ಗ.ನಾ. ಭಟ್ಟ

ಗ.ನಾ. ಭಟ್ಟರು ಉತ್ತರ ಕನ್ನಡ ಜಿಲ್ಲೆ, ಶಿರಸಿಯ ಓಣಿಕೈಯವರು, ಇವರು ಸಂಸ್ಕೃತ ವಿದ್ವತ್ತು ಮತ್ತು ಸಂಸ್ಕೃತದಲ್ಲಿ ಎಂ.ಎ. ಸ್ನಾತಕೋತರ ಪದವಿಯನ್ನು ಪಡೆದಿದ್ದಾರೆ. ಮೂವತ್ತೊಂದು ವರ್ಷಗಳ ಕಾಲ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಬೋಧಕರಾಗಿ, ಸಹಾಯಕ ಸಂಶೋಧಕರಾಗಿ ಬೇರೆ ಬೇರೆ ಸಂಸ್ಥೆಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ.