nil
#
ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ. ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ. ఇంగ్లీష్ ಸಾಹಿತ್ಯದಲ್ಲಿ ಇರಬಹುದಾದ ಇಂಥ ಕಥಾನಕಗಳು ಕನ್ನಡದಲ್ಲಿ ಅಪರೂಪ. ಎಸ್ಟೇಟ್ ಮಧ್ಯದ ಸಿರಿವಂತರ ಬದುಕಿನ ನಿಗೂಢ ಘಟನೆಯೊಂದನ್ನು ನಾದಾ ಅವರು ರೋಚಕವಾಗಿ ಹೆಣೆದಿದ್ದಾರೆ. ಎಸ್ಟೇಟು ಬಂಗಲೆಯಲ್ಲಿ ನಡೆಯುವ ಈ ಕಥೆಯು ಪ್ರೀತಿ, ದ್ವೇಷ, ಅಸೂಯೆ, ವಂಚನೆ ಮುಂತಾದ ಹಲವು ಭಾವಗಳ ಸಮ್ಮಿಲನವಾಗಿದೆ. ವಿನಾಕಾರಣ ಕೊಲೆಯಾಗುವ ಓರ್ವ ಅಮಾಯಕ ಹೆಣ್ಣಿನ ಮನಸ್ಸನ್ನು ಆರ್ಥೈಸಲಾಗದೆ ಆಕೆಯ ಭಾವನೆಗಳ ಮೌಲ್ಯವನ್ನು ತಿಪ್ಪೆಗೆಸೆಯುವ ಕ್ರೌರ್ಯ ತಮ್ಮ ಜನ್ಮಸಿದ್ದ ಹಕ್ಕು ಎಂಬಂತೆ ವರ್ತಿಸುವ ಪುರುಷ ಸಮಾಜವನ್ನು ಈ ಕಾದಂಬರಿ ನಿಕಷಕ್ಕೊಡ್ಡುತ್ತದೆ. ಕೊಡಗಿನ ಪ್ರಾಕೃತಿಕ ರಮಣೀಯತೆ ಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವುದು ಈ ಕಾದಂಬರಿಯ ಮತ್ತೊಂದು ವಿಶೇಷ. ಕರಾವಳಿ ತೀರದ ನಾದಾ ಅವರ ಈ ಕಾದಂಬರಿ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಅನುಪಮ ಕೊಡುಗೆ. ಟಿ.ಎಸ್. ದಕ್ಷಿಣಾಮೂರ್ತಿ
NA
ಎಚ್ ಡುಂಡಿರಾಜ್
ಟಿ ಎಂ ಈಶ್ವರ್ ಸಿಂಗ್
ಟಿ ಶ್ರೀನಿವಾಸ
ಬಸವರಾಜ್ ಹಳ್ಳೂರ್ ಕಲಕೇರಿ
Showing 1141 to 1170 of 5522 results