ಪ್ರದೀಪ್ ಈಶ್ವರ್

ಪ್ರದೀಪ್ ಈಶ್ವರ್ ಅವರ ಹುಟ್ಟೂರು ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೆಸಂದ್ರ.ಅವರೇ ಹೇಳುವಂತೆ ಕಲಿತ ವಿಶ್ವವಿದ್ಯಾಲಯದ ಹೆಸರು ಬಡತನ. ಅದ್ಭುತಗಳನ್ನು ಸಾಧಿಸಲು ಪ್ರೇರೇಪಿಸಿದ್ದು ಒಡೆದ ಹೃದಯ. ಸಾವಿರಾರು ಪಾಠ ಕಲಿಯಲು ಸ್ಫೂರ್ತಿಯಾಗಿದ್ದು ಖಾಲಿ ಹೊಟ್ಟೆ. ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಭವಿಷ್ಯದ ವೈದ್ಯರ ಬದುಕನ್ನು ಬದಲಿಸುವ ನೀಟ್ ತರಬೇತಿಯನ್ನು ಪ್ರಾರಂಭಿಸಿದ್ದಾರೆ.
ಹಳ್ಳಿ-ಗ್ರಾಮೀಣ ಭಾಗದಿಂದ ಬಂದ ವಿಶೇಷವಾಗಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವೈದ್ಯರನ್ನಾಗಿ ಮಾಡಬೇಕೆಂಬುದು ಇವರ ಆಶಯ. ಇದುವರೆಗೂ ಮೂರು ಸಾವಿರ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ. ಇದುವರೆಗೂ ಹದಿನಾಲ್ಕು ಪುಸ್ತಕ ಬರೆದಿದ್ದಾರೆ.