ನೇಮಿಚಂದ್ರ

ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಲೇಖಕಿ, ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿ ಕೊಂಡವರು, ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ, ಪ್ರವಾಸಾಸಕ್ತ ಸಾಹಸಿ, ಕತೆಗಾರ್ತಿಯಾಗಿ, ಅಂಕಣಕಾರ್ತಿಯಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು’, ‘ಸಾವೇ, ಬರುವುದಿದ್ದರೆ ನಾಳೆ ಬಾ !’ (ಬದುಕು ಬದಲಿಸಬಹುದು, ಭಾಗ – 2), ‘ನೋವಿಗದ್ದಿದ ಕುಂಚ’, ‘ಪೆರುವಿನ ಪವಿತ್ರ ಕಣಿವೆಯಲ್ಲಿ’, ‘ಯಾದ್ ವಶೇಮ್’, ‘ದುಡಿವ ಹಾದಿಯಲಿ ಜೊತೆಯಾಗಿ’, ‘ಕಾಲುಹಾದಿಯ ಕೋಲ್ಕಿಂಚುಗಳು – ಮಹಿಳಾ ವಿಜ್ಞಾನಿಗಳು’, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು’ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
ನವಕರ್ನಾಟಕದ ವಿಶ್ವಮಾನ್ಯರು ಮಾಲಿಕೆಯಲ್ಲಿ ಇವರ ‘ಜೇನ್ ಗುಡಾಲ್’, ‘ಹಾಮಸ್ ಆಲ್ವಾ ಎಡಿಸನ್’, ‘ಮೊಹಮ್ಮದ್ ದಿಲಾವರ್’, ‘ಡಾ॥ ಈಡಾ ಸೈಡರ್’ ಕೃತಿಗಳು ಪ್ರಕಟವಾಗಿವೆ.