆನಿಸಬಹುದಾದ ಭಾಷೆಯನ್ನು ಬಳಸಿಕೊಂಡು ನಮ್ಮ ಸಮಾಜದ ನಡುವೆ ನಡೆಯುವ ಘಟನೆಗಳನ್ನು ಕತೆಯಾಗಿಸಿರುವ ಹಳ್ಳಿವೆಂಕಟೇಶ್ ಅವರು ತಮ್ಮ ಮೊದಲ ಕಥಾಸಂಕಲನ 'ಮುಟ್ಟಾಗದ ನಕ್ಷತ್ರ' ದಲ್ಲಿ ವಿಭಿನ್ನವೆನಿಸುವ ವಸ್ತು, ವಿಷಯಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಸೃಜನಾತ್ಮಕತೆಯ ಹೊಸ ಜಾಡನ್ನು ಹಿಡಿದಿದ್ದಾರೆ. ಇಲ್ಲಿನ ಕತೆಗಳು ಓದಿಸಿಕೊಳ್ಳುತ್ತಲೇ ನಮ್ಮನ್ನು ಅವರಿಸಿಕೊಳ್ಳುತ್ತವೆ. ಈ ಸಂಕಲನದಲ್ಲಿರುವ ಜೋಗಪ್ಪನ ಮಠ, ಚಿರತೆ, ಪಿಂಚಣಿ, ಕೋಮು, ಮುಂತಾದ ಕತೆಗಳು ನಮ್ಮನ್ನು ಕಾಡುತ್ತವೆ. ಕಾಲ-ದೇಶಗಳನ್ನು ಮೀರಿ ನಿಲ್ಲುವ ಸಂಗತಿಗಳು ಇಲ್ಲಿವೆ. ಕನ್ನಡಕ್ಕೆ ಒಬ್ಬ ಭರವಸೆಯ ಕತೆಗಾರ ಹುಟ್ಟಿಕೊಂಡಿರುವ ಲಕ್ಷಣ ಕಾಣಿಸುತ್ತಿದೆ.
ಪ್ರೊ. ಎಂ.ಶಂಕರ
ವಿಮರ್ಶಕರು, ಮೈಸೂರು
ಹಳ್ಳಿ ವೆಂಕಟೇಶ್ | Halli Venkatesh |
0 average based on 0 reviews.