ಡಾ ಜಿ ಬಿ ಹರೀಶ್

ಡಾ. ಜಿ. ಬಿ. ಹರೀಶ ಹುಟ್ಟಿದ್ದು 1975ರಲ್ಲಿ, ಹಾಸನದಲ್ಲಿ ಎಂಎ, ಎಂಬಿಎ ಮತ್ತು ಪಿಎಚ್‌ಡಿ ಪದವೀಧರರು. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡಅಧ್ಯಾಪಕರಾಗಿ, ಕರ್ನಾಟಕ ಜ್ಞಾನ ಆಯೋಗದ ಕಣಜದ ಸಂಶೋಧನಾಧಿಕಾರಿಯಾಗಿ, ತುಮಕೂರು ವಿವಿಯ ಡಿ. ವಿ. ಗುಂಡಪ್ಪ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, “ಪ್ರಜಾವಾಣಿ”ಯ ಮುಖ್ಯ ಉಪಸಂಪಾದಕರಾಗಿ, “ವಿಜಯವಾಣಿ”ಯ ಸಂಪಾದಕೀಯ ಸಲಹೆಗಾರರಾಗಿ ಸೇವೆ. ಮೂರು ವರ್ಷ ವಿಯೆಟ್ನಾಂನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರ ಜವಾಬ್ದಾರಿ, ಭಾರತೀಯ ರಾಜದೂತವಾಸದಲ್ಲಿ ಸೇವಾನುಭವ.
ಡಾ. ಜಿ. ಬಿ. ಹರೀಶ, ದಿ ಮಿಥಿಕ್ ಸೊಸೈಟಿಯಿಂದ ‘ಶತಮಾನದ ಕಿರಿಯ ಸಂಶೋಧಕ” ಗೌರವಕ್ಕೆ ಪಾತ್ರರಾಗಿದ್ದಾರೆ. “ಆನಂದ ಕುಮಾರಸ್ವಾಮಿ” ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ “ಪುಸ್ತಕ ಬಹುಮಾನ ಪಡೆದಿದ್ದಾರೆ. ರಾಷ್ಟ್ರಾಧ್ಯಕ್ಷರು ಕೊಡಮಾಡುವ ಬಾದರಾಯಣ ವ್ಯಾಸಸಮ್ಮಾನ್ ಎಂಬ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರು (2018).
ಎನ್ನಂತರಂಗದ ಆತುಮ, ಸೂಜಿಮೊನೆ, ಆಕಾಶಕ್ಕೆ ಆಶ್ಚರ್ಯ, ಸ್ವಾಮಿ ವಿವೇಕಾನಂದ, ಟಿ. ವಿ. ಕಪಾಲಿಶಾಸ್ತ್ರೀ, ದೇವಚಂದ್ರನ ಭಾಷೆ-ಸಂಸ್ಕೃತಿ, ವಿಶ್ವಸಂಸ್ಕೃತಿಯ ಹರಿಕಾರ ಆನಂದ ಕುಮಾರಸ್ವಾಮಿ, ಎಸ್‌. ಕೆ. ರಾಮಚಂದ್ರ ರಾವ್ ಮೊದಲಾದ ಹಲವು ಕೃತಿಗಳ ಕರ್ತೃ. ಡಾ. ಶಂಕರ ಮೊಕಾಶಿ ಪುಣೇಕರ ಹಾಗೂ ಪಂಡಿತ ದೀನದಯಾಳ್ ಉಪಾಧ್ಯಾಯರ ಸಮಗ್ರ ಸಾಹಿತ್ಯದ ಸಂಪಾದಕರು. ವೀರ್ ಸಾವರ್ಕರ್ ರಚಿತ “ಹಿಂದುತ್ವ’ದ ಅನುವಾದಕರು. ಕನ್ನಡದ ಪ್ರಸಕ್ತ ಬೌದ್ಧಿಕ ವಲಯದಲ್ಲಿ ಅತ್ಯಂತ ಪ್ರಖರ ಚಿಂತಕರೆಂದು ಗುರುತಿಸಿಕೊಂಡಿರುವ ಡಾ. ಹರೀಶರ ವಾಗಿತೆಯನ್ನು ಯೂಟ್ಯೂಬ್‌ನ ಹಲವು ವಿಡಿಯೋಗಳಲ್ಲಿ ನೋಡಬಹುದು.