Delivery between 2-8 Days
No returns accepted. Please refer our full policy
Your payments are 100% secure
ಸೋಮದೇವನ ಪದ್ಯಕಾವ್ಯ ..ಕಥಾಸರಿತ್ಸಾಗರ.. ಪ್ರಪಂಚದ ಹಲವು ಭಾಷೆಗಳಿಗೆಲ್ಲಾ ಭಾಷಾಂತರವಾಗಿ ಕಥಾಶಾಸ್ತ್ರ ವ್ಯಾಸಂಗಕ್ಕೆ ಸಾಧನವಾಗಿದೆ. ಕಥೆಗಳೆಂಬ ನದಿಗಳು ಬಂದು ಸೇರಿ ಆಗಿರುವ ಸಾಗರವೇ ..ಕಥಾಸರಿತ್ಸಾಗರ.., ..ಕಥಾಮೃತ.. ಅದರ ಸಂಗ್ರಹರೂಪ. ..ಕಥಾಮೃತ.. ದಲ್ಲಿ ಬೇಕಾದಷ್ಟು ಕಥೆಗಳಿವೆ, ಎಲ್ಲ ವಯಸ್ಸಿನ, ಎಲ್ಲ ಸಂಸ್ಕಾರಗಳ, ಎಲ್ಲ ರುಚಿಗಳ ಜನರಿಗೂ ಪ್ರಿಯವಾಗುವ, ಹಿತವಾಗುವ ಕಥೆಗಳಿವೆ. ಇದು ಪ್ರಾಚೀನ ಭರತ ಖಂಡದ ಅತ್ಯುತ್ತಮ ಕಥೆಗಳ - ನೂರಾರು ಕಥೆಗಳ - ಭಂಡಾರ. ಹೊಸಗನ್ನಡ ಸಾಹಿತ್ಯದ ಅಶ್ವಿನೀದೇವತೆಗಳಲ್ಲೊಬ್ಬರೆಂದು ಖ್ಯಾತರಾಗಿರುವ ಡಾ. ಎ. ಆರ್. ಕೃಷ್ಣಶಾಸ್ತ್ರಿ ಅವರ ..ಕಥಾಮೃತ.. ಕನ್ನಡ ಗದ್ಯಸಾಹಿತ್ಯಕ್ಕೊಂದು ವಿಶಿಷ್ಟ ಕೊಡುಗೆ, ಕನ್ನಡದ ಚಿರಕೃತಿಗಳಲ್ಲೊಂದು.
Krishna Shastry A R |
0 average based on 0 reviews.