ಸತೀಶ್ ಚಪ್ಪರಿಕೆ

ಕಥೆಗಾರ, ಲೇಖಕ, ಪತ್ರಕರ್ತ ಸತೀಶ್ ಚಪ್ಪರಿಕೆ ಮೂಲತಃ ಕುಂದಾಪುರ ತಾಲೂಕಿನ ಕುಗ್ರಾಮ ಚಪ್ಪರಿಕೆಯವರು, ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ -ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಎರಡೂವರೆ ದಶಕಗಳ ಸೇವೆ ಸಲ್ಲಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ‘ಬ್ರಿಟಿಷ್ ಶಿಲ್ಡಿಂಗ್ ಸ್ಕಾಲ‌ ಪಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆ ಇವರದ್ದು. ‘ಫಬೆರ್ಂಡನ್‌ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್’ ಎಂಬ ಅಂತರ್ ರಾಷ್ಟ್ರೀಯ ಮಟ್ಟದ ಕಂಪನಿಯ ಸಂಸಾಪಕ – ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ‘ಕಾಗ್ನಿಕ್ವೆಸ್ಟ್ ಟೆಕ್ನಾಲಜೀಸ್’ ಮತ್ತು ‘ಬುಕ್ ಬ್ರಹ್ಮ’ ಸಂಸ್ಥೆಯ ಸಹ – ಸಂಸ್ಥಾಪಕರು ಕೂಡ, ಕಾರ್ಪೋರೇಟ್ ಜಗತ್ತಿನ ಆಳದಲ್ಲಿ ಮುಳುಗಿದ್ದರೂ ಸಾಹಿತ್ಯ ಇವರ ಉಸಿರು, 1990ರ ದಶಕದಲ್ಲಿ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವ ಮೂಲಕ ಕನ್ನಡ ಸಾಹಿತ್ಯ ಲೋಕ ಪ್ರವೇಶಿಸಿದ ಇವರ ‘ಬೇರು” ಮತ್ತು ‘ವರ್ಜಿನ್ ಮೊಹಿತೆ’ ಕಥಾ ಸಂಕಲನಗಳು ಪ್ರಕಟವಾಗಿವೆ. ‘ಜೇಮ್ಸ್ ತಟದ ತವಕ ತಲ್ಲಣ’ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪ್ರಾಪ್ತವಾಗಿದೆ. ‘ಘಾಂದ್ರುಕ್’ ಇವರ ಚೊಚ್ಚಲ ಕಾದಂಬರಿ,