ಸಬಿತಾ ಬನ್ನಾಡಿ

ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರ ಪ್ರಜಾವಾಣಿಯಲ್ಲಿ ಅನಿಯಮಿತ ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಸಬಿತಾ ಅವರ ಪ್ರಕಟಿತ ಕೃತಿಗಳು- ಸಾಹಿತ್ಯ ನಿರೂಪಣೆಗಳ (ವಿಮರ್ಶಾ ಲೇಖನ), ಆಲಯವು ಬಯಲಾಗಿ (ಸಂಶೋಧನೆ), ನಿರಿಗೆ – (ಕವಿತಾ ಸಂಕಲನ), ಗೂಡು ಮತ್ತು ಆಕಾಶ – (ಅಂಕಣ ಬರಹ) ಅವಳ ಕಾವ್ಯ (ಸಂಪಾದನೆ), ಭಾಷೆ-ಬಳಕೆ, ಸಾಹಿತ್ಯ ಸಂಕಥನ – ಪಠ್ಯ ಪುಸ್ತಕ ಸಂಪಾದನೆ, ಅನುವಾದ: ಅಂಬೇಡ್ಕರ್ ಬದುಕು – ಹೋರಾಟ. ಪತ್ರಿಕೆಗಳು ಹಾಗೂ ಸಂಕಲನಗಳಲ್ಲಿ ಸಬಿತಾ ಬನ್ನಾಡಿ ಅವರ 50ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.
ಇವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ಕಿ ಕಾವ್ಯ ಪ್ರಶಸ್ತಿ, ಬೆಂಗಳೂರಿನ ಅತ್ತಿಮಬ್ಬೆ ಟ್ರಸ್ಟ್ ನ ಪುಸ್ತಕ ಪ್ರಶಸ್ತಿಗಳು ಲಭಿಸಿವೆ.