
ಬುದ್ಧನ ಕಾಲಾನಂತರದ ಕಥೆಯುಳ್ಳ, ಹೆಚ್ಚು ಬಳಸಲ್ಪಡದ ಕಥಾವಸ್ತುವನ್ನು ಹೆಣೆದುಕೊಂಡು ಅಧ್ಯಯನದ ಮುಖಾಂತರವೇ ರಚಿಸಲ್ಪಟ್ಟ ಐತಿಹಾಸಿಕ ಕಾದಂಬರಿ ‘ಮಹಾವಿನಾಶ’. ಗೌತಮಬುದ್ಧನ ಪರಿನಿರ್ವಾಣದ ನಂತರದ ಕಾಲದಿಂದ ಮುಂದಿನ ಐದಾರು ನೂರು ವರ್ಷದ ಕಥಾ ಹಂದರವನ್ನು ಹೊಂದಿದೆ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ಲಕ್ಷ್ಮಣ ಕೌಂಟೆ | Lakshmana Kaunte |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | 9788197200632 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಗೌತಮ ಬುದ್ಧನ ಕುರಿತು ನಾನು ರಚಿಸಿದ 'ಮಹಾಕಾರುಣಿಕ' ದ ಮುಂದುವರಿಕೆಯಾಗಿ ಬರೆದ ಇನ್ನೊಂದು ಸ್ವತಂತ್ರ ಐತಿಹಾಸಿಕ ಕಾದಂಬರಿ 'ಮಹಾವಿನಾಶ'. ಇದು ಮೌರ್ಯ ವಂಶದ ಉತ್ಕರ್ಷ ಮತ್ತು ಅವನತಿಯನ್ನು ವಿಸ್ತಾರವಾಗಿ ಹೇಳುತ್ತದೆ. ಅಲೆಕ್ಸಾಂಡರನ ಭಾರತದ ಮೇಲಿನ ದಂಡಯಾತ್ರೆ, ಚಂದ್ರಗುಪ್ತ ಮೌರ್ಯನ ಪರಾಕ್ರಮ, ತದನಂತರದಲ್ಲಿ ಸಿಂಹಾಸನವನ್ನು ದಕ್ಕಿಸಿಕೊಂಡ ಅಶೋಕನ ಕ್ರೌರ್ಯ, ಕಳಿಂಗ ಯುದ್ಧದ ನಂತರ ಅವನಲ್ಲಾದ ಮನಃಪರಿವರ್ತನೆ, ಬೌದ್ಧಧರ್ಮದ ಪ್ರಭಾವ, ಭರತ ಖಂಡದ ಉದ್ದಗಲಕ್ಕೂ, ವಿದೇಶಗಳಲ್ಲೂ ಆ ಧರ್ಮದ ಪ್ರಚಾರ ಮೊದಲಾದವುಗಳ ಕುರಿತೂ ಈ ಕೃತಿ ಹೇಳುತ್ತದೆ. ಆನಂತರದಲ್ಲಿ ರಾಜಸತ್ತೆಯಲ್ಲಿ ಉಂಟಾದ ಏಳುಬೀಳುಗಳು, ಅಶೋಕನ ನಂತರ ಸಿಂಹಾಸನವನ್ನೇರಿದ ಮೌರ್ಯರ ಕೆಲವು ದುರ್ಬಲ ದೊರೆಗಳು, ಕೊನೆಯ ದೊರೆ ಬ್ರಹದೃಥನನ್ನು ಅವನ ಸೇನಾಪತಿ ಪುಷ್ಯಮಿತ್ರ ಶುಂಗನೇ ಹತ್ಯೆ ಮಾಡಿದ್ದು, ಮನುಸ್ಮೃತಿಯ ರಚನೆ ನಡೆದದ್ದು ಮುಂತಾದ ಘಟನೆಗಳನ್ನು ಈ ಕಾದಂಬರಿ ಕಣ್ಣಿಗೆ ಕಟ್ಟುವ ಹಾಗೆ ಕಟ್ಟಿಕೊಡುತ್ತದೆ.
ಲಕ್ಷ್ಮಣ ಕೌಂಟೆ | Lakshmana Kaunte |
0 average based on 0 reviews.