ನಾಗೇಶ್ ಕುಮಾರ್ ಸಿ ಎಸ್

ನಾಗೇಶ್ ಕುಮಾರ್ ಸಿ ಎಸ್ ಅವರು ಹುಟ್ಟಾ ಬೆಂಗಳೂರಿನವರಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರು. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದಾರೆ , ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರು ಹವ್ಯಾಸಿ ಕನ್ನಡ ಮತ್ತು ಇಂಗ್ಲೀಷ್ ಬರಹಗಾರರು.

ಇದುವರೆಗೂ 12 ಸಣ್ಣ ಕತೆಗಳನ್ನೂ, 4 ಕಿರು ಕಾದಂಬರಿಗಳನ್ನೂ ರಚಿಸಿ ತರಂಗ, ತುಷಾರ, ಉತ್ಥಾನ, ಸುಧಾ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ.